ಹೈದರಾಬಾದ್:ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್​ ಪಕ್ಷ ತೊರೆದ ಬೆನ್ನಲ್ಲೇ ಇದೀಗ ಪಕ್ಷದಕ್ಕೆ ಮತ್ತೊಂದು ಶಾಕ್​​ ಎದುರಾಗಿದೆ. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ರಾಹುಲ್ ಗಾಂಧಿಯನ್ನು ಅಪ್ರಬುದ್ಧ, ಬಾಲಿಶ ರಾಜಕಾರಣಿ ಎಂದು ಗುಲಾಂ ನಬಿ ಆಜಾದ್​ ಆರೋಪಿಸಿದ್ದಂತೆಯೇ ಇದೀಗ ಕಾಂಗ್ರೆಸ್​ನ ಹಿರಿಯ ಮುಖಂಡ, ಮಾಜಿ ಸಂಸದ ಎಂ.ಎ ಖಾನ್ ಅವರೂ ರಾಹುಲ್​ ಗಾಂಧಿಯವರ ಕಾರ್ಯವೈಖರಿಯಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುವಲ್ಲಿ, ದೇಶವನ್ನು ಮುನ್ನಡೆಸುವಲ್ಲಿ ಸಾರ್ವಜನಿಕರನ್ನು ಮನವೊಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಹುಲ್ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷ ಸ್ಥಾನ ವಹಿಸಿಕೊಂಡ ಸಮಯದಿಂದ ಕಾಂಗ್ರೆಸ್ ಅವನತಿ ಆರಂಭವಾಗಿದೆ ಎಂದು ಖಾನ್​ ಪತ್ರದಲ್ಲಿ ಹೇಳಿದ್ದಾರೆ.
ನಾನು ಕಾಲೇಜು ದಿನಗಳಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಬಾಂಧವ್ಯ ಹೊಂದಿದ್ದೇನೆ. ಆದರೆ ಈಗ ಎಲ್ಲಾ ಬದಲಾಗಿದೆ. ಪಕ್ಷದ ಸಮಿತಿಯ ಉಪಾಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ನಿಭಾಯಿಸಿದ ನಂತರ ಪಕ್ಷದ ವರ್ಚಸ್ಸು ಇಳಿಮುಖಗೊಂಡಿದೆ. ಇಂಥ ನಾಯಕರಿಂದ ಪಕ್ಷ ಉದ್ಧಾರ ಆಗುವುದಿಲ್ಲ. ಅವರು ತಮ್ಮದೇ ಆದ ವಿಭಿನ್ನ ಆಲೋಚನಾ ಪ್ರಕ್ರಿಯೆಯನ್ನು ಹೊಂದಿದ್ದಾರೆ. ಇದು ಬ್ಲಾಕ್ ಮಟ್ಟದಿಂದ ಬೂತ್ ಹಂತದವರೆಗೆ ಯಾವುದೇ ಸದಸ್ಯರೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ತೆಲಂಗಾಣದ ರಾಜ್ಯಸಭಾ ಮಾಜಿ ಸದಸ್ಯ ಖಾನ್​ ತಿಳಿಸಿದ್ದಾರೆ.
ಪಕ್ಷವನ್ನು ತಳಮಟ್ಟದಿಂದ ಮರು ಸಕ್ರಿಯಗೊಳಿಸಲು ಮತ್ತು ಪಂಡಿತ್ ನೆಹರು, ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ ಅವರ ನಾಯಕತ್ವಗಳಲ್ಲಿ ಪಕ್ಷದ ಪ್ರದರ್ಶಿಸಿದ್ದ ಬದ್ಧತೆ ಹಾಗೂ ಸಮರ್ಪಣೆಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವ ಯಾವುದೇ ಪ್ರಯತ್ನವನ್ನು ಉನ್ನತ ನಾಯಕತ್ವ ಮಾಡದ ಕಾರಣ ಹಿರಿಯ ನಾಯಕರು ಪಕ್ಷಕ್ಕೆ ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತಾಗುತ್ತಿದೆ. ಇದನ್ನು ಬಿಟ್ಟರೆ ನನಗೆ ಬೇರೆ ದಾರಿ ಇರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ವ್ಯವಹಾರಗಳಿಂದ ದೂರವಾಗುವುದು ಬಿಟ್ಟು ನನಗೆ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಗುಲಾಂ ನಬಿ ಆಜಾದ್ ರಾಜೀನಾಮೆ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರದ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷ ತ್ಯಜಿಸಿದ್ದರು. ಇದೀಗ ರಾಜೀನಾಮೆ ಪರ್ವ ಮುಂದುವರೆಯುತ್ತಿದೆ. (ಏಜೆನ್ಸೀಸ್​)
ಅವಳಿ ಕಟ್ಟಡ ನೆಲಸಮಗೊಳಿಸ್ತಿರೋ ಬ್ಲಾಸ್ಟರ್​ ಚೇತನ್​ರ ಕನಸಿಂದು ನನಸಾಗ್ತಿದೆ! ಅವರ ಮಾತಲ್ಲೇ ಕೇಳಿ…

ಸ್ವೀಟ್​ ಪ್ರಿಯರೇ, ತಿನಿಸು ತಿನ್ನುವಾಗ ಇರಲಿ ಎಚ್ಚರ: ವ್ಯಕ್ತಿಯ ಪ್ರಾಣವನ್ನೇ ತೆಗೆದ ಕೇರಳ ಹಲ್ವಾ!

ಕಾರವಾರದಲ್ಲೊಂದು ಇಂಟರೆಸ್ಟಿಂಗ್​ ಲವ್​ ಸ್ಟೋರಿ: ಎರಡು ಮಕ್ಕಳ ಅಮ್ಮನಿಗೂ ಬಿಡದ ಸೆಳೆತ- ಪ್ರೇಯಸಿಗಾಗಿ ಗಾರೆ ಮಾಡಿದ ಇಂಜಿನಿಯರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + fifteen =
Remember me
