ಶ್ರೀನಗರ:ಕರೊನಾ ವೈರಸ್​, ರೂಪಾಂತರಿ ಕರೊನಾ ಏನೇ ಇದ್ದರೂ ಗಡಿಭಾಗದಲ್ಲಿ ಉಗ್ರರ ಕಾಟ ಮಾತ್ರ ತಪ್ಪುತ್ತಿಲ್ಲ. ಅನಧಿಕೃತವಾಗಿ ಭಾರತದೊಳಗೆ ನುಸುಳುವ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಭಾರತೀಯ ಯೋಧರು ಅವರಿಗೆ ತಕ್ಕ ಉತ್ತರ ನೀಡುತ್ತಲಿದ್ದಾರೆ.
ಇಂದು ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಶ್ರೀನಗರದ ಲಾವಾಪೋರಾ ಪ್ರದೇಶದಲ್ಲಿ ಎನ್​ಕೌಂಟರ್​ ನಡೆದಿದೆ. ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಉಗ್ರರ ಅಡಗುದಾಣದ ಸಮೀಪ ಹೋದಾಗ, ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹೀಗೆ ರಾತ್ರಿಯಿಂದ ಬೆಳಗಿನಜಾವದವರೆಗೆ ಎನ್​ಕೌಂಟರ್​ ನಡೆದಿದೆ.
ಇದರಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದಾರೆ. ಎನ್​ಕೌಂಟರ್​ ಪ್ರಕ್ರಿಯೆ ಇನ್ನೂ ಮುಂದುವರೆದಿರುವುದಾಗಿ ಸೇನೆ ಹೇಳಿದೆ.
ಮಾವಂದಿರು ಕೊಡುವ ಜಮೀನಿಗೆ ಅವರ ಮಕ್ಕಳಿಂದ ತಕರಾರು ಬರದಿರಲು ಏನು ಮಾಡಬೇಕು?

ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!

ಮಹಿಳೆಯೊಬ್ಬರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ ಅಮಿತಾಭ್​: ಅದಕ್ಕೆ ಕಾರಣ ಒಂದು ಕವನ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 6 =
Remember me
