ದಹಿಸರ್‌ (ಮುಂಬೈ):‘ಯೇ ಮೌತ್ ಕಾ ಪೈಗಾಮ್ ಹೈ (ಇದು ಸಾವಿನ ಸಂದೇಶ)’ ಎಂದು ಬರೆದಿರುವ ಪಾರ್ಸೆಲ್‌ ಒಂದು ಇಲ್ಲಿಯ ಶಿಕ್ಷಕನ ಮನೆ ಬಾಗಿಲಿಗೆ ಬಂದಿದೆ. ಈ ಪಾರ್ಸೆಲ್‌ ಒಳಗೆ ಎರಡು 7.66 ಎಂಎಂ ಬುಲೆಟ್‌ಗಳನ್ನು ಇಡಲಾಗಿದ್ದು, ಸಾವಿನ ಎಚ್ಚರಿಕೆ ನೀಡಲಾಗಿದೆ.
ಮುಂಬೈ ದಹಿಸರ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಉದ್ಯೋಗದಲ್ಲಿರುವ ಶಿಕ್ಷಕನಿಗೆ ಈ ಕೊಲೆ ಬೆದರಿಕೆ ಬಂದಿದೆ. ಅದರಲ್ಲಿ ಕಳುಹಿಸಿರುವ ವ್ಯಕ್ತಿಗಳ ಹೆಸರು, ವಿಳಾಸ ಏನೂ ಇಲ್ಲ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಶಿಕ್ಷಕ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಂಥ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬ. ತಮ್ಮ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಲಾಗಿದೆ ಎನ್ನುವುದು ಶಿಕ್ಷಕನ ಆರೋಪವಾಗಿತ್ತು. ಈಗ ಅದೇ ದೂರು ದಾಖಲು ಮಾಡಿರುವ ವ್ಯಕ್ತಿಯೇ ಈ ಬೆದರಿಕೆ ಪತ್ರ ಮತ್ತು ಸಂದೇಶ ಕಳುಹಿಸಿರುವುದಾಗಿ ಶಿಕ್ಷಕ ಹೇಳಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.
VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

ಜೈಲಲ್ಲೇ ವರಮಹಾಲಕ್ಷ್ಮಿ ಹಬ್ಬ- ಜಾಮೀನು ಸಿಕ್ಕರೂ ಬಿಡುಗಡೆಯಿಲ್ಲ… ಕೊಟ್ಟ ಭದ್ರತೆಯೂ ವಾಪಸ್‌!

ಆಸ್ತಿಗಾಗಿ ಮಗನನ್ನು ಕಾಲುವೆಗೆ ನೂಕಿ ಕೊಂದಿದ್ದ ತಂದೆಗೆ ಜೈಲಲ್ಲಿ ಕಾದುಕುಳಿತಿದ್ದ ಯಮರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
