ರೇಖೌಲಿ (ಉತ್ತರಾಖಂಡ):ಕೆಲವೊಮ್ಮೆ ಯಾರೂ ಅರಿಯದ ನಿಗೂಢ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನಿಗೂಢ ಘಟನೆ ಇದೀಗ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ರೇಖೌಲಿಯಲ್ಲಿ ನಡೆದಿದೆ. ಇಲ್ಲಿಯ ಜೂನಿಯರ್ ಹೈಸ್ಕೂಲ್​ನಲ್ಲಿ ವಿದ್ಯಾರ್ಥಿನಿಯರು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಮೈಮೇಲೆ ದೆವ್ವ ಬರುತ್ತಿದೆ ಎಂದು ಹೇಳಲಾಗುತ್ತಿದೆ!
ಎರಡು ದಿನಗಳಿಂದ ಈ ಘಟನೆ ನಡೆಯುತ್ತಿದೆ. ವಿದ್ಯಾರ್ಥಿನಿಯರು ಶಾಲೆಗೆ ಬರುವ ಮುನ್ನ ಚೆನ್ನಾಗಿಯೇ ಇರುತ್ತಾರೆ. ಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಅವರು ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ. ಶಾಲೆ ಪ್ರವೇಶಿಸುತ್ತಿದ್ದಂತೆ ಕಿರುಚಲು ಶುರು ಮಾಡುವುದು, ತಮ್ಮ ಕೂದಲು ಕೆದರಿ ನಡುಗುವುದು, ಇದಲ್ಲದೇ ಏಕಾಏಕಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಾರೆ. ಸುಮಾರು 15 ವಿದ್ಯಾರ್ಥಿನಿಯರಿಗೆ ಇದೇ ರೀತಿ ಆಗಿದ್ದು, ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಸಿಯಾಗಿದೆ.
ಶಾಲಾ ಸಿಬ್ಬಂದಿ ಹಾಗೂ ಮಕ್ಕಳ ಪಾಲಕರಲ್ಲಿ ಭೀತಿ ಆವರಿಸಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುತ್ತಿದ್ದಾರೆ. ಇದಾಗಲೇ ಶಾಲಾ ಆಡಳಿತ ಮಂಡಳಿಯು ಈ ವಿಚಿತ್ರ ಘಟನೆಯ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದೆ.
ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದು ದೆವ್ವ ಪಿಶಾಚಿ ಕಾಟವೆಂದು ಅಂದುಕೊಂಡಿರುವ ಗ್ರಾಮಸ್ಥರು ಬಾಬಾನೋರ್ವನ ಕರೆತಂದು, ಶಾಂತಿ ಮಂತ್ರ ಪಠಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಶಾಂತಿ ಮಂತ್ರದ ಪಠಣದ ನಂತರ ವಿಚಿತ್ರವಾಗಿ ವರ್ತಿಸುತ್ತಿರುವ ವಿದ್ಯಾರ್ಥಿನಿಯರು ತಣ್ಣಗಾಗಿದ್ದಾರೆ. ಅವರ ಆರೋಗ್ಯ ತಪಾಸಣೆಗಾಗಿ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಆದರೆ ಇದೇ ರೀತಿ ಉಳಿದ ವಿದ್ಯಾರ್ಥಿನಿಯರಿಗೂ ಆದರೆ ಏನು ಎಂಬ ಆತಂಕ ಪಾಲಕರದ್ದು. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಣಾಧಿಕಾರಿ ಗಜೇಂದ್ರ ಅವರಿಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರಿಂದ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಇಲ್ಲಿದೆ ನೋಡಿ:
Chaos and panic erupted whenfew girl students of a govt schoolsuddenly started screaming, shouting crying and fainting. Some believe it's a "mass hysteria" phenomenon. This causing concern among the parents as well as the authorities.#hysteria#masshysteria#Uttarakhandpic.twitter.com/rClOOQPupZ
— Subodh Kumar (@kumarsubodh_)July 28, 2022

ಲಾಟರಿ ತೆಗೆದಿಟ್ಟಿದ್ದು ಆತ, 75 ಲಕ್ಷ ರೂ. ಗೆದ್ದದ್ದು ಈಕೆ! ಟಿಕೆಟ್​ ಆರಿಸಲೂ ಇಲ್ಲ, ಮುಟ್ಟಲೂ ಇಲ್ಲ, ನರ್ಸ್​ಗೆ ಒಲಿದ ಲಕ್ಷ್ಮಿ

VIDEO: ಬಿಜೆಪಿ ಮುಖಂಡ ಪ್ರವೀಣ್​ ಹತ್ಯೆಯ ಪ್ರಮುಖ ಆರೋಪಿ ಷಫೀಕ್​ ಪತ್ನಿ ಹೇಳಿದ್ದೇನು ಕೇಳಿ…

ಪುತಿ ತುಡು ಎಂಬ ಬಾಲೆ ದ್ರೌಪದಿ ಮುರ್ಮು ಆಗಿದ್ಹೇಗೆ? ಹೆಸರಿನ ಗುಟ್ಟು ಬಿಚ್ಚಿಟ್ಟ ‘ಐತಿಹಾಸಿಕ’ ರಾಷ್ಟ್ರಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fourteen =
Remember me
