ರೋಮ್:ಟಿವಿ ವರದಿಗಾರ್ತಿಯೊಬ್ಬಳು ಫುಟ್‌ಬಾಲ್‌ ಪಂದ್ಯದ ಕುರಿತು ನೇರಪ್ರಸಾರ ಮಾಡುತ್ತಿದ್ದ ವೇಳೆಯೇ ವ್ಯಕ್ತಿಯೊಬ್ಬ ಆಕೆಯ ಹಿಂಬದಿಯಿಂದ ಬಂದು ಅಸಭ್ಯವಾಗಿ ವರ್ತಿಸಿ ನಂತರ ಕೈಮೇಲೆ ಉಗುಳಿ, ಹಿಂಭಾಗದ ಖಾಸಗಿ ಅಂಗಕ್ಕೆ ಹೊಡೆದಿರುವ ಘಟನೆ ಇಟಲಿಯ ಎಂಪೋಲಿಯಾದ ಕಾರ್ಲೋ ಕ್ಯಾಸ್ಟೆಲ್ಲಾನನಲ್ಲಿ ನಡೆದಿದೆ. ಇಲ್ಲಿಯ ಕ್ರೀಡಾಂಗಣದ ಎದುರು ಈ ಘಟನೆ ಸಂಭವಿಸಿದೆ.
ಟೋಸ್ಕಾನಾ ಟಿವಿಯ ವರದಿಗಾರ್ತಿ ಬೆಕಾಗ್ಲಿಯಾ ಪಂದ್ಯ ಮುಗಿದ ಮೇಲೆ ಅದರ ನೇರ ಪ್ರಸಾರ ಮಾಡುತ್ತಿದ್ದರು. ಪಂದ್ಯದ ಕುರಿತು ಅಭಿಮಾನಿಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ಈ ವೇಳೆ ಫುಟ್‌ಬಾಲ್ ಅಭಿಮಾನಿಯೊಬ್ಬ ಬಂದು ಬಂದು ಈ ರೀತಿ ವರ್ತಿಸಿದ್ದಾನೆ.
ಇದರಿಂದ ತೀವ್ರವಾಗಿ ಆಘಾತಗೊಂಡ ವರದಿಗಾರ್ತಿ, ಆತನಿಗೆ ಬೈದಿದ್ದಾಳೆ. ಆಕೆಗೆ ಮುಜುಗರವಾದುದ್ದನ್ನು ಕಂಡ ನ್ಯೂಸ್‌ ರೀಡರ್‌ ನೇರ ಪ್ರಸಾರದಲ್ಲಿಯೇ ವರದಿಗಾರ್ತಿಯನ್ನು ಸಮಾಧಾನ ಪಡಿಸಿದ್ದಾನೆ. ಇಡೀ ಘಟನೆ ನೇರಪ್ರಸಾರದಲ್ಲಿ ಪ್ರಸಾರಗೊಂಡಿದೆ.
ಈ ಕೃತ್ಯಕ್ಕೆ ಭಾರಿ ಖಂಡನೆ ವ್ಯಕ್ತವಾಗಿದೆ. ಬೆಕಾಗ್ಲಿಯಾ ಈ ವ್ಯಕ್ತಿ ವಿರುದ್ಧ ಕೇಸ್‌ ದಾಖಲಿಸಿದ್ದಳು. ಕೂಡಲೇ ಆತನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ ಪೊಲೀಸರು. ಆತನ ವಿರುದ್ಧ ಕೇಸ್‌ ದಾಖಲಾಗಿದೆ. ಈ ಪ್ರಕರಣದ ಸಂಪೂರ್ಣ ವೆಚ್ಚ ತಾನು ಭರಿಸುವುದಾಗಿ ಟೋಸ್ಕಾನಾ ಚಾನೆಲ್‌ ಹೇಳಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೆಕಾಗ್ಲಿಯಾ, ‘ನನಗೆ ಇಲ್ಲಿ ಏನಾಯಿತು ಎಂಬುವುದು ಮುಖ್ಯವಲ್ಲ. ನಾನು ದೂರು ಕೊಟ್ಟಾಗ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾದುದ್ದಕ್ಕೆ ಕಾರಣ, ಅವೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗುತ್ತಿತ್ತು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಹಲ್ಲೆ, ಮಾನಭಂಗಗಳನ್ನು ಚಿತ್ರೀಕರಿಸಲು ಯಾವುದೇ ಕ್ಯಾಮೆರಾ ಇರುವುದಿಲ್ಲ. ಅಂಥವರು ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ಬರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ’ ಎಂದಿದ್ದಾರೆ.
‘ನಿನಗಾಗಿ ನಾನು ಬದುಕಿದೆ… ನನಗೇಕೆ ಅನ್ಯಾಯ ಮಾಡಿದೆ?’ ನಟಿ ಕಂಗನಾರ ನಿಗೂಢ ಪೋಸ್ಟ್‌! ಕೈಕೊಟ್ಟಿದ್ದು ಯಾರು?

ಪುನೀತ್‌ ಸರ್‌, ಕೈಮುಗಿದು ಕೇಳ್ಕೋತೇನೆ… ನಿಮ್ಮ ನೆನಪಲ್ಲೇ ಕಾಣೆಯಾಗಿರೋ ನನ್ನ ಮಗನನ್ನು ಮಡಿಲಿಗೆ ಹಾಕಿ ಸರ್‌…

Sign in to your account
Please enter an answer in digits:12 − 11 =
Remember me
