ವಾಷಿಂಗ್ಟನ್‌:ಚೀನಾದ ಕಿರು ವಿಡಿಯೋ ತಯಾರಿಕಾ ಆ್ಯಪ್ ಟಿಕ್‌ಟಾಕ್ ನಿಷೇಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಟಿಕ್ ಟಾಕ್ ಮುಖ್ಯಸ್ಥ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೀಗಾಗಿ ಮಧ್ಯಂತರ ಸಿಇಒ ಆಗಿ ಟಿಕ್‌ಟಾಕ್ ಜನರಲ್ ಮ್ಯಾನೇಜರ್ ವನೆಸ್ಸಾ ಪಪ್ಪಾಸ್ ಅವರನ್ನು ನೇಮಕ ಮಾಡಲಾಗಿದೆ.
ರಾಜೀನಾಮೆ ಕುರಿತಂತೆ ಇ-ಮೇಲ್ ಹೇಳಿಕೆ ನೀಡಿರುವ ಕೆವಿನ್ ಸಂಸ್ಥೆ ತೊರೆದು ಹೋಗುತ್ತಿರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ, ಕಳೆದ ಕೆಲವು ತಿಂಗಳಿನಿಂದ ಈ ಬದಲಾವಣೆ ಮತ್ತು ಪ್ರಕ್ರಿಯೆಗಳು ನಡೆಯುತ್ತಿವೆ ಎಂದಿದೆ.
ಅಮೆರಿಕದಲ್ಲಿ ಟಿಕ್‌ಟಾಕ್ ನಿಷೇಧ ಕುರಿತಾದ ಮಾತುಕತೆ ಮತ್ತು ಹಣಕಾಸು ವ್ಯವಹಾರದ ಮೇಲಿನ ನಿರ್ಬಂಧದಿಂದಾಗಿ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗಿದೆ.ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ, ಅಗತ್ಯ ಬದಲಾವಣೆ ಏನು ಬೇಕಾಗಿದೆ ಮತ್ತು ನನ್ನ ಪಾತ್ರವೇನು ಎನ್ನುವುದನ್ನು ನಾನು ನಿರ್ವಹಿಸಿದ್ದೇನೆ ಎಂದು ಕೆವಿನ್ ಮೇಯರ್ ಪತ್ರದಲ್ಲಿ ತಿಳಿಸಿದ್ದಾರೆ. ಜತೆಗೆ ಭಾರವಾದ ಹೃದಯದೊಂದಿಗೆ ಕಂಪನಿ ತೊರೆದು ಹೋಗುತ್ತಿರುವುದಾಗಿ ಹೇಳಿದ್ದಾರೆ.
ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ವಿಚಾರವಾಗಿ 45 ದಿನಗಳಲ್ಲಿ ಟಿಕ್‌ಟಾಕ್ ಮಾರುವಂತೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್‌ಗೆ 90 ದಿನಗಳವರೆಗೆ ಮಾರಬೇಕು ಇಲ್ಲವೇ ಬ್ಯಾನ್ ಮಾಡಬೇಕು ಎಂದಿದ್ದರು.
ಇದನ್ನೂ ಓದಿ:ಮಸೀದಿ ಮೇಲೆ ದಾಳಿ- ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ: ಇತಿಹಾಸ ಬರೆದ ಕೋರ್ಟ್‌
ಈಗಾಗಲೇ ಟ್ರಂಪ್ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದಾಗಿ ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್‌ ಕೂಡ ಹೇಳಿತ್ತು. ಆದರೆ ಚೀನಾದ ವಿಡಿಯೋ ಪ್ಲಾಟ್‌ಫಾರ್ಮ್‌ಗೆ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಮಾಜಿ ಡಿಸ್ನಿ ಕಾರ್ಯನಿರ್ವಾಹಕ ಕೆವಿನ್ ಮೇಯರ್ ರಾಜೀನಾಮೆ ನೀಡಿದ್ದಾರೆ.
ಟಿಕ್‌ಟಾಕ್ ಸಿಇಒ ಆಗಿ ನೇಮಕಗೊಳ್ಳುವ ಮೊದಲು, ಮೇಯರ್ ದಿ ವಾಲ್ಟ್ ಡಿಸ್ನಿ ಕಂಪನಿಯ ನೇರ-ಗ್ರಾಹಕ ಮತ್ತು ಅಂತರರಾಷ್ಟ್ರೀಯ ವಿಭಾಗದ ಅಧ್ಯಕ್ಷರಾಗಿದ್ದರು.
ಟಿಕ್ ಟಾಕ್ ಪ್ರಸ್ತುತ ಅಮೆರಿಕದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಏತನ್ಮಧ್ಯೆ, ಮೈಕ್ರೋಸಾಫ್ಟ್ ಈ ಹಿಂದೆ ಬೈಟ್ ಡ್ಯಾನ್ಸ್‌ನಿಂದ ಟಿಕ್‌ಟಾಕ್ ಖರೀದಿಸಲು ಸಿದ್ಧ ಎಂದು ಘೋಷಿಸಿತ್ತು. ಎರಡು ಕಂಪನಿಗಳು ಒಪ್ಪಂದಕ್ಕೆ ಬಂದರೆ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಟಿಕ್‌ಟಾಕ್‌ನ ಕಾರ್ಯಾಚರಣೆಯನ್ನು ಮೈಕ್ರೋಸಾಫ್ಟ್ ವಹಿಸಿಕೊಳ್ಳಲಿದೆ.
ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ

ಕರೊನಾ ಎನ್ನುವುದು ಸುಳ್ಳು ಎಂದು ‘ಬುದ್ಧಿ’ ಹೇಳುತ್ತಿದ್ದಾಕೆ ಇದೇ ವೈರಸ್‌ನಿಂದ ಸತ್ತುಹೋದಳು!
ನಾನು ರಾಜಕೀಯಕ್ಕೆ ಬರಲೆ? ಯದುವೀರ್‌ ಟ್ವೀಟ್‌… ಕಮೆಂಟಿಗರ ಉತ್ತರ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
