ಚೆನ್ನೈ:ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ‘ಟೂಲ್‌ಕಿಟ್‌’ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಮೋದಿಗೋಬ್ಯಾಕ್‌ ಟ್ರೆಂಡ್‌ ಮತ್ತೆ ಶುರುವಾಗಿದೆ. ರೈತರ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಭಾರತದ ವಿರುದ್ಧ ಮಹಾ ಸಮರ ಸಾರಿರುವ ಕೆಲವು ಕಿಡಿಗೇಡಿಗಳ ಕೃತ್ಯ ಒಂದೊಂದಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಇತ್ತ ಮೋದಿಗೋಬ್ಯಾಕ್‌ ಎಂದು ಹಲವರು ಟ್ವೀಟ್‌ ಶುರು ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನಟಿ ಓವಿಯ್ಯಾ ಇದೇ ಹ್ಯಾಷ್‌ಟ್ಯಾಗ್‌ ಟ್ವೀಟ್‌ ಮಾಡಿ ಈಗ ಹಲವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
#GoBackModi
— Oviyaa (@OviyaaSweetz)February 13, 2021

#GOBackModi ಎಂದು ಈ ಬಹುಭಾಷಾ ನಟಿ ಟ್ವೀಟ್‌ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಳ ಚಿತ್ರಗಳಲ್ಲಿ ನಟಿಸುತ್ತಿರುವ ಓವಿಯ್ಯಾ, ಇಂಥದ್ದೊಂದು ಟ್ವೀಟ್‌ ಮಾಡಿದ್ದು ಮೋದಿ ಅಭಿಮಾನಿಗಳನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.
ಇದಕ್ಕೆ ಕಾರಣ, ಇವರು ಟ್ವೀಟ್‌ ಮಾಡುತ್ತಿದ್ದಂತೆಯೇ, ಈಕೆಯ ಅಭಿಮಾನಿಗಳು ಸೇರಿದಂತೆ ಬಿಜೆಪಿ ವಿರೋಧಿಗಳು ಇದೇ ಹ್ಯಾಷ್‌ಟ್ಯಾಗ್‌ನೊಂದಿಗೆ ಗುಂಪುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಕಲಹ ಉಂಟಾಗಿದೆ ಎನ್ನುವುದು ಬಿಜೆಪಿಯ ಆರೋಪ.
ಈ ಸಂಬಂಧ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗದ ಸದಸ್ಯ ಅಲೆಕ್ಸೆಸ್ ಸುಧಾಕರ್ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಎಸ್‍ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದು, ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಓವಿಯಾ ವಿರುದ್ಧ ಕ್ರಮ ಕೈಗೊಳ್ಳಿ ಮತ್ತು ಓವಿಯ್ಯಾ ಈ ಹಿಂದಿನ ಉದ್ದೇಶದ ಕುರಿತು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ನಡುವೆಯೇ, ನಟಿಯು ಕ್ಷಮೆ ಕೇಳುವಂತೆ ಚೆನ್ನೈ ಬಿಜೆಪಿ ಘಟಕ ಒತ್ತಾಯಿಸಿದೆ.
ಭಾರತಕ್ಕೆ ಮಸಿಬಳಿಯಲು ಗುಟ್ಟಾಗಿ ತಯಾರಿಸಿದ್ದ ‘ಟೂಲ್‌ಕಿಟ್‌’ ವಿವಾದ: ಗ್ರೇಟಾಳಿಂದ ಸಿಕ್ಕಿಬಿದ್ದ ದಿಶಾ ಅರೆಸ್ಟ್‌

ದಿಶಾ ರವಿ ಬಂಧನದಿಂದಾಗಿ ಕೆರಳಿದ ಪಾಕ್​! ಬಾಯಿ ಮುಚ್ಚಿಸುವ ಕೆಲಸ ನಿಮ್ಮದು ಎಂದ ಇಮ್ರಾನ್​ ಖಾನ್​

ಭಾರತದ ವಿರುದ್ಧ ಷಡ್ಯಂತ್ರ ರಚನೆ- ಗ್ರೇಟಾ ಥನ್​ಬರ್ಗ್​ ಟ್ವೀಟ್​: ಟೂಲ್​​ಕಿಟ್​ ವಿರುದ್ಧ ಎಫ್​ಐಆರ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 4 =
Remember me
