ಮ್ಯಾಂಗ್ರೋವ್ಸ್ (ಬಾಂಗ್ಲಾದೇಶ):ಭಾರತದ ಕಾಡಿನಲ್ಲಿದ್ದ ಹುಲಿಯೊಂದು ನಾಲ್ಕು ತಿಂಗಳಲ್ಲಿ 100 ಕಿಲೋಮೀಟರ್​ ಪ್ರಯಾಣಿಸಿರುವುದು ಪತ್ತೆಯಾಗಿದೆ. ಈ ಹುಲಿ ಭಾರತದಿಂದ ಬಾಂಗ್ಲಾದೇಶದ ಮ್ಯಾಂಗ್ರೋವ್ಸ್​ ಕಾಡಿಗೆ ಪಯಣಿಸಿದೆ.
ಅಷ್ಟು ಮಾತ್ರವಲ್ಲದೇ ಇದು ಒಂದು ಕಿಲೋಮೀಟರ್​ಗೂ ಹೆಚ್ಚು ಉದ್ದದ ನದಿಯನ್ನೂ ದಾಟಿದೆ. ಇಷ್ಟೆಲ್ಲಾ ಕಂಡುಹಿಡಿಯಲು ಸಾಧ್ಯವಾದದ್ದು ಅದಕ್ಕೆ ಅಳವಡಿಸಿದ್ದ ರೇಡಿಯೋ ಕಾಲರ್‌ನಿಂದಾಗಿ. ಈ ಹುಲಿ ಎಷ್ಟು ಸಂಚರಿಸಬಹುದು ಎಂಬ ಬಗ್ಗೆ ಪತ್ತೆ ಹಚ್ಚಲು ಅದಕ್ಕೆ ರೇಡಿಯೋ ಕಾಲರ್‌ ಅಳವಡಿಸಲಾಗಿತ್ತು. ಅದರ ಮೂಲಕ ಇದು 100 ಕಿಲೋ ಮೀಟರ್‌ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದೆ ಎಂದು ಎಂದು ಪಶ್ಚಿಮ ಬಂಗಾಳದ ವನ್ಯಜೀವಿಗಳ ವಾರ್ಡನ್​ ಮುಖ್ಯಸ್ಥ ವಿ.ಕೆ. ಯಾದವ್​ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಇದು ಗಂಡುಹುಲಿಯಾಗಿದ್ದು, ಇದಕ್ಕೆ ರೇಡಿಯೋ ಕಾಲರ್‌ ಅಳವಡಿಸಿದ್ದು 2020ರ ಡಿಸೆಂಬರ್‌ ತಿಂಗಳಿನಲ್ಲಿ. ಈ ಸುದೀರ್ಘ ಪ್ರಯಾಣದಲ್ಲಿ ಹುಲಿಯು ಎಲ್ಲಿಯೂ ಮನುಷ್ಯರು ಇರುವ ಜಾಗಗಳಿಗೆ ಹೋಗಿಲ್ಲ ಎನ್ನುವುದು ತಿಳಿದುಬಂದಿದೆ.
ಇದು ಹೋಗಿರುವ ಮಾರ್ಗದ ಕುರಿತು ಮಾಹಿತಿ ನೀಡಿರುವ ಯಾದವ್‌ ಅವರು, ಡಿಸೆಂಬರ್​ 27ರಂದು ತನ್ನ ಪ್ರಯಾಣ ಆರಂಭಿಸಿದ ಹುಲಿ ಮೇ 11ರಂದು ಬಾಂಗ್ಲಾದೇಶ ತಲುಪಿದೆ. ಈ ನಡುವೆ ಮೂರು ದ್ವೀಪಗಳನ್ನ ಅದು ದಾಟಿದೆ. ರೇಡಿಯೋ ಕಾಲರ್‌ ಹಾಕಿದ ಕೆಲವು ದಿನ ಹುಲಿ ಭಾರತದಲ್ಲಿಯೇ ಇತ್ತು. ನಂತರ ಬಾಂಗ್ಲಾದೇಶದ ಸುಂದರ್​ ಬನದ ತಲ್ಪಟ್ಟಿ ದ್ವೀಪಕ್ಕೆ ಹೋಗಿದೆ ಅಲ್ಲಿಂದ ಛೊಟೊ, ಹರಿಕಾಲಿ, ಬೋರೋ ಹರಿಕಾಲಿ ಹಾಗೂ ರೈಮಂಗಾಲ್​ ಸೇರಿದಂತೆ ವಿವಿಧ ನದಿಗಳನ್ನು ದು ದಾಟಿ ಹೋಗಿದೆ ಎಂದು ಹೇಳಿದ್ದಾರೆ.
ಗ್ರಾಹಕರೇ ಗಮನಿಸಿ: ಈ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್‌, ಚೆಕ್‌ಬುಕ್‌ ಶೀಘ್ರದಲ್ಲಿ ಅಮಾನ್ಯ!
ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್‌ಡೌನ್‌ ನಂತರ ಸೆಟ್ಟೇರಲಿದೆ ಬಯೋಪಿಕ್‌ ‘ಭಾರತ ಸಿಂಧೂರಿ’
ಲಸಿಕೆ ಪಡೆದು ಅಖಿಲೇಶ್‌ಗೆ ಅಪ್ಪ ಕೊಟ್ರು ಶಾಕ್‌- ಟ್ವಿಟರ್‌ನಲ್ಲಿ ಫೋಟೋ: ಮಾಜಿ ಸಿಎಂಗೆ ಭಾರಿ ಮುಜುಗರ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
