ನವದೆಹಲಿ:ಟಿಕ್​ಟಾಕ್​ ಭಾರತದಲ್ಲಿ ಬ್ಯಾನ್​ ಆಗಿ ಮೂರು ತಿಂಗಳಾಗುತ್ತಾ ಬಂದಿದೆ. ಜೂನ್​ 29ರಿಂದ ಭಾರತದಲ್ಲಿ ಈ ಚೀನಿ ಆ್ಯಪ್​ ಅಧಿಕೃತವಾಗಿ ನಿಷೇಧಕ್ಕೆ ಒಳಗಾಗಿದೆ. ಆದರೆ ಇದರ ಬೆನ್ನಲ್ಲೇ ಮತ್ತೊಮ್ಮೆ ಈ ಆ್ಯಪ್​ ಹೊಸ ರೂಪ ಪಡೆದು ಭಾರತಕ್ಕೆ ಹಿಂಬಾಲಿನಿಂದ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.
ಇದಕ್ಕೆ ಕಾರಣ ಅಮೆರಿಕ. ಚೀನಾದ ಜತೆಗೆ ಸಂಘರ್ಷಕ್ಕೆ ಇಳಿದಿದ್ದ ಅಮೆರಿಕ, ಭಾರತದಂತೆ ತನ್ನ ದೇಶದಲ್ಲಿಯೂ ಟಿಕ್​ಟಾಕ್​ ನಿಷೇಧ ಮಾಡುವುದಾಗಿ ಹೇಳಿತ್ತು. ಇದರಿಂದ ಭಯಗೊಂಡಿದ್ದ ಟಿಕ್​ಟಾಕ್​ ಒಡೆತನದ ಬೈಟ್​ಡಾನ್ಸ್​ ಕಂಪೆನಿ, ಅಮೆರಿಕದಲ್ಲಿಯೇ ತನ್ನ ಘಟಕ ಶುರು ಮಾಡಲು ಮುಂದಾಗಿತ್ತು.
ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಮಾತುಕತೆ ಕೂಡ ನಡೆಸಿತ್ತು. ಇದರ ಮಾತುಕತೆ ನಡೆಯುತ್ತಿದ್ದಂತೆಯೇ, ಟಿಕ್​ಟಾಕ್​ ಉದ್ಯಮ ಶುರು ಮಾಡಲು ಒರಾಕಲ್‌ ಹಾಗೂ ಮೈಕ್ರೋಸಾಫ್ಟ್‌ ಕಂಪೆನಿ ಉತ್ಸುಕತೆ ತೋರಿದ್ದವು.
ಇದನ್ನೂ ಓದಿ:ಭಾವಿ ಪತ್ನಿಗೆ ₹6 ಕೋಟಿಯ ಉಂಗುರ ನೀಡಿದ ನಾಲ್ಕುಮಕ್ಕಳ ತಂದೆ ಈ ಆಟಗಾರ…
ಒಂದು ವೇಳೆ ಈ ಮಾರಾಟ ಮಾಡುವುದಾದರೆ ಸೆಪ್ಟೆಂಬರ್​ 15ರವರೆಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಟಿಕ್​ಟಾಕ್​ ಆ್ಯಪ್​ ಅನ್ನು ಅಮೆರಿಕದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಟ್ರಂಪ್​ ಎಚ್ಚರಿಕೆ ನೀಡಿದ್ದರು. ಇದೇನಾದರೂ ಸಕ್ಸಸ್​ ಆದರೆ, ಭಾರತದಲ್ಲಿಯೂ ಈ ಆ್ಯಪ್​ ಪುನಃ ಶುರುವಾಗಲಿದೆ, ಇದರ ಮೇಲಿದ್ದ ನಿಷೇಧ ತೆರುವಾಗಲಿದೆ ಎಂಬುದಾಗಿ ಸುದ್ದಿ ಹರಡಿತ್ತು. ಇದು ಟಿಕ್​ಟಾಕ್​ ಪ್ರಿಯರಲ್ಲಿ ಸಂತಸದ ಅಲೆಯನ್ನು ಎಬ್ಬಿಸಿತ್ತು.
ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಈ ಹಿಂದೆ ತಿಳಿಸಿರುವಂತೆ ಬೈಟ್​ಡಾನ್ಸ್​ ಕಂಪೆನಿ ಒರಾಕಲ್​ ಜತೆ ಮಾತುಕತೆಯನ್ನೇನೋ ನಡೆಸಿದೆ. ಈ ಮಾತುಕತೆ ಫಲಪ್ರದ ಕೂಡ ಆಗಿದೆ. ಈ ಮೂಲಕ ಚೀನಾದ ಟಿಕ್​ಟಾಕ್​ ಉದ್ಯಮ ಒರಾಕಲ್​ ತೆಕ್ಕೆಗೆ ಬಿದ್ದಿರುವುದೂ ನಿಜವೇ.
ಆದರೆ, ಅಂದುಕೊಂಡಂತೆ ಆಗಲಿಲ್ಲ. ಏಕೆಂದರೆ ಬೈಟ್​ಡಾನ್ಸ್ ಕಂಪೆನಿ ಒರಾಕಲ್ ಜತೆ ಕೇವಲ ಪಾಲುದಾರಿಕೆ ಹಂಚಿಕೊಂಡಿದ್ದು, ಅದನ್ನು ಸಂಪೂರ್ಣ ಮಾರಾಟ ಮಾಡಿಲ್ಲ. ಅಂದರೆ ಟಿಕ್‌ಟಾಕ್ ಒಡೆತನ ಚೀನಾ ಮೂಲದ ಬೈಟ್​ಡಾನ್ಸ್​ ಕಂಪೆನಿ ಬಳಿಯೇ ಸುರಕ್ಷಿತವಾಗಿದೆ.
ಆದ್ದರಿಂದ ಭಾರತದಲ್ಲಿ ಟಿಕ್​ಟಾಕ್​ ಮೇಲಿನ ನಿಷೇಧ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಹೇಳಿದೆ. ಇದು ಚೀನಾದ ಒಡೆತನದಲ್ಲಿ ಇರುವುದು ಮಾತ್ರವಲ್ಲದೇ, ಈ ಆ್ಯಪ್​ನ ಸುರಕ್ಷತೆಯ ಬಗ್ಗೆ ಇದಾಗಲೇ ಸಾಕಷ್ಟು ಸಂದೇಹಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಿಷೇಧವನ್ನು ತೆರವುಗೊಳಿಸುವುದಿಲ್ಲ ಎಂದು ಭಾರತ ಹೇಳಿದೆ. ಟಿಕ್​ಟಾಕ್​ ವಿಡಿಯೋ ಹೆಸರಿನಲ್ಲಿ ಬಳಕೆದಾರರ ಮಾಹಿತಿಗಳನ್ನು ಕದಿಯುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಮತ್ತೆ ಅದನ್ನು ವಾಪಸ್​ ತರಲು ಸಾಧ್ಯವಿಲ್ಲ ಎಂದಿದೆ.
₹10 ಕೋಟಿ ದಂಡ ಕಟ್ಟಿದರೆ ಶಶಿಕಲಾ ಜನವರಿಯಲ್ಲಿ ಬಂಧಮುಕ್ತ…

ಬಂಧಿತ ಮುಸ್ಲಿಮರ ಬಳಕೆ- ಕಂಪ್ಯೂಟರ್,​ ಹತ್ತಿ, ಕೂದಲಾಯ್ತು ಬ್ಯಾನ್:​ ಚೀನಾಕ್ಕೆ ಶಾಕ್​ ಕೊಟ್ಟ ದೊಡ್ಡಣ್ಣ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − 2 =
Remember me
