ಪಣಜಿ:ದೆಹಲಿಯಿಂದ ಗೋವಾಗೆ ಹೊರಟಿದ್ದ ವಿಮಾನದಲ್ಲಿ ಉಗ್ರನಿದ್ದಾನೆ ಎಂದು ಪ್ರಯಾಣಿಕನೊಬ್ಬ ಕೂಗುವ ಮೂಲಕ ಅದರಲ್ಲಿರುವ ಪ್ರಯಾಣಿಕರನ್ನು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ.
ದೆಹಲಿಯ ಓಖ್ಲಾದ ನಿವಾಸಿ ಜಿಯಾ ಉಲ್ ಹಕ್ ಎಂಬಾತ ತಾನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದ ಅಧಿಕಾರಿಯಾಗಿದ್ದು, ವಿಮಾನದಲ್ಲಿ ಭಯೋತ್ಪಾದಕನೊಬ್ಬನಿದ್ದಾನೆ ಎಂದು ಹೇಳಿದ್ದಾನೆ. ಏರ್ ಇಂಡಿಯಾದ ದೆಹಲಿ-ಗೋವಾ ವಿಮಾನದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗುರುವಾರ ದೆಹಲಿಯಿಂದ ಗೋವಾಕ್ಕೆ ವಿಮಾನ ತೆರಳುತ್ತಿತ್ತು. ದೆಹಲಿಯಿಂದ ವಿಮಾನ ಟೇಕ್​ ಆಫ್​ ಆಗಿ ಗೋವಾದತ್ತ ಹೋಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಜಿಯಾ ಉಲ್​​​ ಹಕ್ ಎಂಬ ಪ್ರಯಾಣಿಕ ವಿಚಿತ್ರವಾಗಿ ವರ್ತಿಸಲು ಶುರುಮಾಡಿದ್ದಾನೆ. ಈ ವಿಮಾನದಲ್ಲಿ ಉಗ್ರರಿದ್ದಾರೆ.. ನಾನು ಸ್ಪೆಷಲ್​ ಸೆಲ್​ ಪೊಲೀಸ್​ ಅಧಿಕಾರಿ ಎಂದು ಹೇಳಿದ್ದಾನೆ. ಅಧಿಕಾರಿಯೇ ಹೀಗೆ ಹೇಳಿದ ಎಂದರೆ ನಿಜವಾಗಿಯೂ ಉಗ್ರ ಇರಬೇಕು ಎಂದು ಪ್ರಯಾಣಿಕರು ಗಾಬರಿ ಬಿದ್ದರು. ಜೀವಭಯದಿಂದಲೇ ಅವರು ಪ್ರಯಾಣಿಸಿದರು.
ಇದನ್ನೂ ಓದಿ:ಉನ್ನತ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕನ ಕಡತವನ್ನೇ ಇಲ್ಲವಾಗಿಸಿದ ಕೊಡಗು ಜಿಲ್ಲಾಡಳಿತ..!
ವಿಮಾನ ಹಾರಾಡುತ್ತಿರುವ ನಡುವೆಯೇ ಗೋವಾ ವೈಮಾನಿಕ ಸಂಚಾರ ನಿಯಂತ್ರಣ ಘಟಕಕ್ಕೆ ಪೈಲಟ್ ಮಾಹಿತಿ ನೀಡಿದ್ದರು. ಗೋವಾದಲ್ಲಿ ವಿಮಾನ ಇಳಿಸುತ್ತಿದ್ದಂತೆಯೇ ಆತನನ್ನು ಬಂಧಿಸಲಾಗಿದೆ. ಗೋವಾ ಪೊಲೀಸ್ ಮತ್ತು ಕೇಂದ್ರ ಬೇಹುಗಾರಿಕಾ ಸಂಸ್ಥೆಗಳ ಜಂಟಿ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಘಟನೆ ಬಗ್ಗೆ ಆ ಪ್ರಯಾಣಿಕನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಆತನ ಆರೋಗ್ಯ ಚೆನ್ನಾಗಿಲ್ಲ. ಖಿನ್ನತೆ ಹಾಗ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ.
ಮ್ಯಾನೇಜ್​ಮೆಂಟ್​ ಕೋಟಾದವರು ಸ್ವರ್ಗದಿಂದ ಇಳಿದವರೆ? ವೈದ್ಯರ ವಿರುದ್ಧ ಹೈಕೋರ್ಟ್​ ಕಿಡಿ

ಮ್ಯಾನೇಜ್​ಮೆಂಟ್​ ಕೋಟಾದವರು ಸ್ವರ್ಗದಿಂದ ಇಳಿದವರೆ? ವೈದ್ಯರ ವಿರುದ್ಧ ಹೈಕೋರ್ಟ್​ ಕಿಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 8 =
Remember me
