ವಾಷಿಂಗ್ಟನ್‌:ಟೈಟಾನಿಕ್‌ ಹಡಗಿನ ಘೋರ ದುರಂತದ ಬಗ್ಗೆ ಹಲವಾರು ಮಂದಿ ಕೇಳಿಯೇ ಇರುತ್ತೀರಿ. ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಎಂದೇ ಕರೆಯಲ್ಪಡುವ ಈ ಹಡಗಿನ ದುರಂತದ ಕುರಿತ ಚಲನಚಿತ್ರ ಬಂದ ಮೇಲಂತೂ ಟೈಟಾನಿಕ್‌ ಹಡಗು ಜಗತ್ತಿಗೇ ಚಿರಪರಿಚಿತ.
ಆದರೆ ಈ ಹಡಗು ಮುಳುಗುವ ಸಮಯದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪಾದ್ರಿಯೊಬ್ಬರು ಬರೆದಿರುವ ಪತ್ರದ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು.
ಹೌದು. ಇದು ಪಾದ್ರಿಯೊಬ್ಬರ ಬದುಕಿನ ದುರಂತದ ಕಥನ. ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರು ಮಾಡಿರುವ ಅಮೋಘ ತ್ಯಾಗದ ಕುರಿತಾಗಿ ಈ ಪತ್ರವಿದೆ. ಈ ಪತ್ರವೀಗ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗಲಿದೆ.
ಸ್ಕಾಟ್ಲೆಂಡ್‌ನ ಪಾದ್ರಿಯಾಗಿದ್ದ ಜಾನ್​ ಹಾರ್ಪರ್​ ಅವರು 1912ರ ಏಪ್ರಿಲ್ 14ರಂದು ಲಂಡನ್‌ನಿಂದ ಚಿಕಾಗೋಗೆ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ ಈ ಹಡಗು ಡೂಮ್ಡ್ ಲೈನರ್ ಮಂಜುಗಡ್ಡೆಗೆ ಬಡಿದು ಮುಳುಗತೊಡಗಿತು.
ಇದನ್ನೂ ಓದಿ:ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ಮಾಲೀಕನ ಜೀವ ಉಳಿಸಿದ ಗಿಳಿ..!
ಆ ಸಮಯದಲ್ಲಿ ಪಾದ್ರಿ ಬಳಿ ಲೈಫ್‌ ಜಾಕೆಟ್‌ ಇತ್ತು. ಹಡಗು ಮುಳುಗುತ್ತದೆ ಎಂದು ತಿಳಿಯುವ ಸಂದರ್ಭದಲ್ಲಿ ಹಾರ್ಪರ್‌ನ ಸಹೋದರಿ ಮತ್ತು ಮಗಳನ್ನು ಲೈಫ್‌ಬೋಟ್‌ಗಳಲ್ಲಿ ಇರಿಸಲಾಯಿತು. ಪಾದ್ರಿ ಜಾನ್‌ ಹಾರ್ಪರ್‌ ಮನಸ್ಸು ಮಾಡಿದ್ದರೆ ತಮ್ಮ ಬಳಿ ಇದ್ದ ಲೈಫ್‌ಜಾಕೆಟ್‌ನಿಂದ ತಮ್ಮನ್ನು ಬಚಾವು ಮಾಡಿಕೊಳ್ಳಬಹುದಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ.
ಟೈಟಾನಿಕ್‌ ಹಡಗಿನಲ್ಲಿ ತಮ್ಮ ಪ್ರಯಾಣದ ಕುರಿತು ಪತ್ರದಲ್ಲಿ ಉಲ್ಲೇಖಿಸುತ್ತಾ ಬಂದಿದ್ದ ಜಾನ್‌ ಅವರು, ಕೊನೆಯದಾಗಿ ತಾವು ಲೈಫ್ ಜಾಕೆಟ್‌ ಅನ್ನು ಬೇರೆಯವರ ರಕ್ಷಣೆಗಾಗಿ ಕೊಡುತ್ತಿರುವುದನ್ನೂ ಉಲ್ಲೇಖಿಸಿ ಅದರಂತೆ ನಡೆದುಕೊಂಡರು. ಲೈಫ್ ಜಾಕೆಟ್ ಅನ್ನು ಇನ್ನೊಬ್ಬ ಪ್ರಯಾಣಿಕನಿಗೆ ಕೊಟ್ಟರು. ಈ ಮೂಲಕ ಹಾರ್ಪರ್​ ಹಡಗಿನೊಂದಿಗೆ ಸಮುದ್ರಪಾಲಾದರು.
ಅವರು ಬರೆದಿರುವ ಪತ್ರವೀಗ ಹರಾಜು ಮಾಡಲಾಗುತ್ತಿದೆ. ಇಂಥ ಮಾನವೀಯತೆಯುಳ್ಳ ಪಾದ್ರಿಯವರು ಬರೆದಿರುವ ಪತ್ರವನ್ನು ತಮ್ಮ ಬಳಿ ಇಟ್ಟುಕೊಂಡು ಧನ್ಯರಾಗಲು ಅನೇಕ ಮಂದಿ ಮುಂದೆ ಬಂದಿದ್ದಾರೆ.
ಗೋದಾಮಿನಲ್ಲಿ ಪ್ರಬಲ ಸ್ಫೋಟ: 9 ಸಾವು- ಪ್ರಧಾನಿ ಸಂತಾಪ

ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಕಪ್ಪು ವರ್ಣೀಯ ಸಲಿಂಗಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
