ಹೈದರಾಬಾದ್:ಇತ್ತ ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ ಮತ್ತು ರಾಗಿಣಿ ಡ್ರಗ್ಸ್‌ ಕೇಸ್‌ ಪುನಃ ಸುದ್ದಿ ಮಾಡುತ್ತಿದ್ದಂತೆಯೇ ಅತ್ತ ಹನ್ನೆರಡು ಟಾಲಿವುಡ್ ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಸಮನ್ಸ್ ನೀಡಿದೆ.ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯಿಂದ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿದಂತೆ ಈ ಸಮನ್ಸ್‌ ಜಾರಿಯಾಗಿದೆ. ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜ ಮತ್ತು ನಿರ್ದೇಶಕ ಪುರಿ ಜಗನ್ನಾಥ್, ಚಾರ್ಮಿ ಕೌರ್, ನವದೀಪ್, ಮುಮೈತ್ ಖಾನ್, ನಂದು, ತರುಣ್ ಮತ್ತು ತಾನಿಶ್ ಸೇರಿದಂತೆ 12 ನಟ-ನಟಿಯರು ಇದೀಗ ಇಡಿ ಅತಿಥಿಗಳು. ಸೆಪ್ಟೆಂಬರ್ 6 ರಂದು ರಾಕುಲ್ ಮತ್ತು ಸೆಪ್ಟೆಂಬರ್ 8 ರಂದು ರಾಣಾ ಮತ್ತು ಸೆಪ್ಟೆಂಬರ್ 9 ರಂದು ರವಿತೇಜಗೆ ಹಾಜರಾಗುವಂತೆ ತಿಳಿಸಲಾಗಿದೆ, ಪುರಿ ಜಗನ್ನಾಥ್ ಆಗಸ್ಟ್ 31 ರಂದು ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯಿಂದ ಇವರ ವಿರುದ್ಧ 12 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, 11 ಚಾರ್ಜ್ ಶೀಟ್‌ ಸಿದ್ಧಪಡಿಸಲಾಗಿದೆ. ಸದ್ಯ ಇವರ ವಿರುದ್ಧ ತನಿಖೆ ಮುಂದುವರೆದಿದೆ. ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇವರ ಹೆಸರುಗಳ ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಪತ್ತೆಯಾಗಿವೆ. ನಮಗೆ ಸೂಕ್ತ ಪುರಾವೆ ಸಿಗುವವರೆಗೂ ಈ ನಟ-ನಟಿಯರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ತೆಲಂಗಾಣ ಅಬಕಾರಿ ಮತ್ತು ನಿಷೇಧ ಇಲಾಖೆಯು ರೂ .30 ಲಕ್ಷ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ನಂತರ 12 ಪ್ರಕರಣಗಳನ್ನು ದಾಖಲಿಸಿ ತನಿಖೆ ಶುರು ಮಾಡಿದಾಗ ಇವರ ಹೆಸರು ಕೇಳಿಬಂದಿವೆ.
ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
