ರಂಗಾಬಾದ್​ (ಮಹಾರಾಷ್ಟ್ರ):ಕೆಲವೊಮ್ಮೆ ಯಾರೂ ಊಹಿಸಲಾರದ ಎಡವಟ್ಟುಗಳು ಆಗಿಬಿಡುತ್ತವೆ. ಅಂಥದ್ದೇ ಒಂದು ಅತ್ಯಂತ ಅಚ್ಚರಿ ಎನ್ನುವಂಥ ವಿಲಕ್ಷಣೆ ಘಟನೆ ಆಗಿದೆ ಮಹಾರಾಷ್ಟ್ರದ ರಂಗಾಬಾದ್​ನಲ್ಲಿ.
ಹಲ್ಲುಜ್ಜುವಾಗ ಸಾಮಾನ್ಯವಾಗಿ ಪೇಸ್ಟ್​ ಹೊಟ್ಟೆಗೆ ಹೋಗುವುದು ಸಹಜ. ಆದರೆ ರಂಗಾಬಾದ್​ನ 32 ವರ್ಷದ ವಿಜಯ್ ಜನಾರ್ಧನ್ ಜಾಧವ್ ಎಂಬಾತ ಟೂಥ್​ಬ್ರಷನ್ನೇ ನುಂಗಿದ್ದಾನೆ. ಇದನ್ನು ಕೇಳಿ ಆಸ್ಪತ್ರೆಯ ವೈದ್ಯರೇ ದಂಗಾಗಿದ್ದಾರೆ. ಬ್ರಷ್​ ಎಲ್ಲಿ ಹೋಗಿದೆ ಎಂದು ಹುಡುಕಲು ವೈದ್ಯರು ಹರಸಾಹಸ ಮಾಡಬೇಕಾಗಿ ಬಂದಿತ್ತಂತೆ!
ಅಷ್ಟಕ್ಕೂ ಆಗಿದ್ದೇನೆಂದರೆ ಈತ ಹಲ್ಲುಜ್ಜುವಾಗ ಗಂಟಲನ್ನು ಇದೇ ಬ್ರಷ್​ನಿಂದ ಸ್ವಚ್ಛಮಾಡಲು ಹೋಗಿದ್ದಾನೆ. ಈತ ಹಲ್ಲನ್ನು ಉಜ್ಜುತ್ತಿದ್ದುದು ಸುಮಾರು 19 ಸೆಂಟಿಮೀಟರ್​ ಉದ್ದವಿರುವ ಬ್ರಷ್​ನಿಂದ ಅಕಸ್ಮಾತ್ತಾಗಿ ಅದು ಗಂಟಲಿಗೆ ಜಾರಿ ಹೋಗಿ ಸಿಲುಕಿಕೊಂಡು ಬಿಟ್ಟಿದೆ.

ಸ್ವಲ್ಪ ಹೊತ್ತಿನಲ್ಲಿಯೇ ವಿಪರೀತ ಹೊಟ್ಟೆನೋವು ಶುರುವಾಗಿದೆ. ಮಾತನಾಡಲೂ ಆಗದೆ, ಉಸಿರಾಡಲೂ ಆಗದೇ ನರಳುತ್ತಿದ್ದ ಈತನನ್ನು ಕೂಡಲೇ ಸಮೀಪದ ರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ನಂತರ ವೈದ್ಯರು ಎಕ್ಸರೆ ನಡೆಸಿದರು. ಬ್ರಷ್​ ಅನ್ನನಾಳದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಮೊದಲು ಅನ್ನನಾಳದ ಸಮೀಪ ಎಕ್ಸ್​ರೇ ಮಾಡಿದ್ದಾರೆ. ಆದರೆ ಅಲ್ಲಿ ಬ್ರಷ್​ ಕಾಣಿಸಲಿಲ್ಲ. ನಂತರ ಹೊಟ್ಟೆಯನ್ನು ಪರೀಕ್ಷಿಸಿದಾಗ ಅಲ್ಲೊಂದು ಕಡೆ ಈ ಬ್ರಷ್​ ಹೋಗಿ ಕುಳಿತುಕೊಂಡಿರುವುದು ಕಂಡುಬಂದಿದೆ.

ನಂತರ ಲ್ಯಾಪರೊಟಮಿ ಪರೀಕ್ಷೆ ಮೂಲಕ ಬ್ರಷ್​ ಇರುವಿಕೆಯನ್ನು ಖಚಿತಪಡಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬ್ರಷ್​ ತೆಗೆಯಲಾಗಿದೆ. ಅದೃಷ್ಟವಶಾತ್​ ಹೊಟ್ಟೆಯ ಮೇಲ್ಭಾಗದಲ್ಲಿ ಚಿಕ್ಕ ಪ್ರಮಾಣದ ಗಾಯಗಳಾಗಿರುವುದು ಬಿಟ್ಟರೆ ಬ್ರಷ್​ ಹೆಚ್ಚಿನ ಅನಾಹುತ ಮಾಡಲಿಲ್ಲ ಎಂದು ಡಾ. ಜುನೈದ್ ಶೇಖ್ ಹೇಳಿದ್ದಾರೆ.
ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ರೆಸ್ಟ್​ ಹೇಳಲಾಗಿದೆ ಎಂದಿದ್ದಾರೆ ಅವರು.
https://www.vijayavani.net/s-nandondu-kathe-patniya-sameepa-31-12/
ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸದ ವಿಡಿಯೋ ವೈರಲ್​: 26 ಮಂದಿ ಬಂಧನ

ಜನವರಿಯಲ್ಲಿ ಬ್ಯಾಂಕ್​ಗಳಿಗೆ ಇರುವ ರಜೆ ಎಷ್ಟು? 1ರಂದು ರಜೆ ಇದ್ಯಾ? ಇಲ್ಲಿದೆ ನೋಡಿ ವಿವರ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + three =
Remember me
