ಒಂಟಾರಿಯೊ (ಕೆನಡಾ):ಟಿಕ್​ಟಾಕ್​ ಮೂಲಕ ವಿಶ್ವಖ್ಯಾತಿ ಗಳಿಸಿದ್ದ ತಾರೆ ತಾನ್ಯಾ ಪರ್ದಾಜಿ ಸ್ಕೈಡೈವಿಂಗ್ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ. ಇವರಿಗೆ 21 ವರ್ಷ ವಯಸ್ಸಾಗಿತ್ತು.
ಕೆನಡಾದ ಒಂಟಾರಿಯೊದಲ್ಲಿ ಸ್ಕೈಡೈವಿಂಗ್​ ತರಬೇತಿ ಕೇಂದ್ರದಲ್ಲಿ ಕೆಲ ತಿಂಗಳ ಹಿಂದೆ ಸ್ಕೈಡೈವಿಂಗ್​ ತರಬೇತಿ ಪಡೆದಿದ್ದ ತಾನ್ಯಾ, ಇಂದು ಒಬ್ಬರೇ ಸ್ಕೈಡೈವಿಂಗ್ ಮಾಡುತ್ತಿದ್ದರು. ಆಕಾಶದಿಂದ ಕೆಳಕ್ಕೆ ಜಿಗಿಯುವ ಸಂದರ್ಭದಲ್ಲಿ ಅವರ ಪ್ಯಾರಾಚೂಟ್​ ಸರಿಯಾದ ವೇಳೆ ತೆರೆದುಕೊಳ್ಳಲಿಲ್ಲ. ಆದ್ದರಿಂದ ಮೇಲಿನಿಂದ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದ ತಾನ್ಯಾ ಪರ್ದಾಜಿ, 2017ರಲ್ಲಿ ನಡೆದ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ-ಫೈನಲಿಸ್ಟ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರು ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.
ತಾನ್ಯಾ ಅವರ ನಿಧನಕ್ಕೆ ತರಬೇತಿ ಕೇಂದ್ರ ‘ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ’ ಸಿಬ್ಬಂದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ‘ತಾನ್ಯಾ ಪರ್ದಾಜಿ, ಈಚೆಗಷ್ಟೇ ಸ್ಕೈಡೈವಿಂಗ್ ಗುಂಪಿಗೆ ಸೇರಿದ್ದರು. ಅವರನ್ನು ನಾವೆಲ್ಲರೂ ಸ್ವಾಗತದಿಂದ ಬರಮಾಡಿಕೊಂಡಿದ್ದೆವು. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ 50 ವರ್ಷದಿಂದ ತರಬೇತಿ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ಯಾವುದೇ ರೀತಿಯ ಅನಾಹುತ ಆಗಿರಲಿಲ್ಲ. ಇದೊಂದು ದೊಡ್ಡ ದುರಂತ’ ಎಂದಿದ್ದಾರೆ ಸಿಬ್ಬಂದಿ (ಏಜೆನ್ಸೀಸ್​)
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತವಾಗಿದ್ದು ಹೇಗೆ? ತನಿಖೆಯಿಂದ ಸತ್ಯ ಬಯಲು…
VIDEO: ಸಾರಾಯಿ ಅಂಗಡಿ ಮುಚ್ಚದಿದ್ರೆ ಸಾಯ್ತೇನೆಂದ ಕುಡುಕ: ಕಂಠಪೂರ್ತಿ ಎಣ್ಣೆ ಹಾಕ್ಕೊಂಡೇ ಡಿಮಾಂಡ್​!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − six =
Remember me
