ಬೆಂಗಳೂರು:2020 ಹಲವು ಏಳುಬೀಳುಗಳನ್ನು ಕಂಡಿರುವ ವರ್ಷ. ಇಡೀ ವರ್ಷ ಕರೊನಾದ ಭೀತಿ ಸೇರಿದಂತೆ ವಿವಿಧ ಕ್ಷೇತ್ರಗಳ ದಿಗ್ಗಜರ ಸಾವನ್ನು ಕಂಡ ವರ್ಷ. ಆದರೆ ಈ ವರ್ಷದ ಅಚ್ಚರಿ ಎಂದರೆ ಆಕಾಶದಲ್ಲಿ ಹಲವಾರು ಕೌತುಕಗಳು ನಡೆದಿವೆ.
ಇದೀಗ ಇಂಥದ್ದೇ ಒಂದು ಕೌತುಕ ನೋಡುವ ಭಾಗ್ಯ ನಮ್ಮದಾಗಲಿದೆ. 400 ವರ್ಷಗಳ ನಂತರ ಇಂಥದ್ದೊಂದು ಅಚ್ಚರಿ ಆಕಾಶದಲ್ಲಿ ನಡೆಯಲಿದೆ. ಖಗೋಳವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವಿದು. ಅದೇನೆಂದರೆ, ಗುರು ಮತ್ತು ಶನಿಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿದ್ದು, ಇದನ್ನು ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದೇ ಕರೆದಿದ್ದಾರೆ.
ಅಂದಹಾಗೆ ಗುರು ಮತ್ತು ಶನಿ ಗ್ರಹಗಳು ಡಿಸೆಂಬರ್ 13ರಿಂದಲೇ ಸಮೀಪಿಸುತ್ತಿವೆ. ಅದರ ಅಂತರ ಇಂದು ಅತ್ಯಂತ ಕಡಿಮೆಯಾಗಿದ್ದು, ಅಂಥ ಅಪೂರ್ವ ನೋಟವನ್ನು ಎಲ್ಲರೂ ಕಣ್ತುಂಬಿಸಿಕೊಳ್ಳಬಹುದಾಗಿದೆ. ಏಕೆಂದರೆ ನಾಳೆಯಿಂದ ಮತ್ತೆ ಈ ಎರಡೂ ಗ್ರಹಗಳು ದೂರ ದೂರ ಸರಿಯಲು ಆರಂಭಿಸುತ್ತವೆ.
ಶನಿ ಗ್ರಹದ ಕೆಳಗಡೆಗಳಲ್ಲಿ ಗುರುಗ್ರಹ ಕಾಣಿಸಿಕೊಳ್ಳಲಿದೆ. ನಾಳೆಯಿಂದ ಮತ್ತೆ ಪಥ ಬದಲಿಸುವ ಈ ಎರಡೂ ಗ್ರಹಗಳು ಉಲ್ಟಾ ಕಾಣಿಸಲಿವೆ. ಅಂದರೆ ಗುರುಗ್ರಹ ಮೇಲುಗಡೆ ಹಾಗೂ ಶನಿಗ್ರಹ ಕೆಳಗೆ ಆಗಲಿದೆ.
‘ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಆದ್ದರಿಂದ ಎರಡೂ ಗ್ರಹಗಳು ಇದೀಗ ಪರಸ್ಪರ ಹಾದುಹೋಗಲಿವೆ. ಈ ಎರಡೂ ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಗುರು ಮತ್ತು ಶನಿ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿರುವ ಕಾರಣ, ಇಂಥದ್ದೊಂದು ವಿದ್ಯಮಾನ ನಡೆಯಲಿದೆ ಎಂದಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವಿಜ್ಞಾನಿಗಳು, ಇಂದು ನೀವು ಇದನ್ನು ನೋಡಲು ಮಿಸ್​ ಮಾಡಿಕೊಂಡರೆ ಮತ್ತೆ ನೀವು 60 ವರ್ಷ ಕಾಯಬೇಕು ಎಂದಿದ್ದಾರೆ.
1610ರಲ್ಲಿ ಗೆಲಿಲಿಯೊ ಗೆಲಿಲಿ ಅವರು ತಮ್ಮ ದೂರದರ್ಶಕದ ಮೂಲಕ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623ರಲ್ಲಿ ಮತ್ತೊಮ್ಮೆ ಗುರುಗ್ರಹವನ್ನು ವೀಕ್ಷಿಸುವಾಗ ಶನಿಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಇಲ್ಲಿಯವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.
ವಿವಿಧ ಪದವೀಧರರಿಗೆ ಕೇಂದ್ರದ ಅಧೀನ ಇಲಾಖೆಯಲ್ಲಿ ಭರಪೂರ ಉದ್ಯೋಗ

ಲವ್​ ಫೇಲ್ಯೂರ್​ಗೆ​ ₹5, ಹೊಸ ಲವ್​ಗೆ ₹10, ಲವರ್​ ಬಿಟ್ಟು ಹೋದ್ರೆ ₹15, ಇಷ್ಟದ ಲವರ್​ಗಾಗಿ​ ₹49

‘ಪಾಕ್​ಗಿಂತ ಭಾರತದಲ್ಲೇ ಹೆಚ್ಚು ಮುಸ್ಲಿಂರಿದ್ದು, ಅವರ ಅಲ್ಪಸಂಖ್ಯಾತ ಸ್ಥಾನಮಾನ ರದ್ದಾಗಲಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
