ನವದೆಹಲಿ:ವಿದ್ಯುತ್ ವೈಯರ್​ ಹಿಡಿದು ‘ಸ್ಪೈಡರ್ ಮ್ಯಾನ್’ ಶೈಲಿಯಲ್ಲಿ ಗೋಡೆ ಹತ್ತಿದ ಖತರ್ನಾಕ್​ ಖದೀಮನೊಬ್ಬ ಮನೆಯನ್ನು ದರೋಡೆ ಮಾಡಿಕೊಂಡು ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೇ.31ರ ನಡುರಾತ್ರಿ ಖಜುರಿ ಖಾಸ್ ಏರಿಯಾದ ಸುರೇಂದರ್​ ಸಿಂಗ್​ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಚಿನ್ನದ ಸರ, ಉಂಗುರ, ಮೊಬೈಲ್​ ಎಗರಿಸಿ ಕಳ್ಳ ಪರಾರಿಯಾಗಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದು ಎಲ್ಲೆಡೆ ವೈರಲ್​ ಆಗಿದೆ.
ನಡುರಾತ್ರಿ ಎರಡೂಕಾಲು ಗಂಟೆ ಸುಮಾರಿಗೆ ಮನೆಯ ಗೇಟ್​ ಮೂಲಕ ನುಸುಳಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಈ ಕುರಿತು ಮಾತನಾಡಿರುವ ಸುರೇಂದರ್​ ಸಿಂಗ್​ ಅವರು, “ಮನೆಯಲ್ಲಿ 8 ಮಂದಿ ಇದ್ದೆವು. ಬೀರುವಿನ ಬೀಗ ಹಾಕಿರಲಿಲ್ಲ. ಕಳ್ಳ ಬಂದು ಚಿನ್ನದ ಸರ, ಉಂಗುರ, ಮೊಬೈಲ್ ಕಳ್ಳತನ ಮಾಡಿದ್ದಾನೆ. ಆ ರಾತ್ರಿ ನನ್ನ ತಾಯಿ ಕಳ್ಳನನ್ನು ನೋಡಿ ಕೂಗಿಕೊಂಡಿದ್ದಾರೆ. ಕೂಡಲೇ ಕಳ್ಳ ಪರಾರಿಯಾಗಿದ್ದಾನೆ. ನಾವು ತಕ್ಷಣ ಪೊಲೀಸರಿಗೆ ಮಾಹಿತಿ ಕೊಟ್ಟೆವು ಎಂದಿದ್ದಾರೆ.
ಸಿಸಿಟಿವಿಯನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇಲ್ಲಿದೆ ನೋಡಿ ವಿಡಿಯೋ
Thief scrambles across walls to rob house, his 'Spider-Man' moves caught on cameraRead@ANIStory |https://t.co/DX2PikiZC2#SpiderMan#DelhiCrime#Delhi#thiefpic.twitter.com/gW8AqzQX9u— ANI Digital (@ani_digital)June 3, 2022
Thief scrambles across walls to rob house, his 'Spider-Man' moves caught on cameraRead@ANIStory |https://t.co/DX2PikiZC2#SpiderMan#DelhiCrime#Delhi#thiefpic.twitter.com/gW8AqzQX9u
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
