ಲುಧಿಯಾನಾ (ಪಂಜಾಬ್​):ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಅದೆಷ್ಟೋ ಸಲ ಈ ವೈದ್ಯರೇ ಎಡವಟ್ಟು ಮಾಡಿ ಜನರ ಪ್ರಾಣವನ್ನೇ ತೆಗೆಯುವುದೋ ಇಲ್ಲವೇ ರೋಗಿಗಳು ಕ್ರೂರವಾದ ಹಿಂಸೆ ಅನುಭವಿಸುವಂತೆ ಮಾಡುವುದೋ ನಡೆದೇ ಇದೆ.
ಅಂಥದ್ದೇ ಒಂದು ಆಘಾತಕಾರಿ ಘಟನೆ ಪಂಜಾಬ್​ನ ಲುಧಿಯಾನಾದಲ್ಲಿ ನಡೆದಿದೆ. ಡಿಸೆಂಬರ್ 8ರಂದು ರವೀಂದರ್ ಸಿಂಗ್ ಎನ್ನುವವರು ತಮ್ಮ ತುಂಬು ಗರ್ಭಿಣಿ ಪತ್ನಿಯನ್ನು ಡೆಲಿವರಿಗಾಗಿ ಕರೆತಂದಿದ್ದರು. ಅವರಿಗೆ ನಾರ್ಮಲ್​ ಹೆರಿಗೆ ಆಗುವುದಿಲ್ಲ, ಸಿಸೇರಿಯನ್ ಮಾಡಬೇಕು ಎಂದು ವೈದ್ಯರು ಹೇಳಿದರು.
ಅದಕ್ಕೆ ಸಿಂಗ್​ ಒಪ್ಪಿದ್ದಾರೆ. ಡೆಲಿವರಿಯನ್ನು ಸುಸೂತ್ರವಾಗಿ ಮಾಡಲಾಗಿದೆ ಎಂದು ವೈದ್ಯರು ನಂತರ ತಿಳಿಸಿದರು. ಮಗು ಮತ್ತು ಅಮ್ಮ ಇಬ್ಬರೂ ಆರೋಗ್ಯದಿಂದ ಇರುವುದಾಗಿ ಹೇಳಿದರು. ರವೀಂದರ್​ ಅವರು ಖುಷಿಯಿಂದ ಇದ್ದರು.
ಸ್ವಲ್ಪ ಹೊತ್ತಿನಲ್ಲಿಯೇ ಅವರ ಪತ್ನಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮೂತ್ರ ಕೂಡ ಮಾಡದ ಸ್ಥಿತಿ ಉಂಟಾಗಿದೆ. ವೈದ್ಯರು ಏನೇನೋ ಔಷಧವನ್ನು ನೀಡಿದರು. ನಿದ್ದೆ ಮಾತ್ರೆಗಳನ್ನು ನೀಡಿದರು. ಆದರೆ ಎಚ್ಚರವಾದಾಗ ಮತ್ತೆ ಅದೇ ನೋವು. ಎರಡು ದಿನಗಳಾದರೂ ನೋವು ಕಡಿಮೆಯಾಗಲಿಲ್ಲ. ವೈದ್ಯರು ತಮ್ಮಿಂದ ಏನೂ ತಪ್ಪಾಗಲಿಲ್ಲ ಎಂದರು.
ನಂತರ ರವೀಂದರ್​ ಅವರು ಪತ್ನಿಯನ್ನು ಅಲ್ಲಿಂದ ಡಿಸ್​ಚಾರ್ಜ್​ ಮಾಡಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಏನೂ ಆಗಲಿಲ್ಲ, ಪತ್ನಿಯ ಸಹಿಸಲಸಾಧ್ಯವಾದ ನೋವಿನಿಂದ ಕಂಗೆಟ್ಟುಹೋದ ರವೀಂದರ್​ ಅವರು ಕೊನೆಗೆ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಎಕ್ಸ್​ರೇ, ಸ್ಕ್ಯಾನಿಂಗ್​ ಎಲ್ಲಾ ಮಾಡಿದಾಗ ಗರ್ಭದಲ್ಲಿ ಯಾವುದೋ ವಸ್ತು ಇರುವುದು ಕಂಡುಬಂದಿದೆ.
ನಂತರ ಪುನಃ ಅವರಿಗೆ ಆಪರೇಷನ್​ ಮಾಡಲಾಯಿತು. ಗರ್ಭದಲ್ಲಿ ಟವಲ್​ ಇರುವುದು ಕಂಡು ಅದನ್ನು ತೆಗೆದರು. ಇನ್ನು ಒಂದೆರಡು ದಿನಗಳಾಗಿದ್ದರೆ ಮಹಿಳೆಯ ಪ್ರಾಣಕ್ಕೇ ಅಪಾಯವಾಗುತ್ತಿತ್ತು.
ಇಷ್ಟಕ್ಕೆ ಸುಮ್ಮನಾದ ರವೀಂದರ್​ ಸಿಂಗ್​ ಹಾಗೂ ಅವರ ಸಂಬಂಧಿಕರು ಕೆಲವು ಸಾಮಾಜಿಕ ಕಾರ್ಯಕರ್ತರ ಜತೆಗೂಡಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸಿದ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಸ್ಪತ್ರೆ ಸರ್ಜನ್ ಡಾ.ರಾಜೇಶ್ ಬಗ್ಗಾ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಆ ಆಸ್ಪತ್ರೆಯಲ್ಲಿ ಇಂಥ ನಿರ್ಲಕ್ಷ್ಯ ಆಗಿರುವುದು ಇದೇ ಮೊದಲಲ್ಲ. 2019ರ ಮೇ ತಿಂಗಳಿನಲ್ಲಿ ಬಿ ಪಾಸಿಟಿವ್​ ರಕ್ತದ ಅವಶ್ಯಕತೆ ಇದ್ದ ಒಬ್ಬ ರೋಗಿಗೆ ಎ ಪಾಸಿಟಿವ್​ ರಕ್ತ ನೀಡಿ ಎಡವಟ್ಟು ಮಾಡಲಾಗಿತ್ತು. ನಂತರ ಇದರ ವಿರುದ್ಧ ದೂರು ದಾಖಲಾದಾಗ ರಕ್ತ ವರ್ಗಾವಣೆ ಅಧಿಕಾರಿ, ಒಬ್ಬ ಸ್ಟಾಫ್ ನರ್ಸ್ ಮತ್ತು ಮ್ಯಾಟ್ರಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪತ್ನಿ ಒಳ್ಳೆಯವಳು, ಆದರೆ ಪುರುಷರ ಬಳಿ ಮಾತನಾಡಿದರೆ ಕಿರಿಕಿರಿಯಾಗುತ್ತದೆ- ಈ ಸಂಶಯಕ್ಕೆ ಪರಿಹಾರ?

ಬುದ್ಧಗಯಾ, ಅಯೋಧ್ಯೆ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಮಹಿಳೆ ಕಣ್ಣು- ಎಲ್ಲೆಡೆ ಕಟ್ಟೆಚ್ಚರ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೆ ಸಿಎಂ ಮಮತಾ ಬ್ಯಾನರ್ಜಿ ಹತ್ಯೆಯಾಗತ್ತಂತೆ!

ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಗೆದ್ದವರ ಬಳಿ ಆಕೆಯ ಕಳುಹಿಸಿದ- ಮುಂದಾದದ್ದೆಲ್ಲವೂ ಭಯಾನಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
