ನವದೆಹಲಿ:ಬ್ರಿಟನ್ ರೂಪಾಂತರಿ ಸಾರ್ಡ್​ ಕೋವಿಡ್​-2 (SARS-CoV-2) ವೈರಾಣು ಭಾರತದಲ್ಲಿ ತನ್ನ ಜಾಲ ಬೀಸುತ್ತ ಸಾಗಿದೆ. ಒಂದೆಡೆ ಕೋವಿಡ್​-19 ಮಹಾಮಾರಿಯಿಂದ ಕಂಗಾಲಾಗಿರುವ ಜನರಿಗೆ ಇದು ಮತ್ತಷ್ಟು ಶಾಕ್​ ನೀಡಿದೆ.
ಡಿ.29 ರಂದು ಮೊದಲ ಬಾರಿಗೆ ದೇಶಾದ್ಯಂತ ಈ ರೂಪಾಂತರಿ ಸೋಂಕು 6 ಮಂದಿಯಲ್ಲಿ ದೃಢಪಟ್ಟಿತ್ತು. ಇಂದು (ಡಿ.30) ಬೆಂಗಳೂರಿನಲ್ಲಿ 7 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, ದೇಶಾದ್ಯಂತ ಹೊಸದಾಗಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆಯಾಗಿ ದೇಶದಲ್ಲಿ ಇದರ ಸಂಖ್ಯೆ 20ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ ರೂಪಾಂತರಿ ಕೋವಿಡ್-19 ಸೋಂಕಿಗೆ ಗುರಿಯಾದವರ ಕುಟುಂಬ ಸದಸ್ಯರು, ಅವರ ಜತೆ ಪ್ರಯಾಣ ಬೆಳೆಸಿದ ಸಹ ಪ್ರಯಾಣಿಕರು ಹಾಗೂ ಇನ್ನಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಮಗ್ರವಾಗಿ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ರೂಪಾಂತರಿ ಕರೊನಾ ಇರೋದು ನಿಜ. ಆದರೆ ಲಾಕ್​ಡೌನ್ ಭಯ ಬೇಕಾಗಿಲ್ಲ – ಆರೋಗ್ಯ ಸಚಿವ ಡಾ.ಸುಧಾಕರ್
ಡಿ.30 ರಂದು ನ್ಯಾಷನಲ್ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್​ಸಿಡಿಸಿ)ಯಲ್ಲಿ 8 ಸ್ಯಾಂಪಲ್​ಗಳು; ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಆಸ್ಪತ್ರೆ ಸಂಸ್ಥೆಯಲ್ಲಿ (ನಿಮ್ಹಾನ್ಸ್) 7 ಸ್ಯಾಂಪಲ್​ಗಳು; ಹೈದರಾಬಾದ್​ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರದಲ್ಲಿ (ಸಿಸಿಎಂಬಿ) 2 ಹಾಗೂ ಕೋಲ್ಕತಾದ ಬಳಿಯ ಕಲ್ಯಾಣಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್​ (ಎನ್‌ಐಬಿಎಂಜಿ), ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯಲ್ಲಿ (ಎನ್​ಐವಿ), ದೆಹಲಿಯ ಇನ್​ಸ್ಟಿಟ್ಯೂಟ್​ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ತಲಾ ಒಂದೊಂದು ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಾಣುವಿನ ಸೋಂಕು ದೃಢಪಟ್ಟಿವೆ.
ಹೊಸ ಮಾದರಿಯ ವೈರಾಣು ಭಾರತವಷ್ಟೇ ಅಲ್ಲದೇ ಈಗಾಗಲೇ ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಾಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬಿನಾನ್ ಸಿಂಗಪೂರ ಸೇರಿದಂತೆ ಹಲವೆಡೆ ಪತ್ತೆಯಾಗಿದೆ.
ನ.25 ರಿಂದ ಡಿ.23 ರ ಮಧ್ಯರಾತ್ರಿವರೆಗೆ 33 ಸಾವಿರ ಮಂದಿ ಬ್ರಿಟನ್​ನಿಂದ ಭಾರತಕ್ಕೆ ಬಂದಿದ್ದಾರೆ. ಈ ಎಲ್ಲಾ ಪ್ರಯಾಣಿಕರನ್ನೂ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಸದಾ ಯೌವನ ಬಯಸಿರುವಿರಾ? ಹಾಗಿದ್ದರೆ ಮೈಮೇಲೆ ಹೆಬ್ಬಾವು ಬಿಟ್ಕೊಳಿ- ಈ ವಿಡಿಯೋ ನೋಡಿ

ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳು

ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ನಿಮ್ಮದಾಗುವುದಿಲ್ಲ: ಕಾನೂನು ಏನು ಹೇಳುತ್ತದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 5 =
Remember me
