ಕೋಲ್ಕತಾ:ಇನ್ನೈದೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ತಯಾರಿ ಮಾಡುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ದಿನದಿಂದ ದಿನಕ್ಕೆ ಕಂಗೆಟ್ಟು ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಪ್ರತಿದಿನವೂ ಶಾಸಕರು, ಮುಖಂಡರು ರಾಜೀನಾಮೆ ಕೊಡುತ್ತಲೇ ಸಾಗಿರುವುದು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಯಕ ಸುವೇಂದು ಅಧಿಕಾರಿ ಬುಧವಾರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ನಂತರ ನಿನ್ನೆಯಷ್ಟೇ, ಪಕ್ಷದ ನಾಯಕ ಜಿತೇಂದ್ರ ತಿವಾರಿ ಕೂಡ ಸುವೇಂದು ಅವರ ಹಾದಿಯನ್ನೇ ಹಿಡಿದಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದರು, ಮಾತ್ರವಲ್ಲದೇ, ದಕ್ಷಿಣ ಬಂಗಾಳ ರಾಜ್ಯ ಸಾರಿಗೆ ನಿಗಮದ (ಎಸ್‌ಬಿಎಸ್‌ಟಿಸಿ) ಅಧ್ಯಕ್ಷ ಕರ್ನಲ್ (ನಿವೃತ್ತ) ದೀಪತಂಗು ಚೌಧರಿ ಅವರೂ ಸಹ ರಾಜೀನಾಮೆ ಪತ್ರವನ್ನು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿಕೊಟ್ಟಿದ್ದರು.
ಇದನ್ನು ಅರಗಿಸಿಕೊಳ್ಳುವ ಮುನ್ನವೇ ಮತ್ತೋರ್ವ ಶಾಸಕರು ಕೂಡ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಇಂದು ಬೆಳಗ್ಗೆ ಟಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಮಮತಾ ಬ್ಯಾನರ್ಜಿಗೆ ಮತ್ತೆ ಶಾಕ್​! ಸುವೇಂದು ನಂತರ ಟಿಎಂಸಿಯಿಂದ ಮತ್ತೆರೆಡು ವಿಕೆಟ್​ ಔಟ್​!
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ. 2016ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿಯನ್ನು ಬಿಜೆಪಿ ಭೇಟಿಯಾಡಿದ ಬೆನ್ನಲ್ಲೇ, ಇನ್ನೂ ಹಲವು ಅತೃಪ್ತ ಶಾಸಕರು ಅಮಿತ್ ಷಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸುವೇಂದು ಅವರ ಹಿಡಿತದಲ್ಲಿ ಕನಿಷ್ಠ 50 ಶಾಸಕರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಾಯಕನ ದಾರಿ ಹಿಡಿದು ಎಲ್ಲ ಶಾಸಕರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ಪ್ಲಸ್ ಪಾಯಿಂಟ್​ ಆಗಲಿದ್ದು, ಟಿಎಂಸಿಯ ಕನಸು ದೂರಾಗಲಿದೆ ಎನ್ನಲಾಗಿದೆ. (ಏಜೆನ್ಸೀಸ್​)
ಮೋದಿಗೆ ಬುದ್ಧಿಕಲಿಸಿದ ಕೇಜ್ರಿವಾಲ್​ ಎಂದು ಹೊಗಳುವಷ್ಟರಲ್ಲೇ ಆಗೋಯ್ತು ಭಾರಿ ಮುಖಭಂಗ!

ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

ಕರುವನ್ನು ದತ್ತುಪಡೆದು ಮುಂಡನ ಕಾರ್ಯ ಈಡೇರಿಸಿ ನಾಮಕರಣ ಮಾಡಿದ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
