ಪುಣೆ:ಶಬರಿಮಲೆ ದೇವಾಲಯಕ್ಕೆ ಪ್ರವೇಶದ ವಿಷಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಈಗ ಶಿರಡಿ ಸಾಯಿಬಾಬಾ ದೇವಾಲಯದ ಕುರಿತು ಮತ್ತೊಂದು ವಿವಾದ ಮಾಡಲು ಹೋಗಿ ಬಂಧನಕ್ಕೆ ಒಳಗಾಗಿದ್ದಾರೆ.
ಭಾರತೀಯ ಸಂಸ್ಕೃತಿಯಂತೆ, ಸಂಪ್ರದಾಯಬದ್ಧವಾಗಿ ವಸ್ತ್ರ ಧರಿಸಿ ಬರಬೇಕೆಂದು ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಬೋರ್ಡ್ ಹಾಕಲಾಗಿದೆ. ಇದಕ್ಕೆ ತೃಪ್ತಿ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಅರ್ಚಕರು ಅರೆಬೆತ್ತಲೆಯಲ್ಲಿ ಇರುತ್ತಾರೆ. ಅರ್ಧಂಬರ್ಧ ಡ್ರೆಸ್​ ಹಾಕಿರುತ್ತಾರೆ, ಹಾಗಿದ್ದರೆ ಭಕ್ತರಿಗೇಕೆ ಸಂಪ್ರದಾಯದ ಉಡುಗೊರೆ ಎನ್ನುವುದು ಅವರ ಪ್ರಶ್ನೆ.
ಅರ್ಚಕರಿಗಿಲ್ಲದ ವಸ್ತ್ರ ಸಂಹಿತೆ ಭಕ್ತರಿಗೇಕೆ ಎಂದು ಕಳೆದ ವಾರ ಅವರು ಪ್ರಶ್ನಿಸಿದ್ದರು. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ತೃಪ್ತಿ, ದೇವಾಲಯ ಇಂತಹ ಬೋರ್ಡ್ ಹಾಕುವ ಮೂಲಕ ಭಕ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ ಎಂದಿದ್ದರು.
ಇದನ್ನೂ ಓದಿ:12 ವರ್ಷದ ಬಾಲಕನನ್ನು ಎಳೆದೊಯ್ದ ಗಾಳಿಪಟ- ಭಯಾನಕ ವಿಡಿಯೋ ಇಲ್ಲಿದೆ ನೋಡಿ…
ಈ ಸಂಬಂಧ ಪ್ರತಿಕ್ರಿಯಿಸಿದ್ದ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಸಿಇಓ, ನಾವು ವಸ್ತ್ರ ಸಂಹಿತೆ ಹೇರಿಲ್ಲ, ಬದಲಿಗೆ ಸಂಪ್ರದಾಯಬದ್ಧವಾಗಿರುವ ಡ್ರೆಸ್​ ಹಾಕಿ ಎಂದಷ್ಟೇ ಹೇಳಿರುವುದು, ಅಸಭ್ಯ ಡ್ರೆಸ್​ಗಳನ್ನು ದೇವಾಲಯಕ್ಕೆ ಹಾಕಿಕೊಂಡು ಬರುವುದನ್ನು ನೋಡಿದ್ದೇವೆ. ಆದ್ದರಿಂದ ಈ ರೀತಿ ಮನವಿ ಮಾಡಿಕೊಳ್ಳಲಾಗಿದೆಯಷ್ಟೇ ಎಂದಿದ್ದರು.
ಆದರೆ ಇದಕ್ಕೆ ಜಗ್ಗದ ತೃಪ್ತಿ ಗಲಾಟೆ ಮಾಡುವುದಕ್ಕಾಗಿಯೇ ಇಂದು ತೆರಳಿದ್ದರು. ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರು ತೃಪ್ತಿ ನೇತೃತ್ವದಲ್ಲಿ ಫಲಕ ಕಿತ್ತುಹಾಕಲು ತೆರಳಿದ್ದರು. ಎಲ್ಲರನ್ನೂ ಅಹ್ಮದ್‌ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
‘ವಿವಾದಾತ್ಮಕ ಸಂದೇಶವನ್ನು ಹೊಂದಿರುವ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ತಪ್ಪಿದಲ್ಲಿ ಡಿ. 10ರಂದು ಸಂಘಟನೆಯ ಸದಸ್ಯರೊಂದಿಗೆ ತೆರಳಿ ಆ ಫಲಕವನ್ನು ತೆರವು ಮಾಡುವುದಾಗಿ’ ದೇಸಾಯಿ ಈ ಮೊದಲು ಎಚ್ಚರಿಕೆ ನೀಡಿದ್ದರು. ಅದರಂತೆ ಅವರು ತೆರಳಲು ಮುಂದಾಗಿದ್ದರು.
ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ದೇಸಾಯಿಗೆ ಮಂಗಳವಾರ ನೋಟಿಸ್‌ ನೀಡಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರು, ಡಿ.8ರಿಂದ 11ರ ಮಧ್ಯರಾತ್ರಿ 11ರ ವರೆಗೆ ಅಹ್ಮದ್‌ನಗರ ಜಿಲ್ಲೆಯ ಶಿರಡಿ ಪಟ್ಟಣವನ್ನು ಪ್ರವೇಶಿಸಬಾರದು ಎಂದಿದ್ದರು. ಆದರೂ ಅದನ್ನು ಕಡೆಗಣಿಸಿ ತೆರಳಲು ಮುಂದಾಗಿದ್ದರು.
ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?

ಜಗತ್ತಿನ ನಾಲ್ಕನೇ ಸಿರಿವಂತನೀಗ ಅಜ್ಜ: ಗಂಡುಮಗುವಿನ ತಾತನಾದ ಮುಕೇಶ್​ ಅಂಬಾನಿ

ಮೊದಲ ಪತ್ನಿಯೂ ಬೇಡ… ನೀವ್ಯಾರೂ ಬೇಡ… ಎಂದು ಎಲ್ಲರನ್ನೂ ಹೊರಕ್ಕಿಟ್ಟ ಇಮ್ರಾನ್​ ಖಾನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
