ಮುಂಬೈ:ಪ್ರಸಿದ್ಧ ಕಿರುತೆರೆ ನಟಿ, ಬಿಗ್​ಬಾಸ್​ 15ರ ವಿಜೇತೆ ನಟಿ ತೇಜಸ್ವಿ ಪ್ರಕಾಶ್​ ಅವರಿಗೆ 29ನೇ ಹುಟ್ಟುಹಬ್ಬದ ಸಂಭ್ರಮವಿಂದು. ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರ ಜತೆ ಈಕೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೆಲ ವರ್ಷಗಳಿಂದ ಕರಣ್ ಕುಂದ್ರಾ ಎನ್ನುವವರ ಜತೆ ಡೇಟಿಂಗ್​ನಲ್ಲಿರುವ ಈ ನಟಿ, ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳಲು ಗೋವಾಕ್ಕೆ ತೆರಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದರೂ, ತೇಜಸ್ವಿ ಪ್ರಕಾಶ್​ ಎಂದಾಕ್ಷಣ ನೆನಪಿಗೆ ಬರುವುದು ಈಕೆ 9 ವರ್ಷದ ಬಾಲಕನನ್ನು ಮದುವೆಯಾಗಿದ್ದ ಘಟನೆ. ಭಾರಿ ಸುದ್ದಿ ಮಾಡಿ, ಖುದ್ದು ತೇಜಸ್ವಿ ಅವರನ್ನೇ ಮುಜುಗರಕ್ಕೆ ಸಿಲುಕಿಸಿದ್ದ ಈ ಘಟನೆ.

ಅಷ್ಟಕ್ಕೂ ತೇಜಸ್ವಿ ಅವರೇನೂ ನಿಜವಾಗಿಯೂ ಬಾಲಕನನ್ನು ಮದುವೆಯಾಗಿರಲಿಲ್ಲ. ಬದಲಿಗೆ, ಪಹರೀದಾರ್​ ಪಿಯಾ ಕೀ ಧಾರಾವಾಹಿಯಲ್ಲಿ ನಟಿಸುವ ವೇಳೆ ಈಕೆ ಅದರಲ್ಲಿ 9 ವರ್ಷದ ಬಾಲಕನನ್ನು ಮದುವೆಯಾಗಬೇಕಿತ್ತು. 2017ರಲ್ಲಿ ಪ್ರಸಾರ ಆಗುತ್ತಿದ್ದ ಈ ಧಾರಾವಾಹಿಯಲ್ಲಿನ ಈ ಸನ್ನಿವೇಶ ಮಾತ್ರ ಭಾರಿ ವಿವಾದ ಸೃಷ್ಟಿಸಿತ್ತು. ಇಡೀ ಧಾರಾವಾಹಿಯ ಪರಿಕಲ್ಪನೆಯು ಟೀಕೆಗೆ ಗುರಿಯಾಯಿತು.
ಇದು ನಟನೆ ಮಾತ್ರ ಎನ್ನುವುದನ್ನೂ ತಿಳಿಯದೇ ಎಷ್ಟೋ ಮಂದಿ ತೇಜಸ್ವಿ ಅವರ ವಿರುದ್ಧ ಹರಿಹಾಯ್ದಿದ್ದರು. ಭಾರಿ ವಿವಾದದ ಹಿನ್ನೆಲೆಯಲ್ಲಿ ಧಾರಾವಾಹಿಯ ಸಮಯವನ್ನು ರಾತ್ರಿ 10.30ಕ್ಕೆ ಬದಲಾಯಿಸಲಾಗಿತ್ತು. ಮನೋಜ್ಱ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ತೇಜಸ್ವಿ ಅವರು, ಹೆಚ್ಚು ಪ್ರಚಲಿತಕ್ಕೆ ಬಂದದ್ದು ಈ ವಿವಾದಿತ ಧಾರಾವಾಹಿಯಿಂದಾಗಿ. ವಿವಾದದ ನಡುವೆ ಭಾರಿ ಜನಪ್ರಿಯತೆ ಗಳಿಸಿದರು. ನಂತರ ಬಿಗ್​-ಬಾಸ್​ನಲ್ಲಿ ವಿನ್ನರ್​ ಆದ ಬಳಿಕ ಇವರ ಹೆಸರು ಇನ್ನಷ್ಟು ಬೆಳಕಿಗೆ ಬಂದಿದೆ. ಸದ್ಯ ನಾಗಿನ್​-6 ಧಾರಾವಾಹಿಯಲ್ಲಿ ಇವರು ನಟಿಸುತ್ತಿದ್ದಾರೆ.
ಪತ್ನಿಗೆ ಟಾರ್ಚರ್​ ಕೊಡ್ತಿದ್ದ- ಯುವತಿಯನ್ನು ಮಂಚಕ್ಕೆ ಕರೀತಿದ್ದ: ಅಸಲಿಯತ್ತು ಗೊತ್ತಾಗಿ ತಲೆತಿರುಗಿ ಬಿದ್ದ ಪೊಲೀಸಪ್ಪ​!

ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

ಬೇಬಿ ಬಂಪ್‌ ಷೋ ಮಾಡಿದ ಬರ್ತ್‌ಡೇ ಗರ್ಲ್‌: ಗರ್ಭಿಣಿ ಸೋನಮ್‌ ಕಪೂರ್‌ ಫೋಟೋಗಳು ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 17 =
Remember me
