ನೋಯ್ಡಾ (ಉತ್ತರ ಪ್ರದೇಶ): ಒಮ್ಮೊಮ್ಮೆ ಏನೇನೋ ವಿಚಿತ್ರ ಘಟನೆಗಳು ನಡೆಯುತ್ತವೆ. ಯಾರೂ ಊಹಿಸಲಾಗದ, ಸುಲಭದಲ್ಲಿ ನಂಬಲೂ ಸಾಧ್ಯವಾಗದಂಥ ಘಟನೆಗಳು ಜರುಗುತ್ತವೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಅದೂ ಕಳ್ಳನೊಬ್ಬನ ವಿಚಿತ್ರ ಘಟನೆ ಇದು.
ಸಾಮಾನ್ಯವಾಗಿ ನಮ್ಮಲ್ಲಿರುವ ಯಾವುದಾದರೂ ವಸ್ತು ಚೆನ್ನಾಗಿ ಇಲ್ಲದಿದ್ದರೆ, ಅಗ್ಗದ್ದಾಗಿದ್ದರೆ ಅಥವಾ ಹಾಳಾಗಿ ಹೋಗಿದ್ದರೆ ಇದನ್ನೇದಾದರೂ ಕಳ್ಳ ಎತ್ತಾಕಿಕೊಂಡು ಹೋದರೆ ಇದರ ಸ್ಥಿತಿ ನೋಡಿ ವಾಪಸ್​ ಕೊಟ್ಟು ಹೋಗುತ್ತಾನೆ ಎಂದೋ ಇಲ್ಲವೇ ಇದನ್ನು ನೋಡಿದ ಕಳ್ಳ ಅಯ್ಯೋ ಪಾಪ ಎಂದು ಹೊಸದನ್ನು ತಂದುಕೊಡುತ್ತಾನೆ ಎಂದು ಮಾತನಾಡಿಕೊಳ್ಳುವುದು ಸಾಮಾನ್ಯ. ಅಂಥದ್ದೇ ಒಂದು ಘಟನೆ ಆದರೆ ಸ್ವಲ್ಪ ಡಿಫರೆಂಟ್​ ಆಗಿರುವ ಘಟನೆ ಇದು.
Little numb as I write this.Sector 52 Noida Metro
A fellow with a black mask snatches my phone while I was messaging. I run. He turns back.. runs towards me.
"Bhai mujhe laga One Plus 9 pro model hai" Drops it on the floor and runs again.#WhatWasThis
— Debayan Roy (@DebayonRoy)April 5, 2021

ಹಿರಿಯ ವರದಿಗಾರರಾದ ದೆಬಾಯನ್​ ರಾಯ್​ ಎಂಬುವವರ ಸ್ಮಾರ್ಟ್​ಫೋನ್​ನ ಕಳ್ಳತನದ ಘಟನೆ ಇದಾಗಿದೆ. 52 ಮೆಟ್ರೋ ನಿಲ್ದಾಣದಲ್ಲಿ ರೆಬಾಯನ್​ ಅವರು ನಿಂತುಕೊಂಡಿದ್ದ ಸಂದರ್ಭದಲ್ಲಿ ಕಪ್ಪು ಬಣ್ಣದ ಮಾಸ್ಕ್​ ಹಾಕಿಕೊಂಡು ಬಂದ ವ್ಯಕ್ತಿ ಅವರ ಕೈಲಿದ್ದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​ 10 ಪ್ಲಸ್​​ನ್ನು ಎಗರಿಸಿಕೊಂಡು ಹೋಗಿಬಿಟ್ಟಿದ್ದಾನೆ! ಅಯ್ಯೋ ನನ್ನ ಫೋನು ಎಂದು ರೆಬಾಯನ್​ ಅವರು ಕೂಗುವ ಮೊದಲೇ ಆ ಕಳ್ಳ ಅದನ್ನು ವಾಪಸ್​ ಕೊಟ್ಟುಬಿಟ್ಟಿದ್ದಾನೆ!
ಅಷ್ಟಕ್ಕೂ ಅದೇನು ಕೆಟ್ಟುಹೋದ, ಒಡೆದುಹೋದ ಫೋನೂ ಆಗಿರಲಿಲ್ಲ, ತೀರಾ ಹಳೆಯದ್ದೂ ಆಗಿರಲಿಲ್ಲ. ಉತ್ತಮ ಬೆಲೆಬಾಳುವ ಒಳ್ಳೆಯ ಫೋನೇ ಆಗಿತ್ತು. ಇಷ್ಟಿದ್ದ ಮೇಲೂ ಆ ಕಳ್ಳ ಏಕೆ ಅದನ್ನು ವಾಪಸ್​ ಕೊಟ್ಟ ಎಂದು ಕೇಳಿ, ಆ ಪತ್ರಕರ್ತನಿಗೆ ತಮ್ಮ ಕಣ್ಣು-ಕಿವಿಗಳನ್ನೇ ನಂಬಲಾಗಲಿಲ್ಲವಂತೆ.
ಅಷ್ಟಕ್ಕೂ ಆ ಕಳ್ಳನಿಗೆ ಏಕೆ ವಾಪಸ್​ ಕೊಟ್ಟೆ ಎಂದು ಕೇಳುವ ಮೊದಲೇ ಇವರ ಮುಖವನ್ನು ನೋಡಿದ ಆ ಕಳ್ಳ… ಇದನ್ನು ನಾನು ಒನ್​ಪ್ಲಸ್​ 9 ಪ್ರೋ ಎಂದು ಭಾವಿಸಿ ಎಗರಿಸಿದ್ದೆ. ನನಗೆ ಅದೇ ಫೋನ್​ ಬೇಕಿತ್ತು. ಆದರೆ ಇದು ಅದಲ್ಲ ಬೇರೆ ಕಂಪೆನಿಯದ್ದು ಎಂದು ತಿಳಿಯಿತು. ಅದಕ್ಕೆ ವಾಪಸ್​ ಕೊಟ್ಟೆ. ಕ್ಷಮಿಸಿ’ ಎಂದು ಹೇಳಿ ಅದೇ ವೇಗದಲ್ಲಿ ಪರಾರಿಯಾದನಂತೆ!
ಈ ಬಗ್ಗೆ ರಾಯ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.
ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ- ಎಲ್ಲೆಲ್ಲಿ ನಿಷೇಧ? ಏನಿರುತ್ತೆ? ಏನಿರಲ್ಲ? ರಾತ್ರಿ ಬಂದ್​ ಏಕೆ? ಇಲ್ಲಿವೆ ಡಿಟೇಲ್ಸ್​

ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಪೈಲಟ್​ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು


ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಪೈಲಟ್​ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
