​ಇಂದೋರ್ (ಮಧ್ಯಪ್ರದೇಶ):ಅತ್ಯಂತ ಭಯಾನಕ ಎನ್ನುವ ಘಟನೆಯೊಂದರಲ್ಲಿ ಇಂದೋರ್​ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರತಾಪ್​ ಸೋಲಂಕಿ ಅವರು ನಿರ್ಗತಿಕರನ್ನು ಟ್ರಕ್​ನಿಂದ ತಳ್ಳುವ ಘಟನೆ ನಡೆದಿದೆ.
ಮನೆಯಿಲ್ಲದ ನಿರ್ಗತಿಕರನ್ನು ಟ್ರಕ್​ ಒಂದರಲ್ಲಿ ಕೂಡಿಹಾಕಿ ಅವರನ್ನು ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ದೂಡುತ್ತಿರುವ ಭಯಾನಕ ದೃಶ್ಯ ಇದಾಗಿದೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಘಟನೆ ವೈರಲ್​ ಆಗುತ್ತಿದ್ದಂತೆಯೇ, ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಶಿವರಾಜ್​ಸಿಂಗ್​ ಚೌಹಾಣ್​ ಅವರು ಅಧಿಕಾರಿ ಸೋಲಂಕಿ ಅವರನ್ನು ಅಮಾನತು ಮಾಡಿದ್ದಾರೆ.
इंदौर की ये घटना मानवता पर एक कलंक है। मुख्यमंत्री की अकर्मण्यता व गृहमंत्री के साथ कुर्सी की नूराकुश्ती के बीच प्रदेश में अफसरशाही हावी हो चुकी है। थोड़ी भी संवेदनशीलता बची हो तो मुख्यमंत्री इन बेसहारा लोगों से माफी मांगे व दोषी अधिकारियों पर कड़ी कार्यवाही करें।pic.twitter.com/HkQ3OraWmu
— Kunal Choudhary (@KunalChoudhary_)January 30, 2021

ಈ ಕುರಿತು ಟ್ವೀಟ್​ ಮಾಡಿರುವ ಅವರು, ಇದೊಂದು ಅತ್ಯಂತ ಹೇಯ ಕಾರ್ಯವಾಗಿದೆ. ಆದ್ದರಿಂದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇವರ ಜತೆಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ನೌಕರನನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅತಿಕ್ರಮಣ ಮಾಡಿಕೊಂಡು ನೆಲೆಸಿರುವ ನಿರ್ಗತಿಕರು, ವೃದ್ಧರನ್ನು ಒಂದು ಟ್ರಕ್​ನಲ್ಲಿ ಕರೆದುಕೊಂಡು ಬರುವ ಅಧಿಕಾರಿಗಳು ಅವರನ್ನು ಅವರ ವಸ್ತುಗಳ ಸಹಿತ ನಗರದ ಹೊರವಲಯದಲ್ಲಿ ರಸ್ತೆಯ ಮೇಲೆ ಎಸೆದುಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಇವರ ಪೈಕಿ ಹಲವರು ವಯೋವೃದ್ಧರಾಗಿರುವುದನ್ನು ನೋಡಬಹುದು.
“ವಯಸ್ಸಾದವರ ಬಗ್ಗೆ ಅಮಾನವೀಯ ವರ್ತನೆಯ ಬಗ್ಗೆ ನನಗೆ ಮಾಹಿತಿ ಬಂದಿದೆ. ಪುರಸಭೆಯ ಉಪ ಆಯುಕ್ತರು ಮತ್ತು ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ ಮತ್ತು ವೃದ್ಧರ ಸಂಪೂರ್ಣ ಆರೈಕೆ ಮಾಡುವಂತೆ ಇಂದೋರ್ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಚೌಹಾಣ್​ ಹೇಳಿದ್ದಾರೆ.
ಸೆಕ್ಸ್​ಡಾಲ್​ ಜತೆ ವರ್ಷ ಇದ್ದೆ- ಯುವತಿಗಿಂತ ಇದೇ ಬೆಸ್ಟ್ ಅನ್ನಿಸಿ ಮದ್ವೆಯಾಗ್ತಿದ್ದೇನೆ ಎಂದ ಯುವಕ!

ಮಂಚದಲ್ಲೂ ಪತ್ನಿಗೆ ಫೋನ್​ ಬೇಕು, ಲೈಂಗಿಕ ಸುಖವೇ ಇಲ್ಲ- ಡಿವೋರ್ಸ್​ ಕೇಸ್​ ಹಾಕಬಹುದಾ?

‘ಗೋಮಾಂಸ ಹಬ್ಬ’ ವಿರೋಧಿಸಿ ಹಲ್ಲೆ: ಬಿಜೆಪಿ ಶಾಸಕನಿಗೆ ಒಂದು ವರ್ಷ ಜೈಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + eleven =
Remember me
