ಚೆನ್ನೈ:ಮುಟ್ಟು… ಇದು ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ನಡೆಯುವ ಸಂಭ್ರಮದ ಕ್ಷಣವಿದು. ಒಂದು ಹೆಣ್ಣು ಪರಿಪೂರ್ಣ ಹೆಣ್ಣಾಗಿ, ತಾಯ್ತತನಕ್ಕೆ ತನ್ನ ದೇಹವನ್ನು ಒಗ್ಗಿಸಿಕೊಳ್ಳುವ ಪ್ರಕೃತಿದತ್ತವಾಗಿರುವ ಪ್ರಕ್ರಿಯೆ ಇದು. ಇದೇ ಕಾರಣಕ್ಕೆ ಹಲವಾರು ಪ್ರದೇಶಗಳಲ್ಲಿ ಹೆಣ್ಣುಮಗಳು ಮೊದಲ ಬಾರಿ ಮುಟ್ಟಾದ ತಕ್ಷಣ ಮದುವೆಯ ಸಡಗರದಂತೆಯೇ ಮುಟ್ಟಿನ ಸಂಭ್ರಮಾಚರಣೆಯನ್ನೂ ಮಾಡುತ್ತಾರೆ.
ಕೆಲವೊಂದು ಜಾತಿ, ಪ್ರದೇಶ, ರಾಜ್ಯಗಳಲ್ಲಿ ಮುಟ್ಟಿನ ಸಂಭ್ರಮ ಬಹು ಜೋರಾಗಿಯೇ ನಡೆಯುತ್ತದೆ. ಮದುವಣಗಿತ್ತಿನಂತೆ ಬಾಲಕಿಯನ್ನು ಸಿಂಗರಿಸಿ, ಮನೆಗೂ ಸಿಂಗಾರ ಮಾಡಿ ಊರಿನ ಜನರಿಗೆ ಊಟವನ್ನೂ ಹಾಕುವ ಪದ್ಧತಿ ಇದೆ.
ಇಂಥದ್ದೊಂದು ಹೆಣ್ತತನದ ಸುಖವನ್ನು ಅನುಭವಿಸುವ ಅದೃಷ್ಟ ಹೆಣ್ಣು ಎನಿಸಿಕೊಂಡರೂ ತೃತೀಯ ಲಿಂಗಿಯರಿಗೆ ಇಲ್ಲವಲ್ಲ. ಹಾಗಿದ್ದ ಮೇಲೆ ಮುಟ್ಟಿನ ಸಂಭ್ರಮ ಅನುಭವಿಸುವುದು ಹೇಗೆ? ಪ್ರಕೃತಿದತ್ತವಾಗಿ ಹುಟ್ಟುತ್ತಲೇ ಅಸಹಜ ಎನ್ನುವ ದೇಹ ಪ್ರಕೃತಿ ಹೊಂದಿರುವ ತೃತೀಯ ಲಿಂಗಿಯರಿಂದ ಈ ಸಂಭ್ರಮವನ್ನು ತಾಯಿಯಾದವಳು ಕಸಿದುಕೊಳ್ಳಲು ಸಾಧ್ಯವೆ? ಇಲ್ಲವೇ ಇಲ್ಲ. ಅಂಥದ್ದೇ ಒಂದು ಮನ ಮಿಡಿಯುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುದಾಚಲಂನಲ್ಲಿ ನಡೆದಿದೆ.
ಈ ಚಿತ್ರವನ್ನೊಮ್ಮೆ ನೋಡಿ. ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಕುಳಿತಿರುವಾಕೆಯ ಹೆಸರು ನಿಶಾ. ಮೂಲ ಹೆಸರು ನಿಶಾಂತ್‌. ಕೊಳಂಚಿ-ಅಮುತಾ ದಂಪತಿಯ ಮಗನಾಗಿ ಹುಟ್ಟಿದ್ದ ನಿಶಾಂತ್‌ಗೆ ನಂತರ ತನ್ನ ದೇಹದಲ್ಲಾಗುತ್ತಿರುವ ಬದಲಾವಣೆ ನೋಡಿ ತಾನು ಹೆಣ್ಣು ಎಂಬ ಅರಿವಾಗತೊಡಗಿತು.
ಇಷ್ಟಾಗುತ್ತಿದ್ದಂತೆಯೇ ಸಮಾಜದ ಚುಚ್ಚು ನುಡಿಗಳಿಂದ ಬೇಸತ್ತ ಅಪ್ಪ-ಅಮ್ಮನೂ ಒಂದು ಹಂತದಲ್ಲಿ ಏನೋ ಹೇಳಿಬಿಟ್ಟರು. ಇದರಿಂದ ಬೇಸರಿಸಿಕೊಂಡ ನಿಶಾಂತ್‌ ಮನೆ ಬಿಟ್ಟು ಹೋಗಿ ತೃತೀಯ ಲಿಂಗಿ ಸಮಯದಾಯದ ಜತೆಗೆ ವಾಸವಾಗತೊಡಗಿದರು.
ಇದೀಗ ನಿಶಾಂತ್‌ಗೆ 21 ವರ್ಷ ವಯಸ್ಸು. ಮನೆ ಬಿಟ್ಟು ಹೋದ ಮಗನಿಗಾಗಿ ಹಂಬಲಿಸಿದ ತಾಯಿಗೆ ತಾನು ಮಾಡಿದ್ದು ತಪ್ಪು ಎನಿಸಿತು. ನಿಶಾಂತ್‌ನನ್ನು ವಾಪಸ್‌ ಕರೆದುಕೊಂಡು ಬಂದು ಆತನ ಇಚ್ಛೆಯಂತೆ ಮಹಿಳೆಯಾಗಿಯೇ ಉಳಿಯಲು ಅವಕಾಶ ಕಲ್ಪಿಸಿ ನಿಶಾ ಎಂದು ಹೆಸರಿಟ್ಟರು.
ಇಷ್ಟಾದರೆ ಸಾಕೆ? ಮಗಳಿಗೆ ಮುಟ್ಟಿನ ಸಂಭ್ರಮ ಬೇಡವೆ ಎಂದು ಯೋಚಿಸಿದ ನಿಶಾಳ ಅಮ್ಮ, ತಮಿಳುನಾಡಿನಲ್ಲಿ ಬಲು ಪ್ರಚಲಿತದಲ್ಲಿರುವ ಮುಟ್ಟಿನ ಸಂಭ್ರಮಕ್ಕೆ ಮಗಳನ್ನು ಅಣಿಗೊಳಿಸಿದರು. ಮೊದಲ ಬಾರಿಗೆ ಮಗಳ ಮುಟ್ಟಾದಾಗ ಯಾವ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತದೆಯೋ, ಯಾವ ರೀತಿಯ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆಯೋ ಅದೇ ರೀತಿ ಸಮಾರಂಭ ಏರ್ಪಡಿಸಿ ಮಗಳಿಗೆ ಮುಟ್ಟಿನ ಸಂಭ್ರಮ ಆಚರಿಸಿದ್ದಾರೆ. ಮೂದಲಿಸುತ್ತಿದ್ದವರನ್ನೂ ಸೇರಿದಂತೆ ಎಲ್ಲರನ್ನೂ ಸಮಾರಂಭಕ್ಕೆ ಕರೆದಿರುವ ದಂಪತಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಇದೀಗ ಈ ಕಾರ್ಯ ಭಾರಿ ವೈರಲ್‌ ಆಗಿದ್ದು, ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ತಮ್ಮದಲ್ಲದ ತಪ್ಪಿಗೆ ಪ್ರಕೃತಿಯಿಂದ ಬಂದಿರುವ ದೇಹವನ್ನು ಅಪ್ಪ-ಅಮ್ಮನೂ ಸ್ವೀಕರಿಸಿ ಮಕ್ಕಳಿಗೆ ಇಂಥದ್ದೇ ಪ್ರೀತಿ ತೋರಿದರೆ ತೃತೀಯ ಲಿಂಗಿಯರೂ ಈ ಸಮಾಜದಲ್ಲಿ ತಲೆ ಎತ್ತಿ ಬಾಳುತ್ತಾರೆ ಎಂದು ಎಲ್ಲರೂ ಹಾಡಿ ಹೊಗಳಿದ್ದಾರೆ.
ಬಂಧನ ಭೀತಿಯಲ್ಲಿ ನಟಿ ಸೋನಾಕ್ಷಿ ಸಿಂಗ್‌! ವಂಚನೆ ಕೇಸ್‌ನಲ್ಲಿ ಕೋರ್ಟ್‌ನಿಂದ ಜಾಮೀನು ರಹಿತ ವಾರೆಂಟ್‌
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
