ಶ್ರೀನಗರ:ದಯವಿಟ್ಟು ನೀವು ಮನೆಗೆ ಬನ್ನಿ. ಇಲ್ಲದಿದ್ದರೆ ನಾನು ಮತ್ತು ಮಗ ಇಬ್ಬರೂ ಸಾಯುತ್ತೇವೆ. ನಮ್ಮ ಹೆಣವನ್ನು ನೀವು ನೋಡಬೇಕಾಗುತ್ತದೆ. ದಯೆಮಾಡಿ ನನ್ನ ಗಂಡನನ್ನು ವಾಪಸ್​ ಮನೆಗೆ ಕಳುಹಿಸಿಬಿಡಿ, ಅವರಿಲ್ಲದೇ ನಾವು ಬದುಕಿರಲಾರೆವು…
ಹೀಗೆಂದು ಭಯೋತ್ಪಾದಕ ತಾರಿಕ್ ಅಹ್ಮದ್ ಭಟ್ ಎಂಬ ಉಗ್ರನ ತುಂಬು ಗರ್ಭಿಣಿಯೊಬ್ಬಳು ಮನವಿ ಮಾಡಿಕೊಂಡಿದ್ದಾಳೆ. ಈ ಕುರಿತು ವಿಡಿಯೋ ಸಂದೇಶ ನೀಡಿರುವ ಆತನ ಹೆಂಡತಿ ಮನೆಗೆ ಬರುವಂತೆ ಕಣ್ಣೀರು ಸುರಿಸಿದ್ದಾಳೆ. ಇದೇ ವೇಳೆ ತನ್ನ ಗಂಡನನ್ನು ಬಿಟ್ಟುಬಿಡುವಂತೆ ಉಗ್ರ ಸಂಘಟನೆಗೆ ಗೋಗರೆದಿದ್ದಾಳೆ.
ಮಧ್ಯ ಕಾಶ್ಮೀರದ ಬಡಗಾಮ್ ಮೂಲದ ತಾರಿಕ್​, ತನ್ನ ಗರ್ಭಿಣಿ ಪತ್ನಿ ಮತ್ತು ನಾಲ್ಕು ವರ್ಷದ ಮಗನನನ್ನು ಬಿಟ್ಟು ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ. ವೃತ್ತಿಯಲ್ಲಿ ಆಟೋಚಾಲಕನಾಗಿದ್ದ ಈತ ಏಕಾಏಕಿ ಕಾಣೆಯಾಗಿಬಿಟ್ಟಿದ್ದ.
ಈತನ ತಾಯಿ ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಸೆಪ್ಟೆಂಬರ್ 20 ರಂದು ಚಡೂರಾ ಎಂಬ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ.
ಇದನ್ನೂ ಓದಿ:ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ
ನಂತರ ಕಳೆದ ಭಾನುವಾರ ಭಯೋತ್ಪಾದಕರ ತಂಡವು ಆಡಿಯೋ ಒಂದನ್ನು ರಿಲೀಸ್​ ಮಾಡಿ, ಅದರಲ್ಲಿ ತಾರಿಕ್​ ತಮ್ಮ ಸಂಘಟನೆಯನ್ನು ಸೇರಿಕೊಂಡಿರುವ ಬಗ್ಗೆ ಹೇಳಿದಾಗ ಈ ಕುಟುಂಬಕ್ಕೆ ಆಘಾತವಾಗಿ ಹೋಗಿತ್ತು.
‘ನನ್ನ ಗಂಡ ಉಗ್ರಗಾಮಿತ್ವದತ್ತ ಒಲವು ತೋರುತ್ತಾನೆ ಎಂದು ನಾವ್ಯಾರೂ ಭಾವಿಸಿರಲಿಲ್ಲ. ಆಟೊ ಚಾಲನೆ ಮಾಡಿ ಸಂಪಾದನೆ ಮಾಡುತ್ತಿದ್ದರು. ಆದರೆ ಅವರಿಗೆ ಉಗ್ರರ ನಂಟು ಹೇಗೆ ಬೆಳೆಯಿತೋ ತಿಳಿಯದು. ಏಕಾಏಕಿ ನಾಪತ್ತೆಯಾಗಿದ್ದ ಅವರು ಯಾವ ಸುಳಿವನ್ನೂ ನೀಡಲಿಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಪತ್ನಿ ಹೇಳಿದ್ದಾಳೆ.
“ನನಗಾಗಿ, ನಿಮ್ಮ 4 ವರ್ಷದ ಮಗ ಮತ್ತು ವಯಸ್ಸಾದ ಪಾಲಕರ ಮುಖ ನೋಡಿ ಮನೆಗೆ ಬನ್ನಿ. ಇಲ್ಲದಿದ್ದರೆ ನಾನು ಮತ್ತು ಮಗ ಹೆಣವಾಗುತ್ತೇವೆ. ಮತ್ತೆ ಮತ್ತೆ ನಿಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇವೆ’ ಎಂದು ಪತ್ನಿ ವಿಡಿಯೋದಲ್ಲಿ ಹೇಳಿದ್ದು, ಅದು ವೈರಲ್​ ಆಗಿದೆ.
‘ನಿಮ್ಮ ಮಗನ ಮುಖವನ್ನಾದರೂ ನೋಡಿ ಬನ್ನಿ. ನನ್ನ ಗರ್ಭದಲ್ಲಿಯೂ ಒಂದು ಮಗು ಇದೆ. ನೀವು ಇಲ್ಲದಿದ್ದರೆ ಅದನ್ನು ನೋಡಿಕೊಳ್ಳುವವರು ಯಾರು. ನೀವು ಹಿಂತಿರುಗದಿದ್ದರೆ, ನಾವು ಸಾಯುತ್ತೇವೆ’ ಎಂದು ಕಣ್ಣೀರು ಸುರಿಸಿದ್ದಾಳೆ ಪತ್ನಿ.
ನಿಮ್ಮ ಮದ್ವೆ ಆಗಿದ್ದೇ 1986ರಲ್ಲಿ; ಹೆಂಡ್ತಿ ಜತೆ 1982ರಲ್ಲಿ ಕ್ಯಾಸಿನೊಗೆ ಹೇಗೆ ಹೋದ್ರಿ?: HDKಗೆ ಟ್ರೋಲಿಗರ ಪ್ರಶ್ನೆ

ಬಿಳಿಗಿರಿರಂಗನಬೆಟ್ಟದ ಕಾಡಿನ ನಡುವೆ ಸಿಲುಕಿದ ಅಪ್ಪ-ಮಗ: ಹೀರೋ ಆಗಿ ಬಂದ ಪೊಲೀಸ್​

ನೇಪಾಳದ ಬೆನ್ನಿಗೂ ಚೂರಿ ಹಾಕಿದ ಚೀನಾ! ಗಡಿ ಗುಳುಂ ಮಾಡಿ ಕಟ್ಟಡ ನಿರ್ಮಾಣ

ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 16 =
Remember me
