ಕಾಬೂಲ್:ಉಗ್ರರು ನಡೆಸಿರುವ ಟ್ರಕ್‌ ಬಾಂಬ್‌ ದಾಳಿಗೆ 21 ಮಂದಿ ಬಲಿಯಾಗಿದ್ದು 80ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ಗೆಸ್ಟ್‌ಹೌಸ್‌ ಒಂದನ್ನು ಗುರಿಯಾಗಿಸಿಕೊಂಡು ಉಗ್ರರು ಈ ಕೃತ್ಯ ಎಸಗಿದ್ದಾರೆ.
ಲೋಗರ್ ಪ್ರಾಂತ್ಯದ ರಾಜಧಾನಿ ಪುಲ್-ಎ-ಆಲಮ್‍ನಲ್ಲಿ ಇರುವ ಅತಿಥಿಗೃಹವನ್ನು ಉಗ್ರರು ಟಾರ್ಗೆಟ್‌ ಮಾಡಿಕೊಂಡಿದ್ದರು. ಬಡ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತಂಗಲು ಈ ಗೆಸ್ಟ್‌ಹೌಸ್‌ ನಿರ್ಮಿಸಲಾಗಿದೆ. ದೇಶದ ನಾನಾ ಮೂಲೆಗಳಿಂದ ಇಲ್ಲಿ ಬಂದು ತಂಗಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿ ತೊಡಗಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನವರು ಇದೇ ವಿದ್ಯಾರ್ಥಿಗಳಾಗಿದ್ದಾರೆ. ಇಲ್ಲಿ ಬಾಂಬ್ ತುಂಬಿದ ಟ್ರಕ್ ಡಿಕ್ಕಿ ಹೊಡೆಸಿದ ಹಿನ್ನಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಮೂಲಗಳು ಹೇಳಿವೆ.
ಸರ್ಕಾರ ಉಚಿತವಾಗಿ ನಡೆಸುತ್ತಿರುವ ಗೆಸ್ಟ್‌ಹೌಸ್‌ ಇದಾಗಿದೆ. ಆದರೆ, ಇದುವರೆಗೂ ಯಾವುದೆ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಕೃತ್ಯದ ಹಿಂದೆ ತಾಲಿಬಾನ್ ಉಗ್ರರ ಕೈವಾಡವಿದೆ ಎಂದು ಆಂತರಿಕ ಸಚಿವಾಲಯ ಆರೋಪಿಸಿದೆ.
ಮೇ.1ರೊಳಗೆ ದೇಶದಲ್ಲಿರುವ ಅಮೆರಿಕ ಮತ್ತು ನ್ಯಾಟೋ ಪಡೆಗಳು ಹಿಂತಿರುಗಬೇಕು. ಇಲ್ಲದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅದರದ್ದೇ ಕೈವಾಡ ಇರಬೇಕು ಎನ್ನಲಾಗಿದೆ.
75 ಕೋಟಿ ರೂ. ಸಂಬಳದಿಂದ ಸನ್ಯಾಸದತ್ತ… ದೀಕ್ಷೆ ಪಡೆದ ಮುಕೇಶ್‌ ಅಂಬಾನಿ ಬಲಗೈ ಪ್ರಕಾಶ್‌ ಷಾ….

ಕೊಳೆಗೇರಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತ: ಒಂದೇ ಕುಟುಂಬದ ಆರು ಮಂದಿ ಸಜೀವ ದಹನ

ಅವನನ್ನು ಬಿಟ್ಟುಬಿಟ್ರೆ ಸತ್ತೇಹೋಗಿಬಿಡ್ತಾನೆ ಅಂತ ಮೂರ್ಖರ ಹಾಗೆ ಹೇಳ್ತಿದ್ದಿಯಲ್ಲಾ! ಏನ್‌ ಹೇಳೋದು ನಿಮ್ಮಂಥವರಿಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
