ವಾಷಿಂಗ್ಟನ್​:ಇನ್ನೇನು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.
ಈ ನಡುವೆಯೇ, ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಅವರ ವಕೀಲರಾಗಿದ್ದ ಮೈಕೆಲ್ ಕೋಹೆನ್ ಪುಸ್ತಕ ಬರೆದಿದ್ದು, ಅದೀಗ ಭಾರಿ ವಿವಾದ ಸೃಷ್ಟಿಸಿದೆ. ಪುಸ್ತಕದ ಹೆಸರು Disloyal: The True Story of the Former Personal Attorney to President Donald J. Trump (ವಿಶ್ವಾಸದ್ರೋಹಿ: ಡೊನಾಲ್ಡ್​ ಜೆ. ಟ್ರಂಪ್​ ಅವರ ಮಾಜಿ ವೈಯಕ್ತಿಕ ವಕೀಲನಿಂದ ನಿಜವಾದ ಕಥೆ).
ಟ್ರಂಪ್​ ರಸಿಕ. ಆದರೆ ನನ್ನ 15 ವರ್ಷದ ಮಗಳ ಮೇಲೆಯೇ ಅವರು ಕಣ್ಣುಹಾಕಿದ್ದರು. ನಿಮ್ಮ ಮಗಳು ತುಂಬಾ ಹಾಟ್​ ಇದ್ದಾಳೆ. ಅವಳು ಇಷ್ಟು ಹಾಟ್​ ಆಗಿದ್ದು ಯಾವಾಗ ಎಂದು ಟ್ರಂಪ್​ ಕೇಳಿದ್ದರು. ನನಗೆ ತೀವ್ರ ಮುಜುಗರವಾಗಿತ್ತು. ಅವಳು ನನ್ನ ಮಗಳು ಸರ್​, ಇನ್ನೂ 15 ವರ್ಷ ಅವಳಿಗೆ ಅಂದಿದ್ದೆ. ಆದರೂ ಟ್ರಂಪ್​ ಆಕೆಯ ಮೇಲೆ ಕಣ್ಣುನೆಟ್ಟಿದ್ದರು ಎಂದು ಮೈಕೆಲ್​ ಪುಸ್ತಕದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ
ಟ್ರಂಪ್​ ಹಿಂದೆ ತಮ್ಮ ಮಗಳನ್ನೇ ಬಿಟ್ಟಿರಲಿಲ್ಲ. ಆಕೆಯ ಸೌಂದರ್ಯವನ್ನು ವರ್ಣಿಸಿದ್ದರು. ವಿಶ್ವದ ಶ್ರೇಷ್ಠ ಸುಂದರಿ ಇವಳು. ನಾನು ಅವಳನ್ನು ಸೃಷ್ಟಿ ಮಾಡಿದ್ದೇನೆ. ಅವಳು ನನ್ನ ಮಗಳು ಅಲ್ಲದಿದ್ದರೆ ನಾನೇ ಮದುವೆಯಾಗುತ್ತಿದ್ದೆ. ಈಕೆ 6 ಅಡಿ ಎತ್ತರ ಹೊಂದಿದ್ದು, ಸುಂದರ ದೇಹವನ್ನು ಹೊಂದಿದ್ದಾಳೆ ಎಂದು ಸ್ವಂತ ಮಗಳ ಮೇಲೆ ಕೆಟ್ಟದ್ದಾಗಿ ಮಾತನಾಡಿದ್ದರು ಎಂದು ಕೋಹೆನ್​ ಹೇಳಿದ್ದಾರೆ.
ಡೊನಾಲ್ಡ್‌ ಟ್ರಂಪ್‌ ಅವರ ಅಣ್ಣನ ಮಗಳು ಮೇರಿ ಕೂಡ ಟ್ರಂಪ್ ಕುರಿತು ಈ ಹಿಂದೆ ಪುಸ್ತಕ ಬರೆದಿದ್ದಾರೆ.​ಡೊನಾಲ್ಡ್ ಟ್ರಂಪ್​ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಬಿಂಬಿಸಿದ್ದಾರೆ.ಈ ಪುಸ್ತಕದ ಹೆಸರು ‘ಟೂ ಮಚ್ ಆ್ಯಂಡ್‌ ನೆವರ್‌ ಇನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ (ಅತಿಯಾದ ಹಾಗೂ ಎಂದೂ ಮುಗಿಯದ: ಹೇಗೆ ನನ್ನ ಕುಟುಂಬ ವಿಶ್ವದ ಅತ್ಯಂತ ಭಯಾನಕ ಮನುಷ್ಯನನ್ನು ಸೃಷ್ಟಿಸಿದೆ).
ಕೋಹೆನ್​ ಬರೆದಿರುವ ಈ ಪುಸ್ತಕವನ್ನೀಗ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ವಕೀಲ ಮಾಡಿರುವ ಈ ಆರೋಪವನ್ನು ಶ್ವೇತಭವನ ತಳ್ಳಿಹಾಕಿದೆ.
ಚಂದ್ರಮನ ಸುತ್ತಲು ಬಿಡಲಿಲ್ಲ ಕರೊನಾ: ಮುಂದಿನ ವರ್ಷ ಚಂದ್ರಯಾನ-3

ನಟಿ ಕಂಗನಾಗೆ ಕೇಂದ್ರದಿಂದ ‘ವೈ ಪ್ಲಸ್’​ ಭದ್ರತೆ: ಏನಿದರ ವಿಶೇಷತೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + six =
Remember me
