ವಾಷಿಂಗ್ಟನ್:ಟಿಕ್‌ ಟಾಕ್‌ ಆ್ಯಪ್‌ ಅನ್ನು ಭಾರತ ಸೇರಿದಂತೆ ಕೆಲವು ದೇಶಗಳು ಬ್ಯಾನ್‌ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿರುವ ಚೀನಾ ಇದೀಗ ತಲೆತಲೆ ಚಚ್ಚಿಕೊಳ್ಳುತ್ತಿದೆ.
ತನ್ನ ದೇಶದ ಹೆಸರಿನಲ್ಲಿರುವ ಈ ಆ್ಯಪ್‌ ಖರೀದಿಗೆ ಬೇರೆ ದೇಶಗಳು ಅದರಲ್ಲಿಯೂ ಭಾರತ ಮುಂದಾಗುವುದಿಲ್ಲ ಎಂದು ತಿಳಿಯುತ್ತಲೇ ಈ ಆ್ಯಪ್‌ನ ಮಾಲೀಕರಾಗಿರುವ ಬೈಟ್‌ಡಾನ್ಸ್‌ ಕಂಪೆನಿ, ಈ ಆ್ಯಪ್‌ ಮಾಲೀಕತ್ವವನ್ನು ಅಮೆರಿಕಕ್ಕೆ ವರ್ಗಾವಣೆ ಮಾಡಲು ಬಯಸಿದ್ದು, ಈ ಸಂಬಂಧ ಅಮೆರಿಕ ಜತೆ ಮಾತುಕತೆ ಕೂಡ ನಡೆಸಿದೆ.
ಈ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾದ ತಲೆಯ ಮೇಲೆ ಹೊಡೆದಿರುವಂಥ ಮಾತನ್ನು ಹೇಳಿದ್ದಾರೆ. ಅದೇನೆಂದರೆ ಒಂದು ವೇಳೆ ಮಾರಾಟ ಮಾಡುವುದು ಹೌದಾಗಿದ್ದರೆ, ಸೆಪ್ಟೆಂಬರ್ 15ರೊಳಗಾಗಿ ಮಾರಾಟ ಮಾಡಿ. ಇಲ್ಲದೇ ಹೋದರೆ ಅಮೆರಿಕದಲ್ಲಿ ಟಿಕ್ ಟಾಕ್ ಆ್ಯಪನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಸ್ಥಿರ: ವೈದ್ಯರು ಹೇಳಿದ್ದೇನು?
ಈ ಕುರಿತು ಮಾಹಿತಿ ನೀಡಿರುವ ಟ್ರಂಪ್‌, ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್‌ಗೆ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾರಾಟವಾಗದೇ ಹೋದಲ್ಲಿ, ಆ್ಯಪ್ ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ ಎಂದಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಭದ್ರೆತೆಗೆ ಧಕ್ಕೆ ತರುತ್ತಿದೆ ಎಂದು ಟ್ರಂಪ್ ಪತ್ರಿಕಾಗೋಷ್ಟಿಯಲ್ಲಿ ಟಿಕ್ ಟಾಕ್ ನಿಷೇಧಿಸುವ ಕುರಿತಾಗಿ ಮಾತುಕತೆ ನಡೆಸಿದ್ದರು. ಆದರೆ ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಟಿಕ್‌ ಟಾಕ್‌ ಅಪ್ಲಿಕೇಶನ್‌ನಲ್ಲಿ ಸಕ್ರೀಯರಾಗಿದ್ದು ಚೀನಾದ ಕಂಪೆನಿ ಶತಕೋಟಿ ವ್ಯವಹಾರ ಮಾಡುವ ಟಿಕ್‌ಟಾಕ್‌ ಅನ್ನು ಅಮೆರಿಕ ಮೂಲದ ಮೈಕ್ರೋಸಾಫ್ಟ್ ಖರೀದಿ ಮಾಡಲು ಆಸಕ್ತಿ ತೋರಿದೆ ಎನ್ನಲಾಗಿದೆ.
ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನಿಂದ ರವಾನೆಯಾಯ್ತು ಪ್ಲಾಸ್ಮಾ: ದೇಶದಲ್ಲೇ ಮೊದಲ ಪ್ರಯೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 2 =
Remember me
