ಪುಣೆ:ರಾಯಗಢ ಜಿಲ್ಲೆಯ ಖೊಪೋಲಿ ಸಮೀಪದ ಪುಣೆ-ಮುಂಬೈ ಎಕ್ಸ್ ಪ್ರಸ್ ವೇನಲ್ಲಿ ಇಂದು ಬೆಳಗ್ಗೆ ಕಂಟೈನರ್ ಟ್ರಕ್‌ ಹಾಗೂ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ವೈದ್ಯ ಸೇರಿ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿರುವ ಘಟನೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.
ಖಪೋಲಿ ಬಳಿ ಈ ಘಟನೆ ಸಂಭವಿಸಿದೆ. ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಎಂಸಿ) ವೈದ್ಯ ಸೇರಿ ಅವರ ಇಡೀ ಕುಟುಂಬ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
Maharashtra: Five killed and at least five injured in a collision between multiple vehicles on Mumbai – Pune Expressway near Khopoli last night. The injured were taken to a hospital.pic.twitter.com/itblPUEE5X— ANI (@ANI)February 16, 2021
Maharashtra: Five killed and at least five injured in a collision between multiple vehicles on Mumbai – Pune Expressway near Khopoli last night. The injured were taken to a hospital.pic.twitter.com/itblPUEE5X
ರಾಯಗಢ ಜಿಲ್ಲಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ 1ರ ಸುಮಾರಿಗೆ ಮುಂಬೈನತ್ತ ತೆರಳುತ್ತಿದ್ದ ಕಂಟೈನರ್ ಟ್ರಕ್ ಎರಡು ಕಾರುಗಳಿಗೆ ಡಿಕ್ಕಿಯಾಗಿದ್ದು ಈ ಘಟನೆ ಸಂಭವಿಸಿದೆ. ಎಲ್ಲಾ ವಾಹನಗಳೂ ಜಖಂ ಆಗಿವೆ.
ಮೃತಪಟ್ಟವರನ್ನು ಡಾ.ವೈಭವ್ ವಸಂತ್(40 ವರ್ಷ) ವೈಭವ್ ತಾಯಿ ಉಷಾವಸಂತ್(63), ಪತ್ನಿ ವೈಶಾಲಿ(38) ಹಾಗೂ ಪುತ್ರಿ ಶ್ರೇಯಾ(5) ಹಾಗೂ ಮುಂಬೈ ಗೋರೆಗಾಂವ್ ನಿವಾಸಿ ಮಂಜು ಪ್ರಕಾಶ್(58)ಎಂದು ಗುರುತಿಸಲಾಗಿದೆ. ಡಾ. ವೈಭವ್ ಅವರ ಪುತ್ರ ಅರ್ನವ್ ಗಂಭೀರ ಗಾಯಗೊಂಡಿದ್ದು, ಜೀವಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಕಾಲುವೆಗೆ ಬಿದ್ದ ಬಸ್ : 32 ಮಂದಿ ದುರ್ಮರಣ

ಖಲಾಪುರ್ ಟೋಲ್ ಪ್ಲಾಜಾ ಬಳಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಹಿಂಬದಿಯಿಂದ ಟ್ರಕ್ ಬಲವಾಗಿ ಡಿಕ್ಕಿ ಹೊಡಿದಿದೆ. ಟ್ರಕ್ ಚಾಲಕ ಅತಿ ವೇಗದಿಂದ ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟೆಂಪೋ ಪಲ್ಟಿ: ಗೌರಿಬಿದನೂರು ರಸ್ತೆಯಲ್ಲಿ ಮದ್ಯದ ಹೊಳೆ- ಬಾಟಲಿಗಳ ರಾಶಿಯಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ
ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ, ಸಂವಿಧಾನ ತಜ್ಞ ರಾಮಾ ಜೋಯಿಸ್‌ ಇನ್ನಿಲ್ಲ
ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

ಹಾಲಿನ ವ್ಯವಹಾರ ನಡೆಸಲು 30 ಕೋಟಿ ರೂ. ಹೆಲಿಕಾಪ್ಟರ್‌ ಖರೀದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + five =
Remember me
