ಸುಡಾನ್​ (ದಕ್ಷಿಣ ಆಫ್ರಿಕಾ):ಮನುಷ್ಯರು ತಪ್ಪು ಮಾಡಿದರೆ ಕೋರ್ಟ್​ಗಳು ಶಿಕ್ಷೆ ನೀಡುವುದು ಎಲ್ಲಾ ದೇಶಗಳಲ್ಲಿಯೂ ಇರುವಂಥದ್ದೇ. ಅವರವರ ಕಾನೂನಿಗೆ ಅನುಸಾರವಾಗಿ ವಿಭಿನ್ನ ರೀತಿಯ ಶಿಕ್ಷೆಗಳು ಪ್ರಕಟಗೊಳ್ಳುತ್ತವೆ. ಆದರೆ ಇಲ್ಲೊಂದು ಕುತೂಹಲ ಎನ್ನುವ ಘಟನೆಯಲ್ಲಿ ಕುರಿಯೊಂದಕ್ಕೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಇಂಥದ್ದೊಂದು ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದ ಸುಡಾನ್​ನಲ್ಲಿ. 45 ವರ್ಷದ ಮಹಿಳೆಯೊಬ್ಬರು ರಸ್ತೆಯ ಬದಿ ನಿಂತುಕೊಂಡಿದ್ದ ಸಂದರ್ಭದಲ್ಲಿ ಕುರಿಯೊಂದು ಅವರಿಗೆ ನೂಕಿದೆ. ಅವರು ಆಯತಪ್ಪಿ ಬಿದ್ದು ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಕುರಿಯ ವಿರುದ್ಧ ದೂರು ದಾಖಲಾಗಿತ್ತು. ಇದೇ ಕಾರಣಕ್ಕೆ ಕುರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದರ ಮೇಲಿನ ಆರೋಪ ನಿಜವೆಂದು ಸಾಬೀತಾಗಿದೆ. ಈಗ ಕುರಿ 3 ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಿದೆ.
ಕುರಿ ಮಹಿಳೆಯ ಮೇಲೆ ದಾಳಿ ಮಾಡಿದಾಗ, ಅವರ ಪಕ್ಕೆಲುಬುಗಳು ಮುರಿದವು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ 5 ಹಸುಗಳನ್ನು ನೀಡುವಂತೆ ಕುರಿಗಳ ಮಾಲೀಕರಿಗೆ ಆದೇಶ ನೀಡಲಾಗಿದೆ. ಎರಡೂ ಕುಟುಂಬಗಳು ನೆರೆಹೊರೆಯವರಾಗಿದ್ದು, ನ್ಯಾಯಾಲಯದ ಆದೇಶದ ಪ್ರಕಾರ 3 ವರ್ಷಗಳ ನಂತರ ಶಿಕ್ಷೆ ಅನುಭವಿಸಿದ ಕುರಿ ಹೊರಗೆ ಬಂದಾಗ ಸಂತ್ರಸ್ತ ಕುಟುಂಬಕ್ಕೆ ಅದನ್ನು ನೀಡಬೇಕಿದೆ.
ದಿನದಿನಕ್ಕೂ ನಿಗೂಢವಾಗ್ತಿದೆ ಮಾಡೆಲಿಂಗ್​ ಜಗತ್ತು! ಖ್ಯಾತ ನಟಿ ಬಿದಿಶಾ ಶವವಾಗಿ ಪತ್ತೆ- ಗೊಂದಲದಲ್ಲಿ ಡೆತ್​ನೋಟ್​…

17 ವರ್ಷಗಳ ಡೇಟಿಂಗ್- ಇಬ್ಬರು ಮಕ್ಕಳ ಸಮ್ಮುಖದಲ್ಲಿ ಮದ್ವೆಯಾದ ಬಾಲಿವುಡ್​ ನಿರ್ದೇಶಕ- ನಟನ ಪುತ್ರಿ

7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
