ಪುಣೆ:ಶಬರಿಮಲೆ ದೇವಾಲಯಕ್ಕೆ ಪ್ರವೇಶದ ವಿಷಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಈಗ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಕಿಡಿ ಕಾರಿದ್ದಾರೆ.ಭಾರತೀಯ ಸಂಸ್ಕೃತಿಯಂತೆ, ಸಂಪ್ರದಾಯಬದ್ಧವಾಗಿ ವಸ್ತ್ರ ಧರಿಸಿ ಬರಬೇಕೆಂದು ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಬೋರ್ಡ್ ಹಾಕಲಾಗಿದೆ. ಇದಕ್ಕೆ ತೃಪ್ತಿ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಅರ್ಚಕರು ಅರೆಬೆತ್ತಲೆಯಲ್ಲಿ ಇರುತ್ತಾರೆ. ಅರ್ಧಂಬರ್ಧ ಡ್ರೆಸ್​ ಹಾಕಿರುತ್ತಾರೆ, ಹಾಗಿದ್ದರೆ ಭಕ್ತರಿಗೇಕೆ ಸಂಪ್ರದಾಯದ ಉಡುಗೊರೆ ಎನ್ನುವುದು ಅವರ ಪ್ರಶ್ನೆ.ಅರ್ಚಕರಿಗಿಲ್ಲದ ವಸ್ತ್ರ ಸಂಹಿತೆ ಭಕ್ತರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ತೃಪ್ತಿ, ದೇವಾಲಯ ಇಂತಹ ಬೋರ್ಡ್ ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದಿದ್ದಾರೆ.ದೇವಾಲಯ ಟ್ರಸ್ಟ್ ಈ ಫಲಕಗಳನ್ನು ತೆಗೆಯದಿದ್ದರೇ ನಾವೇ ಶಿರಡಿಗೆ ಹೋಗಿ ಫಲಕಗಳನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಸಿಇಓ, ನಾವು ವಸ್ತ್ರ ಸಂಹಿತೆ ಹೇರಿಲ್ಲ, ಬದಲಿಗೆ ಸಂಪ್ರದಾಯಬದ್ಧವಾಗಿರುವ ಡ್ರೆಸ್​ ಹಾಕಿ ಎಂದಷ್ಟೇ ಹೇಳಿರುವುದು, ಅಸಭ್ಯ ಡ್ರೆಸ್​ಗಳನ್ನು ದೇವಾಲಯಕ್ಕೆ ಹಾಕಿಕೊಂಡು ಬರುವುದನ್ನು ನೋಡಿದ್ದೇವೆ. ಆದ್ದರಿಂದ ಈ ರೀತಿ ಮನವಿ ಮಾಡಿಕೊಳ್ಳಲಾಗಿದೆಯಷ್ಟೇ ಎಂದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
