ಲಖನೌ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೆಲ ತಿಂಗಳ ಹಿಂದಷ್ಟೇ ಬೆದರಿಕೆ ಪತ್ರ ಬಂದಿತ್ತು. ಅದೇ ಮಾದರಿಯಲ್ಲಿ ಈಗ ಮತ್ತೊಂದು ಪತ್ರ ಬಂದಿದ್ದು, ಅದರಲ್ಲಿ ಪತ್ರ ಬರೆದಿರುವವ ತನ್ನ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯನ್ನೂ ನಮೂದು ಮಾಡಿದ್ದಾನೆ!ಇತ್ತೀಚೆಗಷ್ಟೇ ಲಖನೌ ಸೇರಿದಂತೆ ಹಲವು ಜಿಲ್ಲೆಗಳ ಧಾರ್ಮಿಕ ಸ್ಥಳಗಳನ್ನು ಸ್ಫೋಟಿಸುವ ಬೆದರಿಕೆ ಪತ್ರಗಳು ಬಾಂಬ್‌ಗಳೊಂದಿಗೆ ಬಂದಿದ್ದವು. ಇದರ ಬೆನ್ನಲ್ಲೇ ಇದೀಗ ಮತ್ತೆ ಬೆದರಿಕೆ ಪತ್ರ ಬಂದಿದೆ. ಯೋಗಿ ಅವರ ಜತೆ ಭಾರತೀಯ ಕಿಸಾನ್ ಮಂಚ್​​​​ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೂ ಈ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಲಕೋಟೆಯ ಮೇಲೆ ತನ್ನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬರೆದಿರುವ ವ್ಯಕ್ತಿ ಈ ಬೆದರಿಕೆ ಪತ್ರ ಕಳಿಸಿದ್ದಾನೆ.ನನ್ನ ಹೆಸರು ಮೊಹಮ್ಮದ್ ಅಜ್ಮಲ್, ನನ್ನ ವಿಳಾಸ, ಮೊಬೈಲ್‌ ಸಂಖ್ಯೆ ಎಲ್ಲವನ್ನೂ ನೀಡಿದ್ದೇನೆ. ನೀವು ನನಗೆ ಹಾನಿ ಮಾಡಲು ಸಾಧ್ಯವಿಲ್ಲ. ಗೋಶಾಲಾ ಸಮೀಕ್ಷೆ ನಿಲ್ಲಿಸಿ. ಗೋಶಾಲೆ ಮತ್ತು ಗೋಸಂರಕ್ಷಣೆ ಹೆಸರಿನಲ್ಲಿ ನಮಗೆ ಸಾಕಷ್ಟು ತೊಂದರೆ ನೀಡಿದ್ದೀರಿ. ಇದೇ ನಿನಗೆ ದುರಾದೃಷ್ಟ ತಂದಿದೆ. ಇದರೊಂದಿಗೆ ಸುಧಾರಿಸಿಕೊಳ್ಳದಿದ್ದರೆ, ಯಾರೂ ಯಾರಿಗೂ ಮಾಡದಂತಹ ಶಿಕ್ಷೆ ನೀಡುತ್ತೇನೆ. ನಿಮ್ಮ ಕೌಂಟ್‌ಡೌನ್ ಇಂದಿನಿಂದ ಪ್ರಾರಂಭವಾಗಿದೆ. ಮುಖ್ಯಮಂತ್ರಿಗೆ ಭದ್ರತೆ ಇದೆ, ಇಲ್ಲದಿದ್ದರೆ ಈಗಾಗಲೇ ಸ್ಫೋಟಿಸುತ್ತಿದ್ದೆ ಎಂದಿರುವ ವ್ಯಕ್ತಿ ಇದರಲ್ಲಿ ರಂಜಿತ್ ಬಚ್ಚನ್ ಮತ್ತು ಕಮಲೇಶ್ ತಿವಾರಿ ಹತ್ಯೆ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ.ಉನ್ನಾವೋದ ಅಂಚೆ ಕಚೇರಿಯಿಂದ ಪತ್ರ ರವಾನೆಯಾಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅದರ ಮೇಲೆ ವಿಳಾಸವನ್ನು ದೇವಬಂದ್ ಎಂದು ಬರೆಯಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೇವೇಗೌಡ್ರ ಜತೆ ಇಡ್ಲಿ, ವಡೆ ಸವಿದು ತೀಕ್ಷ್ಣವಾಗಿ ಟ್ವೀಟ್‌ ಮಾಡಿದ ಸಂಸದ ಸ್ವಾಮಿ! ರಾಜಕೀಯ ವಲಯದಲ್ಲಿ ಕೋಲಾಹಲ
ಒಲ್ಲದ ಮೊಮ್ಮಗನ ಹುಟ್ಟುತ್ತಲೇ ದತ್ತು ಕೊಟ್ಟ ಅಜ್ಜಿ: ವರ್ಷದ ಹೋರಾಟದ ಬಳಿಕ ಅಮ್ಮನ ಮಡಿಲು ಸೇರಿದ ಕಂದ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 2 =
Remember me
