ಹೈದರಾಬಾದ್‌:ರೂಮಿನಲ್ಲಿದ್ದ ಸ್ನೇಹಿತೆಯರು ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದ ಕೃತಿ ಸಂಭಾಲ್ (27) ಆತ್ಮಹತ್ಯೆ ಮಾಡಿಕೊಂಡಿರುವವರು. ಇವರು ಗಚ್ಚಿಬೌಲಿಯಲ್ಲಿ ಅಮೇಜಾನ್​ ಕಂಪೆನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು.
ಇಬ್ಬರು ಸ್ನೇಹಿತೆಯರ ಜತೆ ಇವರು ಅಪಾರ್ಟ್​ಮೆಂಟ್​ ಒಂದರಲ್ಲಿ ನೆಲೆಸಿದ್ದರು. ಅವರಿಬ್ಬರೂ ಕೆಲಸಕ್ಕೆಂದು ಹೊರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ತಮ್ಮ ಸ್ನೇಹಿತ ಸ್ನೇಹಿತ ಸಚಿನ್‌ ಕುಮಾರ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದಾರೆ.
ಸಂದೇಶ ನೋಡಿ ಗಾಬರಿಯಿಂದ ಅಪಾರ್ಟ್​ಮೆಂಟ್​ಗೆ ಬಂದಾಗ ಅದು ಲಾಕ್​ ಆಗಿತ್ತು. ನಂತರ ಆಕೆಯ ಸ್ನೇಹಿತೆಗೆ ಕರೆ ಮಾಡಿ ಲಾಕ್​ ತೆಗೆದು ನೋಡಿದಾಗ ಕೃತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಸದ್ಯ ಯಾವುದೇ ಡೆತ್​ನೋಟ್​ ಸಿಗಲಿಲ್ಲ. ಆದ್ದರಿಂದ ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಫೋನ್​ನಲ್ಲಿ ಹಾರರ್​ ಮೂವಿ ನೋಡುತ್ತಲೇ ಗೊಂಬೆಗೆ ನೇಣು ಬಿಗಿದು, ತಾನೂ ಸತ್ತುಹೋದ ಬಾಲಕ!

ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಇಡಿ ಶಾಕ್​ ನೀಡಿದ ಬೆನ್ನಲ್ಲೇ ಸೋನಿಯಾಗೆ ಕೋವಿಡ್​ ಪಾಸಿಟಿವ್​!

ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

ಪತಿಯ ವಿರುದ್ಧ ಲೇಖನ ಬರೆದು 78 ಕೋಟಿ ರೂ. ಕಳೆದುಕೊಂಡ ನಟಿ: ಕಾನೂನು ಸಮರ ಗೆದ್ದ ಖ್ಯಾತ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
