ಲಂಡನ್​:ಒಮ್ಮೊಮ್ಮೆ ಆಯಸ್ಸು ಮುಗಿದಿದೆ ಎಂದರೂ ಮುಗಿದಿರುವುದೇ ಇಲ್ಲ. ಮೃತಪಟ್ಟ ಎಂದುಕೊಂಡವರು ಎಚ್ಚರಗೊಳ್ಳುವ, ಉಸಿರಾಡುವ, ಕೈಕಾಲು ಆಡಿಸುವ ಕೆಲವು ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ.
ಅಂಥದ್ದೇ ಒಂದು ಘಟನೆ ಲಂಡನ್​ನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದಲ್ಲಿನ ಅಂಗಾಂಗಗಳನ್ನ ದಾನ ಮಾಡಲು ವೈದ್ಯರು ಸಕಲ ಸಲಕರಣೆಗಳ ಜತೆ ಸಜ್ಜಾಗುತ್ತಿದ್ದರಂತೆಯೇ ಆ ವ್ಯಕ್ತಿ ಎಚ್ಚರಗೊಂಡ ಘಟನೆ ನಡೆದಿದೆ. ಅರೆ ಕ್ಷಣ ವೈದ್ಯರೇ ಕಂಗಾಲಾಗಿ ಹೋಗಿದ್ದಾರೆ.
18 ವರ್ಷದ ಲೆವೀಸ್​​ ರಾಬರ್ಟ್ಸ್ ಎಂಬಾತನಿಗೆ ಅಪಘಾತ ಸಂಭವಿಸಿತ್ತು. ಮಾರ್ಚ್ 13ರಂದು ವ್ಯಾನ್​ಗೆ ಡಿಕ್ಕಿ ಹೊಡೆದ ಪರಿಣಾಮ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು. ಆದರೆ ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಆತನ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದರಿಂದ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆತನ ಕುಟುಂಬಸ್ಥರ ಇಚ್ಛೆಯಂತೆ ಮೃತದೇಹದಿಂದ ಅಂಗಾಂಗಗಳನ್ನು ಬೇರ್ಪಡಿಸಿ ಅಗತ್ಯ ಇರುವವರಿಗೆ ದಾನ ಮಾಡಲು ವೈದ್ಯರು ಸಜ್ಜಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಲೆವೀಸ್​ ಉಸಿರಾಡಲು ಆರಂಭಿಸಿದ್ದಾನೆ. ಸರ್ಜರಿ ಮಾಡಲು ಸಲಕರಣೆ ಕೈಗೆತ್ತಿಕೊಂಡಿದ್ದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.
ಹೆಣ್ಣೇ ಸಿಕ್ತಿಲ್ಲ ಎಂದು ಸಿಕ್ಕಸಿಕ್ಕವರ ಬಳಿ ಕಣ್ಣೀರು ಹಾಕಿದ್ದ ಈ ಕುಳ್ಳನಿಗೆ ಈಗ ಹುಡುಗಿಯರ ಆಯ್ಕೆಯೇ ಕಷ್ಟವಾಗಿದೆ!

ಪೊಲೀಸ್​ ಠಾಣೆಯಲ್ಲಿದ್ದ ಸಾವಿರಾರು ಬಾಕ್ಸ್​ ಮದ್ಯದ ಬಾಟಲ್​ ನಾಪತ್ತೆ… ಇಲಿಯ ಕೆಲಸ ಎಂದ್ರು ಅಧಿಕಾರಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + fifteen =
Remember me
