ಜೈಪುರ:ಲಂಚ ಸ್ವೀಕರಿಸುವಂಥ ಹೇಸಿಗೆ ಕೆಲಸ ಮಾಡುವಾಗ ಬಾರದ ಹೆದರಿಕೆ ತನ್ನನ್ನು ಹಿಡಿಯಲು ಪೊಲೀಸರು ಬಂದಾಗ ಉಂಟಾಗಿ ಹಣದ ಕಟ್ಟನ್ನೇ ಗುಳುಂ ಗುಳುಂ ಎಂದು ತಿಂದು ತೇಗುವ ಅನೇಕ ಉದಾಹರಣಗಳು ಇದಾಗಲೇ ನಡೆದಿವೆ. ಆದರೆ ಇಲ್ಲೊಬ್ಬ ತಹಶೀಲ್ದಾರ ದಾಳಿಗೆ ಹೆದರಿ ಸುಮಾರು 20 ಲಕ್ಷ ರೂಪಾಯಿಗಳ ನೋಟುಗಳನ್ನೇ ಸುಟ್ಟು ಹಾಕಿದ್ದಾರೆ!
ಈ ಘಟನೆ ನಡೆದಿರುವುದು ರಾಜಸ್ಥಾನದ ಸಿರೋಹಿಯಲ್ಲಿ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೆ ಇಲ್ಲಿಯ ತಹಶೀಲ್ದಾರ್ ಇಂಥ ಕೃತ್ಯ ಎಸಗಿದ್ದಾರೆ. ಅತ್ತ ಅಧಿಕಾರಿಗಳು ತನ್ನ ಮನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಲೇ ಅಯ್ಯಯ್ಯೋ ಎಂದು ಸತ್ತೆನೋ, ಎದ್ದೆನೋ ಎಂದುಕೊಂಡು ಎಲ್ಲ ನೋಟುಗಳನ್ನು ಸುಟ್ಟುಹಾಕಿದ್ದಾರೆ!
ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಇಂಥದ್ದೊಂದು ಕೃತ್ಯ ಎಸಗಿದವರು. ಭೂಮಿ ದಾಖಲೆ ಬದಲಾವಣೆಗೆ ಒಂದಕ್ಕೆ ಸಂಬಂಧಿಸಿದಂತೆ ಇವರು ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು.
ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು, ಇದೇ ರೀತಿ ಅಕ್ರಮವಾಗಿ ಕೂಡಿಟ್ಟಿದ್ದ 20 ಲಕ್ಷ ರೂಪಾಯಿ ಮನೆಯೊಳಕ್ಕೆ ಇತ್ತು. ಪೊಲೀಸರು ದಾಳಿ ಮಾಡಿದರೆ ತನ್ನ ಸಂಪೂರ್ಣ ಕೃತ್ಯ ಬಯಲಾಗುವುದು ಎನ್ನುವ ಉದ್ದೇಶದಿಂದ ಮನೆಯೊಳಗೆ ಬೀಗ ಹಾಕಿಕೊಂಡು ಸುಮಾರು20 ಲಕ್ಷದ ಹಣದ ನೋಟನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಸದ್ಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಡಿನಾ? ಅದ್ಯಾವುದು? … ನಂಗೆ ಗೊತ್ತೇ ಇಲ್ಲ… ನಿಮಗೇ ಚೆನ್ನಾಗಿ ಗೊತ್ತಿರ್ಬೇಕಲ್ಲಮ್ಮಾ… ಎಂದು ನಕ್ಕ ಸಿಎಂ

ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡೋದು ನಮ್‌ ಕರ್ತವ್ಯ; ಸಿಡಿ ಲೇಡಿ ನೆರವಿಗೆ ನಿಂತ ಸಚಿವೆ ಜೊಲ್ಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − one =
Remember me
