ನವದೆಹಲಿ:ಟ್ರಾಫಿಕ್​ ನಿಯಮ ಉಲ್ಲಂಘಿಸಿರುವ ಕಾರುಚಾಲಕನೊಬ್ಬ, ತನ್ನನ್ನು ತಡೆಯಲು ಬಂದ ಟ್ರಾಫಿಕ್​ ಪೊಲೀಸ್​ನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
#WATCHAn on-duty Delhi Traffic Police personnel in Delhi's Dhaula Kuan dragged on the bonnet of a car for few metres after he attempted to stop the vehicle for a traffic rule violation. The car driver was held later.(12.10.20)#Delhipic.twitter.com/R055WpBm8M
— ANI (@ANI)October 15, 2020

ಆಲಂಕಾರಿಕ ನಂಬರ್‌ಪ್ಲೇಟ್ ಬಳಸುವುದನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ. ಆದರೂ ಇಂಥ ನಂಬರ್​ ಪ್ಲೇಟ್​ ಒಂದು ಕಾರಿನಲ್ಲಿ ಕಾಣಿಸಿದೆ. ಆದ್ದರಿಂದ ಟ್ರಾಫಿಕ್​ ಪೊಲೀಸ್ ಕಾರನ್ನು ತಡೆಯಲು ಬಂದಿದ್ದಾನೆ. ಈ ಸಮಯದಲ್ಲಿ ಕಾರಿನಲ್ಲಿದ್ದ ಚಾಲಕ, ಕಾರು ನಿಲ್ಲಿಸದೇ ರಭಸದಿಂದ ಹೋಗಿದ್ದಾನೆ.
ಆಗ ಕಾರಿನ ಬಾನೆಟ್​ ಮೇಲೆ ಪೊಲೀಸ್​ ಬಿದ್ದುಬಿಟ್ಟಿದ್ದಾರೆ. ಆದರೂ ಬಿಡದ ಚಾಲಕ ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ಕಾರನ್ನು ವಾಹನ ಚಲಾಯಿಸಿದ್ದಾನೆ.
ಇದರಿಂದಾಗಿ ‘ಸುಮಾರು 400 ಮೀಟರ್ ದೂರದವರೆಗೆ ಕಾರಿನ ಬಾನೆಟ್​ ಮೇಲೆ ಪೊಲೀಸ್​ ಎಳೆಯಲ್ಪಟ್ಟಿದ್ದಾರೆ.
ಉಳಿದ ಸವಾರರು ಇದನ್ನು ನೋಡುತ್ತಿದ್ದರೂ ಕಾರು ಸ್ಪೀಡ್​ನಲ್ಲಿ ಇರುವ ಕಾರಣ ಭಯದಿಂದ ಹೋಗುತ್ತಿರುವುದನ್ನು ಸಿಸಿಟಿವಿಯಲ್ಲಿ ಕಾಣಬಹುದಾಗಿದೆ. ಸುಮಾರು 400 ಮೀಟರ್ ಹೋದ ಮೇಲೆ ಆಯ ತಪ್ಪಿ ಟ್ರಾಫಿಕ್ ಪೊಲೀಸ್​ ಕೆಳಕ್ಕೆ ಬಿದ್ದಿದ್ದಾರೆ.
ಕಾಲು ಕಾರಿನ ಚಕ್ರದಲ್ಲಿ ಸಿಲುಕುವುದರಿಂದ ಸ್ವಲ್ಪದರಲ್ಲೇ ಪಾರಾಗಿರುವುದು ಈ ದೃಶ್ಯದಲ್ಲಿ ದಾಖಲಾಗಿದೆ. ಕಳೆದ ಸೋಮವಾರ ದಕ್ಷಿಣ ದೆಹಲಿಯ ಧೌಲಾ ಕುವಾನ್​ ಎಂಬಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್​ರೇಪ್​!

ರಾತ್ರಿಯಿಡೀ ಫ್ರೀಜರ್​ನಲ್ಲಿದ್ದ ‘ಮೃತ’ ವೃದ್ಧ ಬೆಳಗಾದಾಗ ಅಲುಗಾಡಿದ!

ಕೇರಳ ಚಿನ್ನದ ಸ್ಮಗ್ಲಿಂಗ್​ ಕೇಸ್​ಗೆ ದಾವೂದ್​ ನಂಟು!​ ಕೋರ್ಟ್​ಗೆ ಎನ್​ಐಎ ಮಾಹಿತಿ…

ಕಟ್ಟಿಕೊಂಡವಳನ್ನೇ ವರ್ಷಗಳಿಂದ ಶೌಚಗೃಹದಲ್ಲಿ ಕೂಡಿಹಾಕಿದ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 14 =
Remember me
