ಮುಂಬೈ:ಬಂಜಾರಾ ಸಮಾಜದ ಸಾಮಾಜಿಕ ಜಾಗೃತಿ ಚಳವಳಿಯ ಪ್ರಸಿದ್ಧ ನಾಯಕಿ, ಟಿಕ್‌ ಟಾಕ್‌ ತಾರೆ ಪೂಜಾ ಚವ್ಹಾಣ್‌ ಕೆಲ ದಿನಗಳ ಹಿಂದೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಟ್ಟಡದಿಂದ ಜಿಗಿದು ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದ್ದರೂ, ಅಪಘಾತದಿಂದ ಈಕೆ ಮೃತಪಟ್ಟಿರುವುದಾಗಿಯೂ ವರದಿಯಾಗಿತ್ತು. ವಾಹನ ಅಪಘಾತದ ಫೋಟೋ ಒಂದು ವೈರಲ್‌ ಆಗಿತ್ತು. ಇದು ಪೂಜಾ ಚವ್ಹಾಣ್‌ ಅವರ ಕಾರು ಅಪಘಾತ ಎಂದು ಪ್ರಸಾರವಾಗಿತ್ತು.
ಆದರೆ ಪೂಜಾ ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಅಪಘಾತದ ಸ್ವರೂಪ ನೀಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ ಇವರದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬ ಜಿಜ್ಞಾಸೆ ಇಂದಿಗೂ ಮುಂದುವರೆದಿದೆ.ಈ ನಡುವೆ, ಇದೊಂದು ಆತ್ಮಹತ್ಯೆಯಾಗಿರುವುದಾಗಿ ಹೇಳಲಾಗುತ್ತಿದ್ದು, ಈಕೆಯ ಸಾವಿನ ಹಿಂದೆ ಮಹಾರಾಷ್ಟ್ರ ಸಚಿವರೊಬ್ಬರ ಹೆಸರು ಥಳಕು ಹಾಕಿಕೊಂಡಿದೆ. ಆದ್ದರಿಂದ ಪೂಜಾ ಸಾವು, ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಹೇಳಿದ್ದಾರೆ. ಈಗ ಬಹಿರಂಗಗೊಂಡಿರುವ ಆಡಿಯೋ ಕ್ಲಿಪ್ಪಿಂಗ್‌ ಜತೆಗೆ ಪೊಲೀಸ್ ಮಹಾನಿರ್ದೇಶಕ ಹೇಮಂತ್ ನಾಗ್ರೇಲ್ ಅವರಿಗೆ ವಿವರವಾದ ಪತ್ರ ಬರೆದಿರುವ ಫಡ್ನವೀಸ್‌ ಅವರು, ಈ ಬಗ್ಗೆ ತನಿಖೆಗೆ ಕೋರಿದ್ದಾರೆ.
ಘಟನೆ ಏನು?ಪೂಜಾ ಅವರು ಬೀಡ್ ನಿವಾಸಿಯಾಗಿದ್ದರು. ಇವರು ಇತ್ತೀಚೆಗೆ ಪುಣೆಗೆ ಸ್ಪೋಕನ್ ಇಂಗ್ಲಿಷ್ ಕೋರ್ಸ್ ತೆಗೆದುಕೊಳ್ಳಲು ಬಂದಿದ್ದರು. ಸಹೋದರ ಮತ್ತು ಅವನ ಸ್ನೇಹಿತನೊಂದಿಗೆ ವನವಾಡಿಯಲ್ಲಿ ವಾಸಿಸುತ್ತಿದ್ದರು. ನಂತರ ಫೆಬ್ರವರಿ 8 ರಂದು ನಿಗೂಢವಾಗಿ ಮೃತಪಟ್ಟಿದ್ದರು. ಹೆವೆನ್ ಪಾರ್ಕ್ ಸೊಸೈಟಿಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿತ್ತು. ಆದರೆ ಇವರು ಕಾರಿನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಸುದ್ದಿ ಮಾಡಲಾಗಿತ್ತು.
ವಿಚಿತ್ರ ಎಂದರೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದರು. ಆದರೆ ಕುಟುಂಬಸ್ಥರು ಮಾತ್ರ ಇದನ್ನು ಆತ್ಮಹತ್ಯೆ ಎಂದಿದ್ದಾರೆ. ಇದೀಗ ಆಡಿಯೋ ಕ್ಲಿಪ್‌ ಸಿಕ್ಕಿದೆ.
ಆಡಿಯೊ ಕ್ಲಿಪ್‌ನಿಂದ ಏನಿದೆ?ಆಡಿಯೊ ಕ್ಲಿಪ್‌ನಲ್ಲಿ, ಅರುಣ್ ಎಂಬ ವ್ಯಕ್ತಿಯ ಜತೆ ಮಹಾರಾಷ್ಟ್ರ ಸರ್ಕಾರದ ರಾಜ್ಯ ಸಚಿವರೊಬ್ಬರು ಮಾತನಾಡಿರುವುದು ಕೇಳಿಸುತ್ತಿದೆ. ಪೂಜಾ ಬಗ್ಗೆ ಅದರಲ್ಲಿ ಸಚಿವರು ಮಾಹಿತಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಗ್ಗೆ ಅದರಲ್ಲಿ ಪ್ರಶ್ನಿಸಲಾಗಿದೆ. ಸಂಭಾಷಣೆ ಬಂಜಾರ ಭಾಷೆಯಲ್ಲಿದೆ. ಇದರಿಂದ ಪೂಜಾ ಮತ್ತು ಆ ಸಚಿವರಿಗೆ ಯಾವುದೋ ರೀತಿಯಲ್ಲಿ ಸಂಬಂಧ ಇರುವ ಬಗ್ಗೆ ಆಡಿಯೋದಿಂದ ಗೊತ್ತಾಗುತ್ತಿದೆ. ಆದರೆ ಅದೇ ಇನ್ನೊಂದೆಡೆ, ಇದು ಸಚಿವರ ದನಿ ಅಲ್ಲ ಎಂದೂ ಹೇಳಲಾಗುತ್ತಿದೆ.
ಪೊಲೀಸರು ಏನು ಹೇಳಿದರು?ಪೊಲೀಸರು ಎಲ್ಲವನ್ನೂ ನಿರಾಕರಿಸುತ್ತಿದ್ದಾರೆ. ಆಡಿಯೊ ಕ್ಲಿಪ್‌ನಲ್ಲಿ ಆಕ್ಷೇಪಾರ್ಹವಾದುದು ಏನೂ ಕಂಡುಬಂದಿಲ್ಲ ಮತ್ತು ಪೂಜಾ ಅವರ ಕುಟುಂಬ ಸದಸ್ಯರು ಕೂಡ ಯಾರ ವಿರುದ್ಧವೂ ದೂರು ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತಾವು ಏನೂ ಮಾಡಲಾಗದು ಎಂದಿದ್ದಾರೆ. ಆದರೆ ಇದರ ತನಿಖೆಗೆ ಬಿಜೆಪಿ ಒತ್ತಾಯಮಾಡಿದೆ. ಕೋಥ್ರುಡ್ ವಿಧಾನಸಭೆಯ ಬಿಜೆಪಿ ಶಾಸಕ ಮೇಧಾ ಕುಲಕರ್ಣಿ ಅವರು ಆಡಿಯೋ ತುಣುಕುಗಳನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಯಾರ್ರಿ ಕುಟುಂಬ ರಾಜಕಾರಣ ಮಾಡ್ತಿರೋರು? ಪ್ರಧಾನಿಯಾಗಿ 30 ವರ್ಷವಾಗಿದೆ… ರಾಹುಲ್‌ ಕಿಡಿಕಿಡಿ

ಮನೆ ಮನೆಗೆ ಆಹಾರ ವಿತರಿಸಿದ ಮುದ್ದು‌ ಪಾಂಡಾ: ಫೋಟೋ ನೋಡಿ ಖುಷಿಪಟ್ಟರು, ಪೂರ್ತಿ ಓದಿ ಪೆಚ್ಚಾದರು!

ಮೈಸೂರಿನಲ್ಲಿ ನಡುರಾತ್ರಿ ದರೋಡೆ- ವ್ಯಾಪಾರಿಯನ್ನು ಅಡ್ಡಗಟ್ಟಿ 1.8 ಲಕ್ಷ ಕಿತ್ತುಕೊಂಡ ದುಷ್ಕರ್ಮಿಗಳು

ಪತಿ ಪಕ್ಕದ ಮನೆಯ ಗಂಡ ಬಿಟ್ಟ ಆಂಟಿಯ ಜತೆ ತುಂಬಾ ಸಲುಗೆಯಿಂದಿದ್ದಾರೆ- ಸರಿದಾರಿಗೆ ಹೇಗೆ ತರಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + five =
Remember me
