ಹೈದರಾಬಾದ್​​:ಕೆಲವರು ತಮ್ಮ ಜೀವನೋಪಾಯಕ್ಕೆ ಹಲವಾರು ಕಠಿಣ, ಸಾಹಸಮಯ ಕೆಲಸಕ್ಕೆ ಕೈಹಾಕುವುದಿದೆ. ಆದರೆ ಕೆಲವರಿಗೆ ಲಕ್ಷ್ಮಿ ಕುಳಿತಲ್ಲಿಯೇ ಒಲಿದುಬಿಡುತ್ತಾಳೆ. ಏನೂ ಕೆಲಸ ಮಾಡದಿದ್ದರೂ ಇದ್ದಲ್ಲಿಗೇ ಹಣ ಅವರ ಕಾಲಬುಡಕ್ಕೆ ಬಂದು ಬೀಳುತ್ತದೆ. ಅದರಲ್ಲಿಯೂ ಕೆಲವು ಸೆಲೆಬ್ರಿಟಿಗಳ ಮೇಲೆ ಜನರಿಗೆ ಅದೆಷ್ಟು ಹುಚ್ಚು ಅಭಿಮಾನ ಇರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಹುಚ್ಚು ಅಭಿಮಾನದ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ.
ಹೀಗೆ ಲಕ್ಷಗಟ್ಟಲೆ ಅಭಿಮಾನಿಗಳನ್ನು ಹೊಂದಿದಾಕೆ ಟಿವಿ ರಿಯಾಲಿಟಿ ಷೋ ತಾರೆ ಸ್ಟೇಫನಿ ಮಾಟಿಯೋ ಎಂಬ ಸುಂದರಿ.
ಈಕೆ ಮಾಡುವ ಕೆಲಸ ಕೇಳಿದರೆ ನೀವು ‘ಥೂ ಅಸಹ್ಯ’ ಎನ್ನಲೂ ಬಹುದು, ಇಲ್ಲವೇ ಇದು ಸುಳ್ಳು ಸುದ್ದಿ ಎಂದೂ ಹೇಳಬಹುದು. ಏನೇ ಅಂದರೂ ಇದು ಮಾತ್ರ ಸತ್ಯ. ಖುದ್ದು ಅವಳೇ ಈ ಬಗ್ಗೆ ವರ್ಣಿಸಿದ್ದು, ಈಕೆಯ ‘ಫಲಾನುಭವಿಗಳು’ ಕೂಡ ಬಹಳ ಸಂತಸದಿಂದ ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಈಕೆ ಮಾಡುತ್ತಿರುವುದು ಏನೆಂದರೆ ತಾನು ಬಿಡುವ ವಾಯು ಆಡುಭಾಷೆಯಲ್ಲಿ ಹೇಳಬೇಕೆಂದರೆ ‘ಹೂಂಸು’ ಇದನ್ನು ಮಾರಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ಸಾಕು ಮೂಗುಮುಚ್ಚಿಕೊಳ್ಳುವವರೇ ಹೆಚ್ಚು. ಆದರೆ ಇದು ಸತ್ಯ.  ಹೂಂಸನ್ನು ಮಾರಾಟ ಮಾಡಿ ಈಕೆ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಾಳಂತೆ!
ಈಕೆ ತನ್ನ ವಾಯುವನ್ನು ಜಾರ್​ನಲ್ಲಿ ಹೂವಿನ ದಳಗಳಿಂದ ಪ್ಯಾಕ್ ಮಾಡಿ ತನ್ನ ಅಭಿಮಾನಿಗಳಿಗೆ ನೀಡುತ್ತಿದ್ದಾಳೆ. ಹೀಗೆ ಮಾಡುವುದರಿಂದ  ಹೂವಿನ ದಳಗಳು ಮತ್ತಷ್ಟು ಪರಿಮಳಯುಕ್ತವಾಗಿಸುತ್ತವಂತೆ. ಈಕೆಯ ಅಭಿಮಾನಿಗಳಿಂದ ಹೂಂಸಿಗೆ ಬೇಡಿಕೆ ಬರುತ್ತಲೇ ಇದೆ.
ಈ ಬಗ್ಗೆ ಈಕೆಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ತನ್ನ ಹೂಂಸನ್ನು ಸೆರೆ ಹಿಡಿದು ಜಾರ್​ನಲ್ಲಿ ಹಾಕುತ್ತಾಳೆ ಎಂದು ಈಕೆಯೇ ಹೇಳಿಕೊಂಡಿದ್ದಾರೆ. ರಿಯಾಲಿಟಿ ಟಿವಿ ಶೋ ’90 ಡೇ ಫಿಯಾನ್ಸಿ’ ನಲ್ಲಿ ಕಾಣಿಸಿಕೊಂಡ ನಂತರ ಈಕೆ ಮೊದಲು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು ಮತ್ತು ಅಂದಿನಿಂದ ತನ್ನದೇ ಆದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾಳೆ. ಅಷ್ಟಕ್ಕೂ ಈಕೆಯ ಹೂಸನ್ನು ತೆಗೆದುಕೊಂಡು ಅಭಿಮಾನಿಗಳು ಅದೇನು ಮಾಡುತ್ತಾರೋ ಗೊತ್ತಿಲ್ಲ!
ಬೀನ್ಸ್, ಮೊಸರು, ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಮೂಲಕ ಗ್ಯಾಸ್​​ನನ್ನು ಹೆಚ್ಚು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಈಕೆಯ ಮಾರಾಟ ಇಷ್ಟಕ್ಕೇ ಮುಗಿದಿಲ್ಲ. ಇವಳು ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಮತ್ತು ಸಾಬೂನುಗಳಿಗೂ ಬೇಡಿಕೆಯಿದ್ದು ಇದನ್ನೂ ಮಾರಾಟ ಮಾಡುತ್ತಿದ್ದಾಳೆ.
ಅವಳ ಬಾಯಲ್ಲೇ ಈ ಬಗ್ಗೆ ಕೇಳಿ…
A post shared by Stephanie Matto (@stepankamatto)

ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ…

VIDEO: ಚಿತ್ರದುರ್ಗದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಬೆಂಗಳೂರಿನ ಖತರ್ನಾಕ್‌ ಗ್ಯಾಂಗ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
