ತೆಲಂಗಾಣ:ತೆಲಂಗಾಣದ ಸಾಫ್ಟ್‌ವೇರ್‌ ಇಂಜಿನಿಯರ್‌ ಶ್ರೀಕಾಂತ್​ ಗೌಡ ಹಾಗೂ ಇಡೀ ಕುಟುಂಬದ ಸಾವಿನ ರಹಸ್ಯ ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಈ ಪ್ರಕರಣವನ್ನು ಭೇದಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರದಲ್ಲಿ ಕಳೆದ ವಾರ ಶ್ರೀಕಾಂತ್‌ ಗೌಡ ಅವರು ಶಿಕ್ಷಕಿಯಾಗಿರುವ ತಮ್ಮ ಪತ್ನಿ ಅನಾಮಿಕ ಹಾಗೂ ಏಳುವರ್ಷದ ಮಗಳಿಗೆ ವಿಷ ಹಾಕಿ ಸಾಯಿಸಿದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದಾಗಿದೆ.ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರ ವಂದನಾ ಪುರಿ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. ಪತ್ನಿ ಮತ್ತು ಮಗಳಿಗೆ ವಿಷ ಕೊಟ್ಟು ಕೊಂದ ಬಳಿಕ ಟೆಕ್ಕಿ ಶ್ರೀಕಾಂತ್​ ಗೌಡ್ ಮತ್ತೊಂದು ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದರು.
ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಕಾರಣ ಇರಬಹುದು ಎನಿಸಿದ್ದು. ಏಕೆಂದರೆ ಮನೆ ಖರೀದಿಸಲು ಫೈನಾನ್ಸ್‌ನಿಂದ 30 ಲಕ್ಷ ರೂ. ಗೃಹ ಸಾಲ ಪಡೆದಿದ್ದಾರೆ. ಮನೆ ಮೇಲಿನ ಮಹಡಿ ನಿರ್ಮಾಣದ ವೇಳೆ 11 ಲಕ್ಷ ರೂಪಾಯಿ ಟಾಪ್ ಅಪ್ ಸಾಲ ಪಡೆದಿದ್ದಾರೆ. 7 ಲಕ್ಷ ರೂಪಾಯಿಯಷ್ಟು ಮತ್ತೊಂದು ವೈಯಕ್ತಿಕ ಸಾಲ ಇರುವುದು ತನಿಖೆಯಿಂದ ಗೊತ್ತಾಗಿತ್ತು. ಆದರೆ ಅಚ್ಚರಿಯ ವಿಷಯ ಎಂದರೆ, ಆತ್ಮಹತ್ಯೆಗೂ ಮುನ್ನ ಶ್ರೀಕಾಂತ್‌ ತಮ್ಮ ಹಾಗೂ ಪತ್ನಿಯ ಫೋನ್‌ಗಳನ್ನು ಸಂಪೂರ್ಣವಾಗಿ ಫಾರ್ಮ್ಯಾಟ್​​ ಮಾಡಿದ್ದು, ಇದರ ಹಿಂದಿನ ಕಾರಣ ಮಾತ್ರ ತಿಳಿದಿಲ್ಲ.
ಫೋನ್‌ ಮಾತ್ರವಲ್ಲದೇ ಲ್ಯಾಪ್‌ಟಾಪ್‌ನಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದ್ದಾರೆ. ಜೊತೆಗೆ ಇಂಟರ್‌ನೆಟ್‌ ಗೂಗಲ್ ಹುಡುಕಾಟದ ಹಿಸ್ಟರಿ ಡಿಲೀಟ್‌ ಮಾಡಿದ್ದಾರೆ. ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಯಾರಿಗೂ ಸಿಗದಂತೆ ಎಸೆದಿದ್ದಾರೆ. ಫೋನ್‌ಗಳಲ್ಲಿ ಡೇಟಾ ಸಂಪೂರ್ಣ ಖಾಲಿ ಮಾಡಿದ್ದಾರೆ. ಇವೆಲ್ಲವೂ ಪೊಲೀಸರನ್ನು ಇನ್ನಷ್ಟು ಗೋಜಲಿಗೆ ಸಿಲುಕಿಸಿದ್ದು, ಸಾವಿನ ಅಸಲಿ ಕಾರಣವೇ ತಿಳಿಯುತ್ತಿಲ್ಲವಾಗಿದೆ.
ಆಕೆಯ ಜತೆ ದೈಹಿಕ ಸಂಪರ್ಕ ಮಾಡುವಾಗ ತಾಯಿ ನೆನಪಾಗಲಿಲ್ಲವೆ? ಈಗ ಮದುವೆಗೆ ಹಿಂದೇಟು ಹಾಕಿದ್ರೆ ಹೇಗೆ?

ಸಿಎಂ ಸ್ಥಾನಕ್ಕೆ ನಾನಲ್ದೇ ಬೇರೆ ಮುಖ ಕಾಣಿಸ್ತದಾ ಎಂದಿದ್ದ ಪ್ರಿಯಾಂಕಾ ಯೂಟರ್ನ್‌! ಅದು ಹಾಗಲ್ಲ… ಹೀಗೆ… ಎಂದು ಸ್ಪಷ್ಟನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
