ವಾರಣಾಸಿ:ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಬದಲು ವಸ್ತ್ರಸಂಹಿತೆಯನ್ನು ಕಾಪಾಡಿಕೊಂಡು ಬರುವಂತೆ ಈ ಹಿಂದೆ ಹೈಕೋರ್ಟ್​ ನ್ಯಾಯಮೂರ್ತಿಗಳು ಆದೇಶಿಸಿದ್ದಾಗ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವು. ಇದೀಗ ಅಂಥದ್ದೇ ಕೊಲೆ ಬೆದರಿಕೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಆದೇಶ ನೀಡಿರುವ ನ್ಯಾಯಾಧೀಶರಿಗೆ ಬಂದಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿದ ನ್ಯಾಯಾಧೀಶ ವಾರಣಾಸಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಇಸ್ಲಾಮಿಕ್ ಆಗಾಜ್ ಮೂವ್​ಮಂಟ್​ ಎಂಬ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ.
ಕಳೆದ ಮೇ 20ರಂದು ಸುಪ್ರೀಂಕೋರ್ಟ್ ಜ್ಞಾನವಾಪಿ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಿಂದ ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜ್ಞಾನವ್ಯಾಪಿ ಮಸೀದಿಗೆ ಸಂಬಂಧಿಸಿ ಸಮೀಕ್ಷೆಯನ್ನು ಮಾಡಲು ಆಯೋಗವನ್ನು ರಚಿಸಲು ಆದೇಶಿಸಿದ್ದರು. ಈ ಬೆನ್ನಲ್ಲೇ ಸಿವಿಲ್ ನ್ಯಾಯಾಧೀಶರಿಗೆ ಬೆದರಿಕೆ ಕರೆಗಳು ಬಂದಿವೆ.
ಕೈಬರಹದ ಪತ್ರದಲ್ಲಿರುವ ಇಸ್ಲಾಮಿಕ್ ಅಗಾಜ್ ಚಳವಳಿಯ ಅಧ್ಯಕ್ಷ ಕಾಸಿಫ್ ಅಹ್ಮದ್ ಸಿದ್ದಾಕಿ ಈ ಪತ್ರವನ್ನು ಬರೆದಿದ್ದಾನೆ. ನ್ಯಾಯಾಧೀಶರು ಕೂಡ ಕೇಸರಿ ಬಣ್ಣದ ಪರವಾಗಿಯೇ ಇದ್ದಾರೆ ಎಂದು ಹೇಳಿ ಜೀವ ಬೆದರಿಕೆಯನ್ನು ಹಾಕಿದ್ದಾನೆ. ಇದರ ಜೊತೆಗೆ ಪತ್ರದಲ್ಲಿ ಪ್ರಧಾನ ಮಂತ್ರಿ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿವೆ.
ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ), ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ವಾರಣಾಸಿ ಪೊಲೀಸ್ ಕಮಿಷನರೇಟ್‌ಗೆ ಪತ್ರ ಬರೆದು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ನ್ಯಾಯಾಧೀಶರ ಭದ್ರತೆಗಾಗಿ ಈಗಾಗಲೇ ಒಂಬತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗ ವಿಷಯದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಧೀಶರ ರಕ್ಷಣೆಗೆ ಹತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
‘ದಿ ಕಶ್ಮೀರ್ ಫೈಲ್ಸ್’ ಬಳಿಕ ಮತ್ತೊಂದು ಕರಾಳ ಅಧ್ಯಾಯದ ಸತ್ಯ ದರ್ಶನ! ನಿರ್ದೇಶಕ ಏನು ಹೇಳಿದ್ದಾರೆ ಕೇಳಿ…

ವೈದ್ಯಕೀಯ ಲೋಕದಲ್ಲೊಂದು ಅದ್ಭುತ ಸಂಶೋಧನೆ: ಆರು ತಿಂಗಳಿನಲ್ಲಿ ಸಂಪೂರ್ಣ ಮಾಯವಾಯ್ತು ಕ್ಯಾನ್ಸರ್!

ನಾಳೆ ಹಸೆಮಣೆಯಲ್ಲಿ ನಟಿ ನಯನತಾರಾ, ವಿಘ್ನೇಶ್ ಜೋಡಿ​: ಕೊನೇ ಕ್ಷಣ ತಿರುಪತಿಯಲ್ಲಿ ಮದ್ವೆ ಕ್ಯಾನ್ಸಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + three =
Remember me
