ನವದೆಹಲಿ:ವಿಶ್ವದ ಅತ್ಯಂತ ಬಲಿಷ್ಠ ರಫೇಲ್ ಫೈಟರ್ ಜೆಟ್‍ಗಳನ್ನು ಹೊಂದಿರುವ ಭಾರತೀಯ ವಾಯುಪಡೆಗೆ (ಐಎಎಫ್) ನವೆಂಬರ್ 5ರಂದು ಮತ್ತೆ ಮೂರು ರಫೇಲ್ ಯುದ್ಧ ವಿಮಾನ ಸೇರ್ಪಡೆಯಾಗಲಿದೆ. ಇತ್ತೀಚೆಗಷ್ಟೇ ಐದು ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಂಡ ಬೆನ್ನಲ್ಲೇ ವಾಯುಪಡೆಗೆ ಮತ್ತಷ್ಟು ಬಲತುಂಬಲು ಇನ್ನೂ ಮೂರು ಸೇರ್ಪಡೆಯಾಗಲಿದೆ.
ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನ ಸೆಪ್ಟೆಂಬರ್ 10ರಂದು ವಾಯುಪಡೆಗೆ ಸೇರ್ಪಡೆಯಾಗಿತ್ತು. ಈ ಸಂದರ್ಭದಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್, ಭಾರತದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹಾಜರಿದ್ದರು.
ಇದೀಗ ಜುಲೈ 26ರಂದು ಫ್ರಾನ್ಸ್ ನಿಂದ ಅಬುಧಾಬಿ ಮೂಲಕ ಭಾರತಕ್ಕೆ ಐದು ರಫೇಲ್ ಯುದ್ಧ ವಿಮಾನ ಹೊರಟಿತ್ತು. ಜುಲೈ 29ರಂದು ಅಂಬಾಲಾ ವಾಯುನೆಲೆಗೆ ಬಂದಿಳಿದಿತ್ತು. ಈಗಾಗಲೇ ಭಾರತದ ವಾಯುಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಲಡಾಖ್​ನ ಗಡಿಪ್ರದೇಶದಲ್ಲಿ ನೆಲೆ ನಿಂತಿದೆ.
ಇದನ್ನೂ ಓದಿ:ಮಲಗಿದ್ದ ಅಧಿಕಾರಿಗಳ ಬಡಿದೆಬ್ಬಿಸಿದ ಬಾಲಕಿ! ಹದಗೆಟ್ಟ ರಸ್ತೆಯ ರಿಪೇರಿ ಮಾಡಿಸಿದ್ದೇ ರೋಚಕ…
ನವೆಂಬರ್ 5ರಂದು ಮೂರು ರಫೇಲ್ ಪೈಟರ್ ಜೆಟ್‍ಗಳು ಈಶಾನ್ಯ ಫ್ರಾನ್ಸ್‍ನ ಡಸೋಲ್ಟ್ ಏವಿಯೇಷನ್ ಸಂಸ್ಥೆಯಿಂದ ನೇರವಾಗಿ ಭಾರತಕ್ಕೆ ಬಂದಿಳಿಯಲಿವೆ. ಈ ಪೈಟರ್ ಜೆಟ್‍ಗಳು ಮಾರ್ಗ ಮಧ್ಯೆ ಇಂಧನಕ್ಕಾಗಿ ಎಲ್ಲೂ ನಿಲುಗಡೆಯಾಗುವುದಿಲ್ಲ. ಗಗನದಲ್ಲೇ ಅಗತ್ಯವಾದ ಇಂಧನ ಭರ್ತಿ ಮಾಡಿಕೊಂಡು ಭಾರತದ ಐಎಎಫ್ ವಾಯು ನೆಲೆಗೆ ಆಗಮಿಸಲಿವೆ. ಈಗಾಗಲೇ ಫ್ರಾನ್ಸ್‌ನಲ್ಲಿ ಐಎಎಫ್ ಫೈಟರ್ ಪೈಲಟ್ ತರಬೇತಿಗಾಗಿ ಏಳು ರಾಫೆಲ್ ಯೋಧರನ್ನು ಬಳಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಇದಲ್ಲದೆ ಫ್ರಾನ್ಸ್‍ನ ಇನ್ನು 16 ಯುದ್ಧ ವಿಮಾನಗಳು ಏಪ್ರಿಲ್ ಅಂತ್ಯದೊಳಗೆ ನಾಲ್ಕು ಹಂತಗಳಲ್ಲಿ ಭಾರತಕ್ಕೆ ಆಗಮಿಸಲಿವೆ. ಇವುಗಳಲ್ಲದೆ ಜನವರಿಯಲ್ಲಿ 3 ಮತ್ತು ಮಾರ್ಚ್‍ನಲ್ಲಿ ಇನ್ನೂ 3 ಸಮರ ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಕೊನೆಯ ಹಂತದಲ್ಲಿ ಏಪ್ರಿಲ್ ಅಂತ್ಯದೊಳಗೆ 7 ರಫೇಲ್ ಜೆಟ್‍ಗಳು ಐಎಎಫ್‍ಗೆ ಸೇರ್ಪಡೆಯಾಗಲಿವೆ. ಇದರೊಂದಿಗೆ ಭಾರತಕ್ಕೆ ಫ್ರಾನ್ಸ್ ನಿಂದ ಒಟ್ಟು 21 ರಫೇಲ್ ವಿಮಾನಗಳು ಸೇರ್ಪಡೆಯಾದಂತಾಗಿವೆ.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫ್ರಾನ್ಸ್ ಜತೆ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಒಟ್ಟು 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದವಾಗಿರುವುದಾಗಿ ವರದಿ ತಿಳಿಸಿದೆ.
ಹೆಂಡತಿಗೆ ಬೇರೆ ಸಂಬಂಧ ಇದ್ದಾಗ ಡಿವೋರ್ಸ್​ ಕೊಟ್ರೆ ಜೀವನಾಂಶ ಕೊಡಬೇಕಾಗತ್ತಾ?

ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
