ಅಂಬರನಾಥ್​ (ಮಹಾರಾಷ್ಟ್ರ):ಗನ್​, ಚೂರಿಗಳನ್ನು ತಂದು ನಿಮ್ಮ ಮುಂದೆ ಹಿಡಿದರೆ ಹೇಗಿರುತ್ತದೆ? ಇದನ್ನು ಕೇಳಿದರೇನೆ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಆದರೆ ಶಸ್ತ್ರಸಜ್ಜಿತರಾಗಿ ಬಂದ ಡಕಾಯಿತರನ್ನು ಇಲ್ಲೊಂದು ಯುವಕರ ತಂಡ ಸದೆಬಡಿದು ಹೊಡೆದೋಡಿಸಿ ದಿಟ್ಟತನ ಮೆರೆದಿದೆ.
ಇದು ನಡೆದಿರುವುದು ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ. ಇಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಈ ಡಕಾಯಿತರ ಗುಂಪು ಹಾಡ ಹಗಲೇ ನುಗ್ಗಿದೆ. ಮಧ್ಯಾಹ್ನ ಸುಮಾರು 1.30ರ ವೇಳೆ ಡಕಾಯಿತರು ನುಗ್ಗಿದ್ದಾರೆ. ಅವರು ಚಾಕು,ಚೂರಿ ಮಾತ್ರವಲ್ಲದೇ ಗನ್​ಗಳನ್ನೂ ತೆಗೆದುಕೊಂಡು ಬಂದಿದ್ದರು.
#WATCHMaharashtra: Three people try to catch armed robbers who were fleeing from a jewellery shop after looting it, today in Sarvodaya Nagar of Ambernath in Thane dist. The robbers managed to escape after injuring them. Police investigation underway. Injured shifted to hospital.pic.twitter.com/IjpbDAPO1e
— ANI (@ANI)January 11, 2021

ಅಂಗಡಿ ಒಳಗೆ ನುಗ್ಗಿದ ಅವರು ಅಲ್ಲಿ ಇದ್ದ ಕೆಲಸಗಾರ 25 ವರ್ಷದ ಭೈರವ್ ಸಿಂಗ್​ನನ್ನು ಚೂರಿಯಿಂದ ತಿವಿದಿದ್ದಾರೆ. ಇದೇ ವೇಳೆ ಸಮೀಪವೇ ಇದ್ದ ಯುವಕರು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಗನ್​, ಚೂರಿಗಳನ್ನೂ ಲೆಕ್ಕಿಸದೇ ಮುನ್ನುಗ್ಗಿದ್ದಾರೆ. ಡಕಾಯಿತರ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಈ ರೀತಿ ಮಾಡುತ್ತಿದ್ದಂತೆಯೇ ಕೆಲವು ಸ್ಥಳೀಯರೂ ಸೇರಿಕೊಂಡಿದ್ದಾರೆ.
ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಜನರನ್ನು ಕಂಡು ದರೋಡೆಕೋರರು ಓಡಿ ಹೋಗಿದ್ದಾರೆ. ಆದರೆ ಹೋಗುವ ಮುನ್ನ ತಾವು ತಂದಿದ್ದ ಗನ್​ನಿಂದ ಶೂಟ್​ ಮಾಡಿದ್ದಾರೆ. ಇದರಿಂದಾಗಿ ಇಬ್ಬರು ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೈರವ್ ಸಿಂಗ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!

ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
