ಹೈದರಾಬಾದ್‌:ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿರುವ ನರಮೇಧಕ್ಕೂ, ಗೋಹತ್ಯೆ ಮಾಡುವವರ ಮೇಲೆ ನಡೆಸುತ್ತಿರುವ ದಾಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿಯದ್ದು ಎಂದು ಹೇಳಿಕೆ ನೀಡಿರುವ ನಟಿ ಸಾಯಿ ಪಲ್ಲವಿಗೆ ತೆಲಂಗಾಣ ಹೈಕೋರ್ಟ್​ನಲ್ಲಿ ಮುಖಭಂಗವಾಗಿದೆ.
ತಮ್ಮ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಈ ರೀತಿ ಮಾತನಾಡಿದ್ದರು, ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆದಾರರನ್ನು ಜೈಶ್ರೀರಾಮ್​ ಎನ್ನುವ ಮೂಲಕ ಹಲ್ಲೆ ಮಾಡುತ್ತಿರುವುದು ಒಂದೇ ಅಲ್ಲವೇ ಎಂದಿದ್ದರು. ನಂತರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ತಮ್ಮ ಹೇಳಿಕೆಗೆ ಸಮಜಾಯಿಷಿ ಕೊಟ್ಟಿದ್ದರು.
ಆದರೆ ಈಕೆಯ ವಿರುದ್ಧ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂನ್ 21ರಂದು ಪೊಲೀಸರು ಖುದ್ದು ಹಾಜರಿಗೆ ಆದೇಶಿಸಿದ್ದರು. ಇದನ್ನು ನಟಿ ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.
ತಾವು ನೋಟಿಸ್​ ನೀಡುವಂಥ ಹೇಳಿಕೆಯನ್ನೇನೂ ನೀಡಲಿಲ್ಲ. ವಿನಾಕಾರಣ ನನ್ನನ್ನು ಇದರಲ್ಲಿ ಸಿಲುಕಿಸಲಾಗುತ್ತಿದೆ. ಆದ್ದರಿಂದ ನೋಟಿಸ್​ಗೆ ಉತ್ತರಿಸಬೇಕೆಂದು ಇಲ್ಲ ಎಂದಿದ್ದ ನಟಿ, ನೋಟಿಸ್​ ನೀಡಿರುವುದು ತಪ್ಪು ಎಂದು ಆದೇಶಿಸುವಂತೆ ಕೋರಿದ್ದರು. ಸರ್ಕಾರಿ ವಕೀಲ ಟಿ.ಶ್ರೀಕಾಂತ್ ರೆಡ್ಡಿ ಪ್ರತಿಕ್ರಿಯಿಸಿ, ಎಫ್‌ಐಆರ್ ದಾಖಲಾಗಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲು ಮಾತ್ರ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ವಾದ- ಪ್ರತಿವಾದ ಆಲಿಸಿದ ಕೋರ್ಟ್​, ನಟಿಯ ಅರ್ಜಿ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ, ಸಾಯಿ ಪಲ್ಲವಿ ಪೊಲೀಸರ ನೋಟಿಸ್​ಗೆ ಉತ್ತರಿಸಿ, ಹಾಜರಿ ಆಗಬೇಕಿದೆ.
ಏನು ಹೇಳಿದ್ದರು ನಟಿ?ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದಾಗ ಕಾಶ್ಮೀರಿ ಪಂಡಿತರನ್ನು ಕೊಂದರು, ಹತ್ಯೆ ಮಾಡಿದರು. ಅದೇ ರೀತಿ ಹಸುವನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಮುಸ್ಲಿಮರ ಮೇಲೆ ಹಲ್ಲೆ ಮಾಡಲಾಯಿತು, ಜೈಶ್ರೀರಾಮ್​ ಎನ್ನುತ್ತ ಹಲ್ಲೆ ನಡೆಸಿದರು. ಇದು ಎರಡೂ ಒಂದೇ ಎಂದು ನನ್ನ ಭಾವನೆ. ಅದಕ್ಕೂ ಇದಕ್ಕೂ ಏನು ವ್ಯತ್ಯಾಸವಿದೆ? ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಗುಂಪಿನ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪು. ಇಬ್ಬರು ಸಮಾನರ ನಡುವೆ ಯುದ್ಧ ನಡೆಯಬೇಕು ಎಂದಿದ್ದರು.
ಗೋಹತ್ಯೆ ಮಾಡುವವರನ್ನು ಸಾಯಿ ಪಲ್ಲವಿ ಸಮರ್ಥಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಕಾಶ್ಮೀರಿ ಪಂಡಿತರಿಗೂ, ಗೋವುಗಳನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡಿ ಅವುಗಳನ್ನು ಹತ್ಯೆ ಮಾಡುತ್ತಿರುವವರ ನಡುವಿನ ವ್ಯತ್ಯಾಸ ನಟಿಯೊಬ್ಬಳಿಗೆ ತಿಳಿಯದೇ ಇರುವುದು ವಿಷಾದಕರ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀರ್​ ವಿರುದ್ಧ ಎಫ್​ಐಆರ್​: ಶಾಸಕ ಸ್ಥಾನಕ್ಕೆ ಕುತ್ತು? ಇ.ಡಿ ಕೊಟ್ಟಿರೋ ಶಾಕಿಂಗ್​ ಆಸ್ತಿ ಡಿಟೇಲ್ಸ್​ ನೋಡಿ!

ಇನ್​ಸ್ಟಾಗ್ರಾಂನಲ್ಲಿ 3 ತಿಂಗಳ ಲವ್​: ಪ್ರೀತಿಗೆ ಬಿದ್ದು ಜೀವ ಕಳೆದುಕೊಂಡ ಚಿಂತಾಮಣಿ ವಿದ್ಯಾರ್ಥಿನಿ

ತಾಳಿ ಕಟ್ಟಲು ವರ ಮುಂದಾದಾಗ, ಹಣೆಗೆ ಬೇರೊಬ್ಬ ಹಚ್ಚಿದ ಸಿಂಧೂರ! ಆಮೇಲಾದದ್ದು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
