ಹಲ್‌ದ್ವಾನಿ (ಉತ್ತರಾಖಂಡ): ತ್ರಿವಳಿ ತಲಾಖ್‌ ರದ್ದಾಗಿ ಎರಡು ವರ್ಷಗಳಾಗುತ್ತಾ ಬಂದರೂ ಮುಸ್ಲಿಂ ಮಹಿಳೆಯರು ಈ ಹಿಂಸೆಯಿಂದ ಇಂದಿಗೂ ತಪ್ಪಿಸಿಕೊಂಡಿಲ್ಲ. ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಪತ್ನಿಯನ್ನು ನಡುರಸ್ತೆಗೇ ಕೈಬಿಟ್ಟು ಮೂರು ಬಾರಿ ತಲಾಖ್‌ ಹೇಳುವ ಮೂಲಕ ದಾಂಪತ್ಯ ಸಂಬಂಧವನ್ನು ಕಳಚಿಕೊಳ್ಳುತ್ತಿರುವ ಈ ಪದ್ಧತಿಯಿಂದ ಅದೆಷ್ಟೋ ಮಹಿಳೆಯರ ಜೀವನ ನರಕವಾಗಿದೆ.
ಇದೀಗ ಅಂಥದ್ದೇ ಒಂದು ಘಟನೆ ಉತ್ತರಾಖಂಡದ ಹಲ್‌ದ್ವಾನಿ ಎಂಬಲ್ಲಿ ನಡೆದಿದೆ. ತುಂಬು ಗರ್ಭಿಣಿಗೆ ಪತಿಯೊಬ್ಬ ತ್ರಿಬಲ್‌ ತಲಾಖ್‌ ನೀಡಿದ್ದಾನೆ. ಅದೂ ಏಕೆ ಎಂದರೆ ತವರು ಮನೆಯಿಂದ ಬೈಕ್‌ ಕೊಡಿಸುವಂತೆ ಕೇಳಿರುವ ಗಂಡ, ಅದು ಕೊಡಿಸಲು ಪತ್ನಿಯ ಮನೆಯವರಿಗೆ ಸಾಧ್ಯವಾಗದ್ದರಿಂದ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾನೆ. 2021ರ ಮೇ 14ರಂದು ನಾಯ್ ಬಸ್ತಿಯ ತಾಜ್ ಮಸೀದಿಯ ನಿವಾಸಿ ಅಬ್ದುಲ್ ಖಾದಿರ್ ಎಂಬಾತನ ಜತೆ ಮದುವೆ ಮಾಡಿಕೊಂಡ ಎಂಟು ತಿಂಗಳ ಗರ್ಭಿಣಿಗೆ ಈ ದುಃಸ್ಥಿತಿ ಬಂದಿದೆ.
ಬಂಭುಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳೆಗೆ ಈ ದುಃಸ್ಥಿತಿ ಬಂದಿದೆ. ಬೈಕ್‌ ಕೊಡಿಸದೇ ಹೋದರೆ ಗರ್ಭಪಾತ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಮಹಿಳೆಗೆ ಬೈಕ್‌ ಕೊಡಿಸಲು ಸಾಧ್ಯವಾಗಲಿಲ್ಲ. ಗರ್ಭಪಾತಕ್ಕೆ ಆಕೆ ಒಪ್ಪದಾಗ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾನೆ ಪತಿ. ಇದೀಗ ಆಕೆಯ ತವರಿನವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪತಿ ಮತ್ತು ಆತನ ಪಾಲಕರು ಸೇರಿದಂತೆ ಆಕೆಯ ಅತ್ತೆಯ ಕುಟುಂಬದ ಆರು ಜನರ ವಿರುದ್ಧ ಪೊಲೀಸರು ತ್ರಿವಳಿ ತಲಾಖ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನ್ನ ದುಡಿಮೆ ಸಾಲದೆಂದು, ಪತ್ನಿಯನ್ನೂ ಕೆಲಸಕ್ಕೆ ಕಳುಹಿಸಿದ- ಶೀಲ ಶಂಕಿಸಿ ಕೊಲೆ ಮಾಡಿದ, ಇಬ್ಬರು ಕಂದಮ್ಮಗಳು ಅನಾಥ!

ಹಾರ ಬದಲಾಯಿಸುವಾಗ ವಧುವಿಗೆ ತಿಳಿದೇ ಬಿಡ್ತು ವರನ ಆ ಗುಟ್ಟು! ಮೂರ್ಛೆ ಹೋದಳು, ಮದ್ವೆ ಕ್ಯಾನ್ಸಲ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
