ಲುಧಿಯಾನ (ಪಂಜಾಬ್):ಯುವಕರಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ವ್ಯಸನ ಹೆಚ್ಚುತ್ತಿದೆ. ಅದರಲ್ಲಿಯೂ ಪಂಜಾಬ್‌ ಇದಕ್ಕೆ ತುಂಬಾ ಪ್ರಸಿದ್ಧಿ ಪಡೆದಿದೆ.
ಈ ಹಿನ್ನೆಲೆಯಲ್ಲಿ, ಮಾದಕ ದ್ರವ್ಯದ ಬಗ್ಗೆ ಅರಿವು ಮೂಡಿಸಲು ಹಲವಾರು ಅಭಿಯಾನಗಳು ನಡೆಯುತ್ತಿವೆ. ಈ ನಡುವೆಯೇ 75 ವರ್ಷದ ನಿಹಾಂಗ್ ಎನ್ನುವ ಯೋಧನೊಬ್ಬ ವಿಭಿನ್ನ ರೀತಿಯಲ್ಲಿ ಮಾದಕ ದ್ರವ್ಯದ ವಿರುದ್ಧ ಹೋರಾಟ ಮಾಡಿದ್ದಾರೆ.
10 ಟನ್‌ ಭಾರದ ಟ್ರಕ್‌ ಎಳೆಯುವ ಮೂಲಕ ಇದರ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಅಷ್ಟಕ್ಕೂ ಇವರು ಟ್ರಕ್‌ ಎಳೆಯುವುದಕ್ಕೂ ಯುವಕರಿಗೆ ಜಾಗೃತಿ ಮೂಡಿಸುವುದಕ್ಕೂ ಸಂಬಂಧ ಹೇಗೆ ಎಂಬ ಪ್ರಶ್ನೆ ಬರುವುದು ಸಹಜ.
ಅದಕ್ಕೆ ಉತ್ತರಿಸಿರುವ ನಿಹಾಂಗ್‌ ಅವರು, ‘ನನಗೀಗ 75 ವರ್ಷ. ಕೇವಲ ಎರಡು ತಿಂಗಳ ಅಭ್ಯಾಸದಿಂದ ಇಷ್ಟೊಂದು ಭಾರದ ಟ್ರಕ್‌ ಎಳೆಯಲು ಶಕ್ಯನಾಗಿದ್ದೇನೆ. ಅಷ್ಟೇ ಅಲ್ಲದೇ, ಇದೇ ಅವಧಿಯಲ್ಲಿ ನಾನು ನನ್ನ ಹಲ್ಲುಗಳಿಂದ ಭಾರವನ್ನು ಎತ್ತುತ್ತೇನೆ. ಇಷ್ಟು ಇಳಿ ವಯಸ್ಸಿನ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಿರುವಾಗ, ಯುವಕರಾಗಿರುವ ನಿಮಗೆ ಚಿಕ್ಕ ಮನಸ್ಸು ಮಾಡಿ ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗಲು ಸಾಧ್ಯವಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸುಪ್ರೀಂಕೋರ್ಟ್‌ಗೆ ಅವಹೇಳನ- ಖ್ಯಾತ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅಪರಾಧಿ
ಯುವಕರು ಮಾದಕ ವ್ಯಸನಿಗಳಾಗುತ್ತಿರುವುದನ್ನು ನೋಡುತ್ತಿದ್ದೇನೆ. ಇದರಿಂದ ತುಂಬಾ ಬೇಸರವಾಗಿದೆ. ಅವರಿಗೆ ಸ್ಫೂರ್ತಿ ತುಂಬುವಂಥ ಏನಾದರೂ ಕೆಲಸ ಮಾಡುವ ಯೋಚನೆ ಮಾಡಿದೆ. ಅದಕ್ಕಾಗಿ ಜಿದ್ದಿಗೆ ಬಿದ್ದು ಎರಡು ತಿಂಗಳು ಸತತ ಅಭ್ಯಾಸ ಮಾಡಿ ಈ ಸಾಹಸ ಮಾಡುತ್ತಿದ್ದೇನೆ.
ಮೊದಲು 110 ಕೆ.ಜಿಯನ್ನು ಹಲ್ಲುಗಳಿಂದ ಎಳೆಯುವ ಮೂಲಕ ಅಭ್ಯಾಸವನ್ನು ಪ್ರಾರಂಭಿಸಿದೆ. ನಂತರ ಹಲ್ಲುಗಳಣ್ನು ಬಳಸಿ ಕಾರನ್ನು ಎಳೆದೆ. ಇದೀಗ ಭುಜಗಳಿಗೆ ಹಗ್ಗವನ್ನು ಕಟ್ಟಿ ಟ್ರಕ್‌ ಎಳೆಯುತ್ತಾನೆ ಎನ್ನುತ್ತಾರೆ.
ಇತ್ತೀಚೆಗೆ, ಪಂಜಾಬ್‌ನ ಮೂರು ಜಿಲ್ಲೆಗಳಲ್ಲಿ 121 ಜನರು ಅಕ್ರಮ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ.
ನಾಯಿಗೆ ಕೃಷ್ಣವೇಷ ಹಾಕಿ ಕಿಡಿ ಹೊತ್ತಿಸಿದ ಮಂಗಳೂರು ಮಾಡೆಲ್‌!

ನಕ್ಸಲ್‌ ಆಗಲು ಅನುಮತಿ ಕೊಡಿ- ರಾಷ್ಟ್ರಪತಿಗೆ ಯುವಕನ ಪತ್ರ: ಆಂಧ್ರದಲ್ಲಿ ತಲ್ಲಣ!

ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 + five =
Remember me
