ಅಗರ್ತಲ (ತ್ರಿಪುರಾ):ಸತ್ತೇ ಹೋದಿದ್ದಾನೆ ಎನ್ನುವ ವ್ಯಕ್ತಿಗಳು ಮರಳಿ ಬರುವ ಅನೇಕ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ತ್ರಿಪುರಾದಲ್ಲಿಯೂ ನಡೆದಿದೆ.
22 ವರ್ಷದ ಯುವಕ ಆಕಾಶ್​ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈತ ಕಾಳಿಬಜಾರ್​ ನಿವಾಸಿ. ಮನೆಬಿಟ್ಟು ಹೋಗಿದ್ದ ಮಗ ಎಷ್ಟು ದಿನವಾದರೂ ಮಗ ಬಾರದ್ದನ್ನು ಕಂಡ ಪಾಲಕರು ಮಿಸ್ಸಿಂಗ್​ ದೂರನ್ನು ದಾಖಲು ಮಾಡಿದ್ದರು.
ಅಗರ್ತಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲರಮಠ ಬಳಿಯ ಕೆರೆಯಲ್ಲಿ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಪ್ರಾಥಮಿಕ ವಿಚಾರಣೆಯ ನಂತರ ಮೃತರು ಕಳೆದ ತಿಂಗಳು ನಾಪತ್ತೆಯಾಗಿದ್ದವ ಕಾಳಿಬಜಾರ್ ನಿವಾಸಿ ಎಂದು ತಿಳಿದುಬಂದಿತ್ತು. ನಂತರ ಆಕಾಶ್​ ತಂದೆಗೆ ವಿಷಯ ತಿಳಿಸಿದ್ದರು.
ಆಕಾಶ್‌ನ ತಂದೆ ಪ್ರಣಬ್ ಸರ್ಕಾರ್ ಅವರನ್ನು ಪೊಲೀಸರು ಸಂಪರ್ಕಿಸಿ ಇದು ನಿಮ್ಮ ಮಗನದ್ದೇ ಶವವೇ ಎಂದು ಗುರುತಿಸುವಂತೆ ಕೇಳಿದ್ದರು. ಆಸ್ಪತ್ರೆಗೆ ಧಾವಿಸಿದ್ದ ಪ್ರಣಬ್​ ಶವವನ್ನು ನೋಡಿದ್ದರು. ಅದರ ಪ್ಯಾಂಟ್ ಮತ್ತು ಟ್ಯಾಬ್ಲೆಟ್‌ಗಳನ್ನು ಹೊಂದಿರುವ ಚೀಲವನ್ನು ನೋಡಿದ ಅವರು ಶವ ತಮ್ಮ ಮಗನದ್ದೇ ಎಂದು ಹೇಳಿದರು. ಶವ ಕೊಳೆತು ಹೋಗಿದ್ದರಿಂದ ಮುಖ ಗುರುತಿಸುವುದು ಕಷ್ಟವಾಗಿತ್ತು. ನಂತರ ಪೊಲಿಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು.
ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. ನಿನ್ನೆ ಮಗನ ತಿಥಿ ಕಾರ್ಯ ನಡೆಯುತ್ತಿತ್ತು. ಜನರು ಮನೆಯಲ್ಲಿ ಸೇರಿದ್ದರು. ಆಕಾಶ್​ನ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು ಇನ್ನೂ ದುಃಖದಲ್ಲಿ ಮುಳುಗಿದ್ದರು. ಇದೇ ವೇಳೆ ಆಕಾಶ್​ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಆತನನ್ನು ನೋಡಿ ಕುಟುಂಬದವರು ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಅದು ಆಕಾಶನೇ ಎಂದು ತಿಳಿದಾಗ ಆದ ಅಚ್ಚರಿ, ಸಂತೋಷ ಅಷ್ಟಿಷ್ಟಲ್ಲ. ತಾನು ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದೆ. ಅಲ್ಲಿ ಇಲ್ಲಿ ಅಲೆದಾಡಿದ ಬಳಿಕ ಕೊನೆಗೆ ಮನೆಗೆ ವಾಪಸಾದೆ ಎಂದಿದ್ದಾನೆ ಆಕಾಶ್​.
ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾಗಿರುವ ನನ್ನ ಮಗನಂತೆಯೇ ಹೋಲುವ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಇದು ನನ್ನ ಮಗನ ರೂಪಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಾನು ಪದೇ ಪದೇ ಪೊಲೀಸರಿಗೆ ಹೇಳಿದ್ದೆ. ನೀರಿನಲ್ಲಿ ಮುಳುಗಿದ್ದರಿಂದ ದೇಹವು ಊದಿಕೊಂಡಿದೆ ಎಂದು ಪೊಲೀಸರು ಒತ್ತಾಯಿಸಿದರು. ವಾಸ್ತವವಾಗಿ, ಶವದೊಂದಿಗೆ ಪತ್ತೆಯಾದ ಮಾತ್ರೆಗಳು ಮತ್ತು ಪ್ಯಾಂಟ್ ಒಳಗೊಂಡಿರುವ ಚೀಲವು ನನ್ನ ಮಗನದ್ದಾಗಿದೆ ಎಂದು ಅವರು ಹೇಳಿದರು. ಆದ್ದರಿಂದ ಅದು ನನ್ನ ಮಗನ ಶವವೇ ಎಂದು ತಿಳಿದುಕೊಂಡೆ ಎಂದು ತಂದೆ ಆರೋಪಿಸಿದ್ದಾರೆ.
ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

ನೌಕರನ ಹೆಂಡ್ತಿ ಕಾಟಕ್ಕೆ ಬರ್ಬರವಾಗಿ ಕೊಲೆಯಾದ ಮಾಲೀಕ: ಬಯಲಾಯ್ತು ಬೆಂಗಳೂರು ಉದ್ಯಮಿಯ ಮರ್ಡರ್​ ರಹಸ್ಯ!

ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:17 − fourteen =
Remember me
