ಸಿಕಂದರಾಬಾದ್​​:ತೆಲಂಗಾಣ ಸರ್ಕಾರ ಇಂದು ರಾಷ್ಟ್ರೀಯ ಏಕೀಕರಣ ದಿನವನ್ನು ಆಚರಿಸುತ್ತಿದೆ. ಈ ದಿನವನ್ನು ಬಿಜೆಪಿ ತೆಲಂಗಾಣ ವಿಮೋಚನಾ ದಿನ ಎಂದು ಕರೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಷಾ ಕಾರ್ಯಕ್ರಮ ಉದ್ಘಾಟಕರಾಗಿದ್ದಾರೆ. ಈ ನಿಮಿತ್ತ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಲು ಸಿದ್ಧತೆ ನಡೆಸಿದ್ದರು.
ಕಲಬುರಗಿಯಲ್ಲಿ ಕಲ್ಯಾಣ ವಿಮೋಚನಾ ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮಕ್ಕೆ ಬೊಮ್ಮಾಯಿ ಅವರು ಹೋದ ಹಿನ್ನೆಲೆಯಲ್ಲಿ ತೆಲಂಗಾಣಕ್ಕೆ ಅವರು ಹೋಗಲು ಸಾಧ್ಯವಾಗಲಿಲ್ಲ. ಆದರೆ ಬೊಮ್ಮಾಯಿಯವರು ತೆಲಂಗಾಣಕ್ಕೆ ಬರುತ್ತಿರುವ ಸುದ್ದಿ ಕೇಳಿ, ಸ್ಥಳೀಯ ಟಿಆರ್​ಎಸ್​ (ತೆಲಂಗಾಣ ರಾಷ್ಟ್ರೀಯ ಸಮಿತಿ) ಕಾರ್ಯಕರ್ತರು ಅವರಿಗೆ ಭಾರಿ ಅವಮಾನ ಆಗುವ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ.
ಕಾರ್ಯಕ್ರಮ ಹಮ್ಮಿಕೊಂಡಿರುವ ಸಿಕಂದರಾಬಾದ್​ನ ಪರೇಡ್​ ಮೈದಾನದ ಹಲವು ಕಡೆಗಳಲ್ಲಿ ಟಿಆರ್​ಎಸ್​ ಕಾರ್ಯಕರ್ತರು ದೊಡ್ಡ ದೊಡ್ಡ ಫಲಕಗಳನ್ನು ಹಾಕಿ ಅದರಲ್ಲಿ ‘40% ಸಿಎಂ ಅವರಿಗೆ ಸ್ವಾಗತ’ ಎಂದು ಬರೆಸಿದ್ದಾರೆ. ಹಲವು ಕಡೆಗಳಲ್ಲಿ ಈ ಬೋರ್ಡ್​ಗಳನ್ನು ಹಾಕಲಾಗಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪಕ್ಷ ಪಕ್ಷಗಳ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದ್ದರೂ ಒಂದು ರಾಜ್ಯದ ಮುಖ್ಯಮಂತ್ರಿಗಳು ಬೇರೆ ರಾಜ್ಯಕ್ಕೆ ಹೋಗುವ ಸಂದರ್ಭದಲ್ಲಿ ಕೆಲವೊಂದು ಪ್ರೊಟೊಕಾಲ್​ಗಳನ್ನು ಸ್ಥಳೀಯ ಸರ್ಕಾರಗಳು ಪಾಲನೆ ಮಾಡಬೇಕಾಗುತ್ತದೆ. ಆದರೆ ಇವೆಲ್ಲವನ್ನೂ ಗಾಳಿಗೆ ತೂರಿ ಇಂಥ ಬೋರ್ಡ್​ಗಳನ್ನು ಹಾಕಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದಾ ಬಿಜೆಪಿಯನ್ನೇ ಗುರಿಯಾಗಿಸಿಕೊಂಡು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಅವರು ಒಂದೆಡೆ ಮಾತನಾಡುತ್ತಿರುವ ನಡುವೆ, ಇದೀಗ ಈ ರೀತಿ ಕೆಟ್ಟದಾಗಿ ಸ್ವಾಗತ ಕೋರಿರುವ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿಯ ಭಯ ಶುರುವಾಗಿದೆ ಎಂದೇ ಹೇಳಲಾಗುತ್ತಿದೆ.
ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಬಿಜೆಪಿಯ ಎಂಎಲ್​ಸಿ ರವಿಕುಮಾರ್​, ‘ ಈ ಘಟನೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ತೆಲಂಗಾಣದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಮುಣ್ಣುಮುಕ್ಕುವ ಭೀತಿಯಲ್ಲಿ ಇರುವ ಟಿಆರ್​ಎಸ್​ಗೆ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಇಂಥದ್ದೊಂದು ಕೆಟ್ಟ ಸಂಪ್ರದಾಯಕ್ಕೆ ಅದು ನಾಂದಿ ಹಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ 40% ಸರ್ಕಾರ ಎಂದು ಹೇಳುತ್ತಿರುವ ಯಾರಾದರೂ ಈ ಬಗ್ಗೆ ಸಾಬೀತು ಮಾಡಿದ್ದಾರಾ? ಸಿದ್ದರಾಮಯ್ಯ ಕೂಡ ಇದೇ ರೀತಿ ಆರೋಪ ಮಾಡಿದರು. ಇದನ್ನು ಸದನದಲ್ಲಿ ಸಾಬೀತು ಮಾಡುತ್ತೇನೆ ಎಂದರು, ಅವರು ಏನಾದರೂ ಸಾಕ್ಷ್ಯಾಧಾರ ತೋರಿಸಲು ಸಾಧ್ಯವಾಯಿತಾ? ಸುಖಾಸುಮ್ಮನೆ ಆರೋಪ ಮಾಡುವುದು ಬಿಜೆಪಿಯ ಬಗ್ಗೆ ಅವರಿಗೆ ಇರುವ ಭಯವನ್ನು ತೋರಿಸುತ್ತದೆಯೇ ವಿನಾ ಮತ್ತೇನೂ ಅಲ್ಲ’ ಎಂದು ಹೇಳಿದರು.
‘ರಸ್ತೆಯಲ್ಲಿ ಹೋಗುವವರೂ ಇಂಥ ಆರೋಪ ಮಾಡುತ್ತಾರೆ. ಆದರೆ ಒಂದು ಉನ್ನತ ಹುದ್ದೆಯಲ್ಲಿ ಇರುವವರು ಬಾಯಿಗೆ ಬಂದಂತೆ ಮಾತನಾಡಿದರೆ ಅವರಿಗೂ, ಇವರಿಗೂ ಇರುವ ವ್ಯತ್ಯಾಸವೇನು’ ಎಂದು ಕಿಡಿಕಾರಿರುವ ರವಿಕುಮಾರ್​, ಮುಂಬವರು ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗುತ್ತದೆ ಎಂದಿದ್ದಾರೆ.(ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್-ಬಿಜೆಪಿ ಜತೆ ಜೆಡಿಎಸ್​ ಸಮ್ಮಿಶ್ರ ಸರ್ಕಾರ: ನಿಖಿಲ್​ ಕುಮಾರಸ್ವಾಮಿ ಹೇಳಿದ್ದೇನು?

ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 19 =
Remember me
