ಚಿಮಲವಲಸ (ಆಂಧ್ರ ಪ್ರದೇಶ):ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾಗದು. ಆದರೆ ಇಂದು ಅದೆಷ್ಟೋ ಮಕ್ಕಳು ಅಪ್ಪ-ಅಮ್ಮನ ಇಳಿ ವಯಸ್ಸಿನಲ್ಲಿ ಮನೆಯಿಂದ ಹೊರಕ್ಕೆ ಹಾಕುವ ಸುದ್ದಿಗಳನ್ನು ಕೇಳುತ್ತಲೇ ಬಂದಿದ್ದೇವೆ. ಇಂಥ ವಿಷಾದಕರ ಘಟನೆಗಳ ನಡುವೆ ಇಲ್ಲೊಬ್ಬರು ತಮ್ಮ ಅಮ್ಮನಿಗಾಗಿ ಸ್ಮಾರಕ ನಿರ್ಮಿಸುತ್ತಿದ್ದಾರೆ. ಈಗಾಗಲೇ ಕೆಲವರು ಅಮ್ಮನ ನೆನಪಿನಲ್ಲಿ ಸ್ಮಾರಕ ಕಟ್ಟಿರುವ ಘಟನೆಗಳು ನಡೆದಿವೆ. ಅದರಂತೆಯೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಮಗನೊಬ್ಬ ತಾಯಿಗೆ ಏಕಶಿಲಾ ಮಂದಿರ ನಿರ್ಮಿಸುತ್ತಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಚಿಮಲವಲಸ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಸನಪಾಲ ಶ್ರವಣಕುಮಾರ್ ಎಂಬುವರು ತಾಯಿಗೆ ಮಂದಿರ ನಿರ್ಮಿಸುತ್ತಿದ್ದಾರೆ. ಇದರ ವಿಶೇಷತೆ ಎಂದರೆ ಇದು ಏಕಶಿಲಾ ಮಂದಿರವಾಗಿದ್ದು, ಸಂಪೂರ್ಣ ದೇವಾಲಯವನ್ನು ಒಂದೇ ಕಪ್ಪು ಶಿಲೆಯಲ್ಲಿ ನಿರ್ಮಿಸುತ್ತಿದ್ದಾರೆ. 2019ರಿಂದಲೇ ಇದು ಆರಂಭವಾಗಿದೆ.
ಇವರ ತಾಯಿ ಅನಸೂಯಾ ದೇವಿ 2008ರಲ್ಲಿ ನಿಧನರಾಗಿದ್ದರು. ಅನಸೂಯಾ ಅವರ ಮೂರನೆಯ ಮಗ ಶ್ರವಣ್‌ಕುಮಾರ‌. ಮೊದಲು ಹುಟ್ಟಿದ್ದ ಅವಳಿ-ಜವಳಿ ಮಕ್ಕಳು ಇಬ್ಬರೂ ತೀರಿಕೊಂಡಿದ್ದರು. ಒಂದು ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟರೆ, ಮತ್ತೊಬ್ಬ 9ನೇ ವಯಸ್ಸಿನಲ್ಲಿ ಕ್ಯಾನ್ಸರ್​ನಿಂದ ಮೃತನಾಗಿದ್ದ. ಇದಾದ ಬಳಿಕ ಶ್ರವಣ‌ಕುಮಾರ್ ಜನಿಸಿದ್ದರು. ಆದ್ದರಿಂದ ಅನುಸೂಯಾ ಅವರಿಗೆ ಶ್ರವಣ್‌ಕುಮಾರ್‌ ಎಂದರೆ ಹೆಚ್ಚಿನ ಪ್ರೀತಿಯಿತ್ತು.
2008ರಲ್ಲಿ ಅವರು ತೀರಿಕೊಂಡ ಮೇಲೆ ಅಮ್ಮನ ನೆನಪುಗಳನ್ನು ಅಮರವಾಗಿರಿಸಲು ಈ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಯಾದಾದ್ರಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ನಿರ್ಮಾಣ ಕಾರ್ಯದ ಸಂಸ್ಥಾಪಕ ಚಿರಂಜೀವಿ ಮಾರ್ಗದರ್ಶನದಲ್ಲಿ ಈ ಅಮ್ಮನ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಇದು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಆಜಾನ್‌ v/s ಸುಪ್ರಭಾತ: ಬ್ರಾಹ್ಮಿ ಮುಹೂರ್ತದಲ್ಲಿ ಧ್ವನಿವರ್ಧಕಗಳಲ್ಲಿ ಮೊಳಗಿತು ಸು‍ಪ್ರಭಾತ, ಹನುಮಾನ್‌ ಚಾಲೀಸಾ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
