ಶ್ರೀನಗರ:ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದ ಉಗ್ರ ಅಲಿ ಬಾಬರ್‌ ಪತ್ರಾನನ್ನು ಭಾರತೀಯ ಸೇನೆ ಇತ್ತೀಚೆಗೆ ಸೆರೆ ಹಿಡಿದಿದೆ.
ಆತನ ಬಾಯಿ ಬಿಡಿಸಿದ ಸಂದರ್ಭದಲ್ಲಿ ಉಗ್ರ ಕೆಲವೊಂದು ಹೇಳಿಕೆ ನೀಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅದರಲ್ಲಿ ಪ್ರಮುಖವಾಗಿ ಉಗ್ರ ಅಲಿ ತನಗೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪಾಕಿಸ್ತಾನವು ಹಣ ನೀಡಿತ್ತು ಎಂಬ ಅಂಶವನ್ನು ಮಾಧ್ಯಮದವರ ಮುಂದೆ ಬಹಿರಂಗಪಡಿಸಿದ್ದಾನೆ. ’ನಾನು ಲಷ್ಕರ್-ಎ-ತಯಬಾ ಮತ್ತು ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದಿದ್ದೇನೆ. ಈ ಎಲ್ಲಾ ದುಷ್ಕೃತ್ಯಗಳಿಗೆ, ಉಗ್ರ ಚಟುವಟಿಕೆಗೆ ನನಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ 20 ಸಾವಿರ ರೂ. ನೀಡಲಾಗಿತ್ತು’ ಎಂದು ಹೇಳಿದ್ದಾನೆ.
ನನಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ನನ್ನ ತಾಯಿಯಿದ್ದಲ್ಲಿಗೆ ಕಳುಹಿಸಿ ಎಂದು ಎಷ್ಟೆಲ್ಲಾ ಬೇಡಿಕೊಂಡೆ. ಪಾಕಿಸ್ತಾನದಲ್ಲಿ ಇರುವ ನನ್ನ ತಾಯಿಯನ್ನು ನೋಡಬೇಕು ಎಂದು ಹೇಳಿದೆ. ಆದರೆ ತಾಯಿಯನ್ನು ನೋಡಬೇಕು ಎಂದರೆ ಮೊದಲು ಭಾರತಕ್ಕೆ ಹೋಗಿ ಏನೇನು ಮಾಡಬೇಕು ಎಂಬುದನ್ನು ನನಗೆ ಹೇಳಿ ಕಳುಹಿಸಿದ್ದರು ಎಂದು ಉಗ್ರ ಇದೇ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾನೆ.
ಇದೇ ವೇಳೆ ಕಾಶ್ಮೀರ ಮತ್ತು ಭಾರತೀಯ ಸೇನೆಗೆ ಬಗ್ಗೆ ತಮ್ಮಂಥವರಿಗೆ ಯಾವ ರೀತಿಯ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂಬ ಬಗ್ಗೆ ವಿವರಿಸಿರುವ ಆತ, ಭಾರತೀಯ ಸೇನೆಯು ರಕ್ತಪಾತವನ್ನು ನಡೆಸುತ್ತೆ ಎಂದೇ ಹೇಳಲಾಗುತ್ತಿತ್ತು. ಕಾಶ್ಮೀರದಲ್ಲಿ ಭಾರತೀಯರು ಸಮಸ್ಯೆ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿ ಬಂದು ನೋಡಿದರೆ ಚಿತ್ರಣೇ ಬದಲಾಗಿದೆ. ಇಲ್ಲಿ ಎಲ್ಲವೂ ಶಾಂತಿಯುತವಾಗಿವೆ. ಭಾರತೀಯ ಸೇನೆಯು ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಇದನ್ನು ನಾನು ನನ್ನ ತಾಯಿಗೆ ಈ ಮೂಲಕ ಹೇಳಲು ಬಯಸುತ್ತೇನೆ’ ಎಂದಿದ್ದಾನೆ ಅಲಿ.
ನಾನು ಭಾರತೀಯ ಸೇನೆಗೆ ಸೆರೆ ಸಿಕ್ಕ ಮೇಲೆ ಆಜಾನ್‌ (ಪ್ರಾರ್ಥನೆ) ಮಾಡಲು ಆಗುತ್ತದೋ ಇಲ್ಲವೋ ಎಂದುಕೊಂಡಿದ್ದೆ. ಆದರೆ ನಾನು ಇಲ್ಲಿ ದಿನಕ್ಕೆ ಐದು ಬಾರಿ ಅಜಾನ್ ಕೇಳಬಹುದು. ಭಾರತೀಯ ಸೇನೆಯ ನಡವಳಿಕೆ ಪಾಕಿಸ್ತಾನದ ಸೇನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಇದರಿಂದ ನನಗೆ ಕಾಶ್ಮೀರದಲ್ಲಿ ಶಾಂತಿ ಇದೆ ಎಂದು ಅನಿಸುತ್ತದೆ ಎಂದಿದ್ದಾನೆ.
ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!

ಚಿಕನ್‌ ಕಬಾಬ್‌ನಿಂದ ಸಿಕ್ಕಿಬಿದ್ದ ಐಸಿಸ್‌ ಉಗ್ರ: ಈತನ ಬಂಧನದ ಕಥೆಯೇ ರೋಚಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
