ಪಂಜಾಬ್​:ವಯಸ್ಕ ಜೋಡಿ ಒಟ್ಟಿಗೇ ವಾಸಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಗಂಡುಮಕ್ಕಳು ವಯಸ್ಕನಾಗಿದ್ದು, ಮದುವೆಯಾಗುವ ವಯಸ್ಸನ್ನು ಹೊಂದಿಲ್ಲ ಎಂಬ ಮಾತ್ರಕ್ಕೆ ಆತ ಯುವತಿಯೊಬ್ಬಳ ಜತೆ ಇರಕೂಡದು ಎಂದು ನಿರಾಕರಿಸಲಾಗದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಇಬ್ಬರು ವಯಸ್ಕರಿಗೆ ಕಾನೂನಿನ ವ್ಯಾಪ್ತಿಯಲ್ಲಿ ತಮ್ಮ ಜೀವನವನ್ನು ತಾವು ಬಯಸಿದಂತೆ ಜೀವಿಸುವ ಹಕ್ಕು ಇದೆ. ನೀವು ಹೀಗೆಯೇ ಇರಿ, ಇಂಥವರ ಜತೆಯಲ್ಲಿಯೇ ಇರಿ, ಹೀಗೇ ಮಾಡಿ ಎಂದು ಪಾಲಕರು ಸೇರಿದಂತೆ ಯಾರೂ ಮಕ್ಕಳನ್ನು ಒತ್ತಾಯ ಮಾಡುವುದು ಸರಿಯಲ್ಲ, ಇದು ಕಾನೂನಿನ ಭಾಗವಲ್ಲ ಎಂದು ನ್ಯಾಯಮೂರ್ತಿ ಅಲ್ಕಾ ಸರಿನ್​ ನೇತೃತ್ವದ ಪೀಠ ಹೇಳಿದೆ.
ಒಬ್ಬ ವ್ಯಕ್ತಿಯು ಅವಳ ಅಥವಾ ಅವನ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಸಮಾಜವು ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನ ಹಕ್ಕನ್ನು ಖಾತರಿಪಡಿಸುತ್ತದೆ. ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವು ಜೀವನದ ಹಕ್ಕಿನ ಒಂದು ಪ್ರಮುಖ ಅಂಶವಾಗಿದೆ ಎಂದು ಪೀಠ ಹೇಳಿದೆ.
ಯುವತಿಯೊಬ್ಬಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೋರ್ಟ್​ ಈ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ 19 ವರ್ಷದ ಯುವಕನ ಜತೆ 21 ವರ್ಷದ ಯುವತಿ ಪ್ರೇಮಕ್ಕೆ ಸಿಲುಕಿದ್ದಳು. ಇದು ಯುವತಿಯ ಮನೆಯವರಿಗೆ ಸಹಿಸಲಾರದಾಗಿತ್ತು. ಆತನಿಂದ ದೂರ ಇರುವಂತೆ ಆಕೆಗೆ ಪಾಲಕರು ಹೇಳಿದರೂ ಅವಳು ಕೇಳಿರಲಿಲ್ಲ.
ಈ ಹಿನ್ನೆಲೆಯಲ್ಲಿ ಯುವತಿಯ ಪಾಲಕರು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಚೆನ್ನಾಗಿ ಹೊಡೆದಿದ್ದರು. ಆದರೆ ಒಂದು ದಿನ ಯುವತಿ ಮನೆಯಿಂದ ತಪ್ಪಿಸಿಕೊಂಡು ಓಡಿಹೋಗಿ, ಯುವಕನ ಜತೆ ವಾಸಿಸಲು ಶುರು ಮಾಡಿದ್ದಳು. ತನಗೆ ತನಗೆ ರಕ್ಷಣೆ ಬೇಕೆಂದು ಕೋರಿ ಆಕೆ ಕೋರ್ಟ್​ ಮೆಟ್ಟಿಲೇರಿದ್ದಳು.
ಪಾಲಕರ ಕ್ರಮವನ್ನು ಕೋರ್ಟ್​ ತೀವ್ರವಾಗಿ ಖಂಡಿಸಿದ್ದು, ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅವರಿಬ್ಬರು ಮನೆಯಾಗಲು ನಿರ್ಧರಿಸಿದ್ದು ಅದು ಸರಿಯಲ್ಲ ಎಂದು ಪಾಲಕರು ಹೇಳಿದರು. ಆಗ ನ್ಯಾಯಮೂರ್ತಿಗಳು ಈ ಮೇಲಿನಂತೆ ಹೇಳಿದ್ದಾರೆ. ಕಾನೂನಿನ ಅನ್ವಯ ಯುವಕನಿಗೆ ಮದುವೆಯ ವಯಸ್ಸು ಇಲ್ಲದೇ ಹೋದರೂ ಆತ ವಯಸ್ಕನಾಗಿರುವ ಕಾರಣ, ಯುವತಿ ಅವನೊಟ್ಟಿಗೆ ಇರಲು ಬಯಸಿದರೆ ತಪ್ಪಲ್ಲ. ಪಾಲಕರು ತಮ್ಮ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೆರಬಾರದು ಎಂದಿದ್ದಾರೆ. ಯುವತಿಗೆ ಇದಾಗಲೇ 21 ವರ್ಷ ವಯಸ್ಸಾಗಿರುವ ಕಾರಣ, ತನಗೆ ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ಆಕೆ ನಿರ್ಧರಿಸಲು ಶಕ್ಯಳಾಗಿದ್ದಾಳೆ ಎಂದಿದೆ.
ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

ಮಾವಂದಿರು ಕೊಡುವ ಜಮೀನಿಗೆ ಅವರ ಮಕ್ಕಳಿಂದ ತಕರಾರು ಬರದಿರಲು ಏನು ಮಾಡಬೇಕು?

ಮೂವರು ಪಾಕ್​ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 7 =
Remember me
